ಕರಾಟೆ ಚಾಂಪಿಯನ್ ಷಿಪ್ ನಲ್ಲಿ ಪದಕಗಳ ಕೊಳ್ಳೆ ಹೊಡೆದ ಮೈಸೂರು ಚಿಣ್ಣರು…
- TV10 Kannada Exclusive
- February 28, 2023
- No Comment
- 277
ಕರಾಟೆ ಚಾಂಪಿಯನ್ ಷಿಪ್ ನಲ್ಲಿ ಪದಕಗಳ ಕೊಳ್ಳೆ ಹೊಡೆದ ಮೈಸೂರು ಚಿಣ್ಣರು…
ಮೈಸೂರು,ಫೆ28,Tv10 ಕನ್ನಡ
ಮುಂಬೈ ನಲ್ಲಿ ಇತ್ತೀಚೆಗೆ ನಡೆದ 28 ನೇ ಯೂರೋ ಏಷಿಯಾ ಅಂತರಾಷ್ಟ್ರೀಯ WFSKO ಓಪನ್ ಕರಾಟೆ ಚಾಂಪಿಯನ್ ಷಿಪ್ ನಲ್ಲಿ ಮೈಸೂರಿನ ಚಿಣ್ಣರು ಪದಕಗಳ ಕೊಳ್ಳೆ ಹೊಡೆದಿದ್ದಾರೆ. ಮೈಸೂರಿನ International Itosukai shotokan karate association ಶಾಲೆ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಎರಡು ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ 8 ಚಿನ್ನದ ಪದಕ,8 ಬೆಳ್ಳಿಯ ಪದಕ,ಒಂದು ಕಂಚಿನ ಪದಕ ಪಡೆದು ಮೈಸೂರಿಗೆ ಕೀರ್ತಿ ತಂದಿದ್ದಾರೆ.ರವಿಕುಮಾರ್ ರವರ ತರಬೇತಿಯಲ್ಲಿ ಹಾಗೂ IISKA ನ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ಗದರ್ಶನದಲ್ಲಿ ಕರಾಟೆ ಪಟುಗಳು ಸಾಧನೆ ತೋರಿದ್ದಾರೆ.ರುಚಿತ ಪಿ,ಭವಿಷ್ ಗೌಡ,ತೇಜಸ್ ಗೌಡ,ಗೋವರ್ಧನ್,ರೋಹಿತ್ ಗೌಡ,ಧನುಷ್,ಶ್ರೀರಕ್ಷಾ,ವೈಷ್ಣವಿ ಹಾಗೂ ಶೋಭಿತಾ ಸಾಧನೆ ಮಾಡಿದ ಕರಾಟೆ ಪಟುಗಳು…