
ಬಸ್ ಪಾಸ್ ಗಾಗಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ…ಮೈಸೂರು ವಿವಿ ವಿಧ್ಯಾರ್ಥಿಯಿಂದ ಏಕಾಂಗಿ ಹೋರಾಟ…
- TV10 Kannada Exclusive
- March 7, 2023
- No Comment
- 123

ಬಸ್ ಪಾಸ್ ಗಾಗಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ…ಮೈಸೂರು ವಿವಿ ವಿಧ್ಯಾರ್ಥಿಯಿಂದ ಏಕಾಂಗಿ ಹೋರಾಟ…
Mysore#bus pass protest#dc off#
ಮೈಸೂರು,ಮಾ7,Tv10 ಕನ್ನಡ
ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ವಿಭಾಗದ ಡಿಪ್ಲೊಮಾ ವಿಧ್ಯಾರ್ಥಿಯೊಬ್ಬರು ಏಕಾಂಗಿ ಹೋರಾಟ ಹಮ್ಮಿಕೊಂಡಿದ್ದಾರೆ.ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.ಹುಣಸೂರು ತಾಲೂಕಿನ ಕಲ್ಕುಣಿಕೆ ಗ್ರಾಮದ ನಿವಾಸಿ ಕುಮಾರ್ ಎಂಬುವರೇ ಉಪವಾಸ ಸತ್ಯಾಗ್ರಹ ಕೈಗೊಂಡವರು.ಮೈಸೂರು ವಿವಿಯಲ್ಲಿ ಪ್ರವೇಶಾತಿ ಪಡೆದಿರುವ ಕುಮಾರ್ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಿದ್ದಾರೆ.ಆದರೆ ಸಾರಿಗೆ ಅಧಿಕಾರಿಗಳು ಬಸ್ ಪಾಸ್ ನೀಡದೆ ನಿರ್ಲಕ್ಷಿಸಿದ್ದಾರೆ.ವಿದ್ಯಾಭ್ಯಾಸಕ್ಕಾಗಿ 45 ಕಿ.ಮೀ.ಕ್ರಮಿಸಬೇಕಾದ ಕಾರಣ ಬಸ್ ಪಾಸ್ ಅವಶ್ಯಕತೆ ಇದ್ದರೂ ಸಾರಿಗೆ ಅಧಿಕಾರಿಗಳು ನಿರಾಕರಿಸಿದ್ದಾರೆಂದು ಆರೋಪಿಸಿರುವ ಕುಮಾರ್ ಉಪವಾಸ ಸತ್ಯಾಗ್ರಹದ ಮೂಲಕ ತಮ್ಮ ಹೋರಾಟ ಪ್ರಾರಂಭಿಸಿದ್ದಾರೆ…