
ಕಾಡು ಹಂದಿ ದಾಳಿ…ಗಾಯಗೊಂಡ ರೈತ…
- TV10 Kannada Exclusive
- February 26, 2023
- No Comment
- 134
ಹುಣಸೂರು,ಫೆ26,Tv10 ಕನ್ನಡ
ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡುಹಂದಿ ದಾಳಿ ನಡೆಸಿದ ಘಟನೆ ಹುಣಸೂರು ತಾಲೂಕು ಕೊಳಗಟ್ಟ ಗ್ರಾಮದಲ್ಲಿ ನಡೆದಿದೆ.ಘಟನೆಯಲ್ಲಿ ರೈತ ಸೋಮಯ್ಯ ಗಾಯಗೊಂಡಿದ್ದಾರೆ.ಇಂದು ಬೆಳಿಗ್ಗೆ ಸುಮಾರು 8 ಗಂಟೆ ಸಮಯದಲ್ಲಿ ಸೋಮಯ್ಯ ರವರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಕಾಡುಹಂದಿ ದಾಳಿ ಮಾಡಿದೆ. ಸೋಮಯ್ಯ ರವರ ಬಲಗಾಲಿಗೆ ಗಾಯವಾಗಿದೆ. ಸೋಮಯ್ಯ ರನ್ನ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…