ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…
- Crime
- October 12, 2026
- No Comment
- 27
ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…
ಮೈಸೂರು,ಅ12,Tv10 ಕನ್ನಡ
ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24 ಗಂಟೆಯೊಳಗೆ ಲಷ್ಕರ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ರಾಯಚೂರಿನ ನಿವಾಸಿ ಈರಮ್ಮ(31) ಮೃತ ಮಹಿಳೆ.ಕೃತ್ಯವೆಸಗಿದ ಗುಲ್ಬರ್ಗಾದ ಸಿದ್ದರಾಮ (28) ಇದೀಗ ಪೊಲೀಸರ ಅತಿಥಿ.ಫೇಸ್ ಬುಕ್ ಮೂಲಕ ಇಬ್ಬರಿಗೂ ಪರಿಚಯವಾಗಿದೆ.ಅಕ್ಟೋಬರ್ 7 ರಂದು ಮೈಸೂರಿಗೆ ಬಂದ ಜೋಡಿ ಹಳ್ಳದಕೇರಿಯಲ್ಲಿರುವ ಗೋಲ್ಡನ್ ರೇ ಲಾಡ್ಜ್ ನಲ್ಲಿ ಕೊಠಡಿ ಬಾಡಿಗೆ ಪಡೆದು ತಂಗಿದ್ದಾರೆ.ಎರಡು ದಿನವಾದ್ರೂ ಕೊಠಡಿ ಬಾಗಿಲು ತೆರೆಯದ ಹಿನ್ನಲೆ ಪರಿಶೀಲನೆ ನಡೆಸಿದ ಸಿಬ್ಬಂದಿಗಳಿಗೆ ಮಹಿಳೆ ಕೊ* ಯಾಗಿರುವುದು ಬೆಳಕಿಗೆ ಬಂದಿದೆ.ಸಿದ್ದರಾಮ ಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಬಂದಿದೆ.ಲಷ್ಕರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ 24 ಗಂಟಯೊಳಗೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ…