
ಕ್ಯಾಂಟರ್ ಹಾಗೂ ಬೈಕ್ ನಡುವೆ ಢಿಕ್ಕಿ…ಓರ್ವ ಸಾವು…ಮತ್ತೊಬ್ಬ ಗಂಭೀರ…
- Crime
- March 1, 2023
- No Comment
- 116

ಕ್ಯಾಂಟರ್ ಹಾಗೂ ಬೈಕ್ ನಡುವೆ ಢಿಕ್ಕಿ…ಓರ್ವ ಸಾವು…ಮತ್ತೊಬ್ಬ ಗಂಭೀರ…
ಹುಣಸೂರು,ಮಾ1,Tv10 ಕನ್ನಡ
ಕ್ಯಾಂಟರ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಹುಣಸೂರು ತಾಲೂಕು ಯಶೋಧರಪುರ ಬಳಿ ನಡೆದಿದೆ.ರಸ್ತೆಯಲ್ಲಿ ಹಂಪ್ ಇದ್ದ ಕಾರಣ ಬೈಕ್ ಸವಾರ ಬೈಕ್ ವೇಗವನ್ನ ತಗ್ಗಿಸಿದ್ದಾರೆ.ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ಬೈಕ್ ಗೆ ಢಿಕ್ಕಿ ಹೊಡೆದಿದೆ.ಘಟನೆಯಲ್ಲಿ ಬೈಕ್ ನಲ್ಲಿದ್ದ ಓರ್ವ ಸಾವನ್ನಪ್ಪಿದ್ದು ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.ಗಾಯಾಳುವನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ…