
ಕಾಯರ್ ಕಾರ್ಖಾನೆಗೆ ಬೆಂಕಿ…ಒಂದು ಕೋಟಿಗೂ ಅಧಿಕ ಪದಾರ್ಥಗಳು ಸುಟ್ಟು ಭಸ್ಮ…
- TV10 Kannada Exclusive
- February 25, 2023
- No Comment
- 160

ಕಾಯರ್ ಕಾರ್ಖಾನೆಗೆ ಬೆಂಕಿ…ಒಂದು ಕೋಟಿಗೂ ಅಧಿಕ ಪದಾರ್ಥಗಳು ಸುಟ್ಟು ಭಸ್ಮ…

ಹುಣಸೂರು,ಫೆ25,Tv10 ಕನ್ನಡ
ತೆಂಗಿನ ನಾರಿನಿಂದ ಪದಾರ್ಥಗಳನ್ನ ತಯಾರಿಸುವ ಕಾಯರ್ ಕಾರ್ಖಾನೆಗೆ ಬೆಂಕಿ ಬಿದ್ದ ಪರಿಣಾಮ ಒಂದು ಕೋಟಿಗೂ ಅಧಿಕ ಪ್ರಮಾಣದ ಖಚ್ಚಾ ಹಾಗೂ ಸಿದ್ದಪಡಿಸಿದ ಪದಾರ್ಥಗಳು ಸುಟ್ಟು ಭಸ್ಮವಾದ ಘಟನೆ ಹುಣಸೂರು ತಾಲೂಕಿನ ತೆಂಕನಕೋಪಲು ಗ್ರಾಮದಲ್ಲಿ ನಡೆದಿದೆ.ಹೆಸೇನ್ ಪುರ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಎಂಬುವರಿಗೆ ಸೇರಿದ ಶ್ರೀ ಸಿದ್ದೇಶ್ವರ ಕಾಯರ್ ಫ್ಯಾಕ್ಟರಿ ಹಾಗೂ ಶ್ರೀ ಮುರಳಿ ಕೋಕೋ ಪೀಟ್ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ. ಫ್ಯಾಕ್ಟರಿ ಬಳಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಂದ ಹಾರದ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಇಡೀ ಫ್ಯಾಕ್ಟರಿಗೆ ಕೆನ್ನಾಲಿಗೆ ಹರಡಿದೆ.2 ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಬೃಹತ್ ಕಾರ್ಖಾನೆ ಸಂಪೂರ್ಣ ನಾಶವಾಗಿದೆ.ಕಾರ್ಖಾನೆಯಲ್ಲಿ 10 ಮಂದಿ ಕೆಲಸ ಮಾಡುತಿದ್ದು ಇಂದು ರಜೆ ಇದ್ದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.ಮಾಹಿತಿ ಅರಿತ ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದರೂ ನಾರಿನ ಪದಾರ್ಥವಾದ ಹಿನ್ನಲೆ ಕಾರ್ಖಾನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ…