
ಕಾಡಾನೆ ದಾಳಿ…ವಾಚರ್ ಸಾವು…
- TV10 Kannada Exclusive
- March 4, 2023
- No Comment
- 120

ಎಚ್.ಡಿ.ಕೋಟೆ,ಮಾ4,Tv10 ಕನ್ನಡ
ಕಾಡಾನೆ ದಾಳಿಗೆ ವಾಚರ್ ಸಾವನ್ನಪ್ಪಿದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಲ್ಕೆರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ದಡದಹಳ್ಳಿ ಹಾಡಿಯ ಆದಿವಾಸಿ ವಾಚರ್ ಬೊಮ್ಮ ಸಾವನ್ನಪ್ಪಿದ ದುರ್ದೈವಿ.ಬೊಮ್ಮ ಮತ್ತು ಮಧುಕೊಯ್ಲರ್ ಎಂಬ ಇಬ್ಬರು ವಾಚರ್ ಗಳು ಅರಣ್ಯದ ಗಸ್ತಿನಲ್ಲಿದ್ದಾಗ ಕಾಡಾನೆ ಹಠಾತ್ ಎದುರಾಗಿದೆ.
ಕಾಡಾನೆಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಬೊಮ್ಮ ಕಂದಕಕ್ಕೆ ಬಿದ್ದಿದ್ದಾನೆ.
ಕಂದಕದಲ್ಲಿ ಬಿದ್ದ ಬೊಮ್ಮನನ್ನು ಕಾಡಾನೆ ಸೊಂಡಲಿನಿಂದ ಮೇಲಕ್ಕೆಸೆದು ಗಾಯಗೊಳಿಸಿದೆ.
ಕಂದಕದಲ್ಲಿ ಸಿಲಿಕಿದ್ದರೂ ಅರಣ್ಯ ಇಲಾಖೆ ಸಿಬ್ಬಂಧಿಗಳಿಗೆ ಕರೆ ಮಾಡಿ ಸ್ಥಳಕ್ಕೆ ಬರಮಾಡಿಕೊಂಡಿದ್ದಾನೆ.ಕೈಮೂಳೆ ಮುರಿದು ಗಂಭೀರ ಗಾಯವಾಗಿದ್ದ ಬೊಮ್ಮನನ್ನು ಆಸ್ಪತ್ರೆಗೆ ಸ್ಥಳಾಂತರಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿ ಎಫ್ ಓ ರವಿಕುಮಾರ್ ಸೇರಿಸಂತೆ ಸಿಬ್ಬಂಧಿಗಳು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತನ ಕುಟುಂಬಕ್ಕೆ ಜೀವ ವಿಮೆ ಸೆರಿದಂತೆ ಇನ್ನಿತರ ಸವಲತ್ತು ಸೇರಿ 35ಲಕ್ಷ ಪರಿಹಾರ ಕೊಡಿಸುವ ಅರಣ್ಯ ಇಲಾಖೆ ಭರವಸೆ ನೀಡಿದೆ.ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…