
ರೂಪಾ ಹಾಗೂ ಸಿಂಧೂರಿ ವರ್ಗಾವಣೆ…ಮಹಿಳಾ ಅಧಿಕಾರಿಗಳ ಜಟಾಪಟಿಗೆ ಬ್ರೇಕ್ ಹಾಕಿದ ಸರ್ಕಾರ…
- TV10 Kannada Exclusive
- February 21, 2023
- No Comment
- 117

ರೂಪಾ ಹಾಗೂ ಸಿಂಧೂರಿ ವರ್ಗಾವಣೆ…ಮಹಿಳಾ ಅಧಿಕಾರಿಗಳ ಜಟಾಪಟಿಗೆ ಬ್ರೇಕ್ ಹಾಕಿದ ಸರ್ಕಾರ…
Tv10 ಕನ್ನಡ
ಕೊನೆಗೂ ಸರ್ಕಾರ ಎಚ್ಚೆತ್ತುಕೊಂಡಿದೆ.ಸರ್ಕಾರಕ್ಕೆ ಮುಜುಗರ ತಂದ ಇಬ್ಬರು ಮಹಿಳಾ ಅಧಿಕಾರಿಗಳು ವರ್ಗಾವಣೆಯಾಗಿದ್ದಾರೆ.ಇವರ ಜೊತೆಗೆ ರೂಪಾ ಪತಿ ಮುನಿಶ್ ಮುದ್ಗಿಲ್ ಗೂ ವರ್ಗಾವಣೆಯಾಗಿದೆ.ಕೆಲವು ದಿನಗಳಿಂದ ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ನಡುವೆ ಬಹಿರಂಗವಾಗಿ ಜಟಾಪಟಿ ನಡೆಯಿತು.ರೋಹಿಣಿ ಸಿಂಧೂರಿ ರವರ ವೈಯುಕ್ತಿಕ ವಿಚಾರಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದ ರೂಪ ಸಾರ್ವಜನಿಕ ವಲಯದಲ್ಲಿ ಸಂಚಲನಕ್ಕೆ ಕಾರಣರಾಗಿದ್ದರು.ಹಿಂದೂ ರಿಲಿಜಿಯಸ್ ಅಂಡ್ ಚಾರಿಟೆಬಲ್ ಡೋಮೆಂಟ್ ನ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಕರ್ನಾಟಕ ರಾಜ್ಯ ಹ್ಯಾಂಡಿಕ್ರಾಫ್ಟ್ಸ್ ಅಂಡ್ ಡೆವಲೆಪ್ಮೆಂಟ್ ಕಾರ್ಪೊರೇಷನ್ ನ ಆಯುಕ್ತರಾಗಿದ್ದ ಡಿ.ರೂಪಾ ಇಬ್ಬರನ್ನೂ ಸರ್ಕಾರ ವರ್ಗಾವಣೆ ಮಾಡಿದೆ.ಇವರಿಬ್ಬರ ಬೀದಿ ಜಗಳದಲ್ಲಿ ರೂಪಾ ಪತಿ ಐಪಿಎಸ್ ಮುನೀಶ್ ಮುದ್ಗಿಲ್ ಹೆಸರೂ ಥಳುಕು ಹಾಕಿದ ಹಿನ್ನಲೆ ಅವರನ್ನೂ ಸಹ ಸರ್ಕಾರ ವರ್ಗಾವಣೆ ಮಾಡಿದೆ…