
ಎನ್.ಆರ್.ಎಸಿಪಿ ಸ್ಕ್ವಾಡ್ ಕಾರ್ಯಾಚರಣೆ…ಇಬ್ಬರು ಸರಗಳ್ಳರ ಬಂಧನ…7.10 ಲಕ್ಷ ಮೌಲ್ಯದ ಚಿನ್ನದ ಸರಗಳು ವಶ…
- CrimeTV10 Kannada Exclusive
- March 4, 2023
- No Comment
- 117
ಮೈಸೂರು,ಮಾ4,Tv10 ಕನ್ನಡ
ಎನ್.ಆರ್.ಎಸಿಪಿ ವಿಶೇಷ ಅಪರಾಧ ಪತ್ತೆ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಸರಗಳ್ಳರು ಸಿಕ್ಕಿಬಿದ್ದಿದ್ದಾರೆ.ಬಂಧಿತರಿಂದ 7.10 ಲಕ್ಷ ಮೌಲ್ಯದ 205 ಗ್ರಾಂ ತೂಕದ 5 ಚಿನ್ನದ ಸರಗಳನ್ನ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮೂರು ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.
ರುಮಾನ್(25) ಹಾಗೂ ಸುಹಾಲ್(26) ಬಂಧಿತರು.
2021 ರಲ್ಲಿ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಭಂಧಿಸಿದಂತೆ ಆರೋಪಿಗಳನ್ನ ಬಂಧಿಸಲು ವಿಶೇಷ ತಂಡವನ್ನ ರಚಿಸಲಾಗಿತ್ತು.ಅಪರಾಧ ಮತ್ತು ಸಂಚಾರ ಡಿಸಿಪಿ ಎಸ್.ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಹಾಗೂ ಎನ್.ಆರ್.ವಿಭಾಗದ ಎಸಿಪಿ ಅಶ್ವತ್ಥ್ ನಾರಾಯಣ್ ಉಸ್ತುವಾರಿಯಲ್ಲಿ ರಚಿಸಿದ ವಿಶೇಷ ತಂಡ ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದೆ.ಶೋಕಿಗಾಗಿ ಆರೋಪಿಗಳು ಕೃತ್ಯವೆಸಗುತ್ತಿದ್ದರೆಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಎನ್.ಆರ್.ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್.ಕೆ.ತಳವಾರ್,ಹೆಬ್ಬಾಳ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಸಾದ್ ನೇತೃತ್ವದಲ್ಲಿ ಪಿಎಸ್ಸೈ ಗಳಾದ ರಾಜು,ಎಸ್.ಗಂಗಾಧರ್,ಚಂದ್ರಶೇಖರ್ ಇಟಗಿ.ಎನ್.ಆರ್.ವಿಭಾಗದ ವಿಶೇಷ ಅಪರಾಧ ಪತ್ತೆ ತಂಡದ ಎಎಸ್ಸೈ ಅನಿಲ್.ಕೆ.ಶಂಖಪಾಲ್,ಸಿಬ್ಬಂದಿಗಳಾದ ಲಿಂಗರಾಜಪ್ಪ,ರಮೇಶ್,ಸುರೇಶ್,ಜೀವನ್,ಹರೀಶ್,ಹನುಮಂತ ಕಲ್ಲೇದ್.ಹೆಬ್ಬಾಳ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಲ್ಲಿಕಾರ್ಜುನಪ್ಪ,ಹರೀಶ್,ಮಹೇಶ್ ಹೊಸಮನಿ.ಎನ್.ಆರ್.ಠಾಣೆಯ ಸಿಬ್ಬಂದಿಗಳಾದ ಮಂಜುನಾಥ್,ಸುನಿಲ್ ಕುಮಾರ್,ಮಹೇಶ್.ಸಿಡಿಆರ್ ಸೆಲ್ ನ ಕುಮಾರ್,ಆರಾಧ್ಯ,ಮಂಜುನಾಥ್,ಶ್ಯಾಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಕಾರ್ಯಾಚರಣೆಯನ್ನ ಪೊಲೀಸ್ ಆಯುಕ್ತ ಬಿ.ರಮೇಶ್ ಪ್ರಶಂಸಿಸಿದ್ದಾರೆ…