- February 22, 2023
ರಾಖಿ ಸಾವಂತ್ ಪತಿ ಆದಿಲ್ ಖಾನ್ ಮೈಸೂರು ಪೊಲೀಸ್ ಕಸ್ಟಡಿಗೆ…5 ದಿನಗಳ ಕಾಲ ವಿಚಾರಣೆ…

ರಾಖಿ ಸಾವಂತ್ ಪತಿ ಆದಿಲ್ ಖಾನ್ ಮೈಸೂರು ಪೊಲೀಸ್ ಕಸ್ಟಡಿಗೆ…5 ದಿನಗಳ ಕಾಲ ವಿಚಾರಣೆ…
ಮೈಸೂರು,ಫೆ23,Tv10 ಕನ್ನಡ :
ಬಾಲಿವುಡ್ ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿಯನ್ನ ಹೆಚ್ಚಿನ ವಿಚಾಣೆಗಾಗಿ ಮೈಸೂರು ಪೊಲೀಸರ ಕಸ್ಟಡಿಗೆ ನೀಡಲಾಗಿದೆ.ಮೈಸೂರಿನಲ್ಲಿ ವಿದೇಶಿ ಮಹಿಳೆಗೆ ವಂಚನೆ ಹಾಗೂ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಆದಿಲ್ ಖಾನ್ ಗೆ
ಮೈಸೂರಿನ ವಿ ವಿ ಪುರಂ ಠಾಣಾ ಪೊಲೀಸರು ಆದಿಲ್ ಖಾನ್ ನನ್ನು 6 ನೇ ಅಪರ ಸಿವಿಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಈಗಾಗಲೇ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ಧ ಆದಿಲ್ ಖಾನ್ ಮೇಲೆ ಮೈಸೂರಿನಲ್ಲಿ ಮತ್ತೊಂದು ಎಫ್ಐಆರ್ ದಾಖಲು ಹಿನ್ನೆಲೆಯಲ್ಲಿ ಇಂದು ವಿ ವಿ ಪುರಂ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದರು.ನ್ಯಾಯಾಲಯದಲ್ಲಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು.
ಈ ವೇಳೆ ಹೆಚ್ಚಿನ ವಿಚಾರಣೆಗಾಗಿ ಆದಿಲ್ ಖಾನ್ ದುರಾನಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಆದೇಶಿಸಿದರು. ಅದಿಲ್ ಖಾನ್ ದುರಾನಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮುಂದಿನ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಲಾಗಿದೆ.
ಫೆಬ್ರವರಿ 27ರ ವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದುಕೊಂಡು ಆದಿಲ್ ಖಾನ್ ವಿಚಾರಣೆ ಎದುರಿಸಬೇಕಿದೆ…