ಬೆಂಗಳೂರಿನಲ್ಲಿ ನೋಬಿಲ್ ಹೋಟೆಲ್ ಆರಂಭ…ಏನಿದರ ವೈಶಿಷ್ಟ್ಯ ಗೊತ್ತಾ…
- Uncategorized
- March 10, 2023
- No Comment
- 117
ಬೆಂಗಳೂರು,ಮಾ10,Tv10 ಕನ್ನಡ
ಹೋಟೆಲ್ ಅಂದ್ರೆ ಹಣ ಪಾವತಿಸಿ ಹೊಟ್ಟೆತುಂಬಿಸಿಕೊಳ್ಳುವುದು ಸಹಜ.ಆದ್ರೆ ಬೆಂಗಳೂರಿನ ನಾಗರಬಾವಿಯಲ್ಲಿ ಆರಂಭವಾಗಿರುವ ಈ ಹೋಟೆಲ್ ನಲ್ಲಿ ಬಿಲ್ ಪಾವತಿಸುವಂತಿಲ್ಲ.ಇದೇನಪ್ಪ ಆಶ್ಚರ್ಯ ಅಂತೀರಾ ಇದು ನಿಜ.ಕಿರಣ್ ಗೌಡ ಎಂಬುವರು ತಮ್ಮ ಸ್ನೇಹಿತರ ಜೊತೆ ಸೇರಿ ಆರಂಭಿಸಿರುವ ಅನ್ನಪೂರ್ಣೇಶ್ವರಿ ಹೋಟೆಲ್ ನಲ್ಲಿ ಹೊಟ್ಟೆ ತುಂಬಾ ತನ್ನ ಬಹುದು ಆದ್ರೆ ಬಿಲ್ ಪಾವತಿಸುವಂತಿಲ್ಲ.ನಿಮಗೆ ಇಷ್ಟವಾದ್ರೆ ಹುಂಡಿಗೆ ಹಣ ಹಾಕಬಹುದು.ಸಿಂಗಪುರ್ ನಲ್ಲಿ ಇಂತಹ ಹೋಟೆಲ್ ಸಾಕಷ್ಟು ಹೆಸರಾಗಿದ್ದು ಇದೇ ಕಿರಣ್ ಗೌಡ ರವರಿಗೆ ಸ್ಪೂರ್ತಿ ಎನ್ನಲಾಗಿದೆ.ನಾಗರಬಾವಿಯ 11 ನೇ ಬ್ಲಾಕ್ ನಲ್ಲಿ ಆರಂಭವಾಗಿರುವ ಈ ಹೋಟೆಲ್ ಮಧ್ಯಾಹ್ನ 12 ರಿಂದ 4 ಗಂಟೆ ವರೆಗೆ ಕಾರ್ಯ ನಿರ್ವಹಿಸಲಿದೆ.ಮುದ್ದೆ,ಚಪಾತಿ,ಅನ್ನ,ಸಾಂಬಾರ್,ಪಲ್ಯ ಒಂದು ಸ್ವೀಟ್ ಇಲ್ಲಿಯ ಮೆನು.ಸಿನಿಮಾ ನಟ ಜಿಮ್ ರವಿ ಹೋಟೆಲ್ ಗೆ ಚಾಲನೆ ನೀಡಿ ಶುಭ ಹಾರೈಸಿದ್ದಾರೆ.ಈಗಾಗಲೇ ನೂರಾರು ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ…