ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ…
- TV10 Kannada Exclusive
- October 19, 2026
- No Comment
- 6
ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ…
ಮೈಸೂರು,ಅ19,Tv10 ಕನ್ನಡ
ಕುಡಿದ ನಂತರ ಬಿಲ್ ಪಾವತಿಸುವ ವಿಚಾರದಲ್ಲಿ ಶುರುವಾದ ಗಲಾಟೆ ಓರ್ವನ ಕೊ* ಯಲ್ಲಿ ಅಂತ್ಯವಾಗಿದೆ.ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಮಹೇಶ್ (47) ಮೃತ ದುರ್ದೈವಿ.ಕೊ* ಆರೋಪಿ ನಂದೀಶ್ ಪೊಲೀಸರ ಅತಿಥಿಯಾಗಿದ್ದಾನೆ.ವೈನ್ ಶಾಪ್ ಒಂದರಲ್ಲಿ ಮಹೇಶ್ ಎಣ್ಣೆ ಹೊಡೆದಿದ್ದಾನೆ.ಇದೇ ವೇಳೆ ಅಲ್ಲೇ ಕುಡಿಯುತ್ತಿದ್ದ ನಂದೀಶ್ ತನ್ನ ಬಿಲ್ ಸಹ ಕಟ್ಟುವಂತೆ ಒತ್ತಾಯಿಸಿದ್ದಾನೆ.ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ.ಸ್ಥಳದಲ್ಲಿದ್ದ ಜನ ಗಲಾಟೆ ಬಿಡಿಸಿ ಕಳಿಸಿದ್ದಾರೆ.ಸ್ಥಳದಿಂದ ಹೊರಟ ಮಹೇಶ್ ನ ನಂದೀಶ್ ಚೇಸ್ ಮಾಡಿ ಶಿವ ಗ್ಯಾಸ್ ಬಳಿ ಅಟ್ಯಾಕ್ ಮಾಡಿದ್ದಾನೆ. ಮರದ ಪೀಸ್ ನಿಂದ ಹಲ್ಲೆ ನಡೆಸಿದ ಪರಿಣಾಮ ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ವಿದ್ಯಾರಣ್ಯಪುರಂ ಪೊಲೀಸರು ಆರೋಪಿ ನಂದೀಶ್ ಬಂಧಿಸಿದ್ದಾರೆ….