ಯಲಾಕುನ್ನಿ..ಮೇರಾ ನಾಮ್ ವಜ್ರಮುನಿ…ಕೋಮಲ್ ಅಭಿನಯದ ಹೊಸಚಿತ್ರ…
- TV10 Kannada Exclusive
- March 10, 2023
- No Comment
- 104
ಮೈಸೂರು,ಮಾ10,Tv10 ಕನ್ನಡ
ನವರಸ ನಾಯಕ ಜಗ್ಗೇಶ್ ಸಹೋದರ ಸೆನ್ಸೇಷನಲ್ ಸ್ಟಾರ್ ಕೋಮಲ್ ರವರ ಹೊಸ ಚಿತ್ರ ಸೆಟ್ಟೇರಲಿದೆ.ಬಹುತೇಕ ಸಿನಿಮಾಗಳಲ್ಲಿ ಖಳನಟ ವಜ್ರಮುನಿ ಬಳಸುತ್ತಿದ್ದ ಯಲಾಕುನ್ನಿ ಎಂಬ ಪದವನ್ನ ಬಳಸಿಕೊಂಡ ಶೀರ್ಷಿಕೆ ಇಂದು ಅನಾವರಣಗೊಳಿಸಲಾಗಿದೆ.ಬಹಳ ದಿನಗಳ ನಂತರ ಕೋಮಲ್ ಬೆಳ್ಳಿತೆರೆಯಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.ಎನ್.ಆರ್.ಪ್ರದೀಪ್ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದೆ.ಸೌಭಾಗ್ಯ ಸಿನಿಮಾಸ್ ನ ಮಹೇಶ್ಚಗೌಡ್ರು ಚಿತ್ರದ ನಿರ್ಮಾಪಕರು.1981 ರಲ್ಲಿ ನಡೆಯುವ ಕಥೆಯನ್ನ ಆಧರಿಸಿ ಚಿತ್ರ ಮೂಡಿಬರಲಿದೆ.ಎನ್.ಆರ್.ಪ್ರದೀಪ್ ರವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ.ಪ್ರದೀಪ್ ರವರೇ ಕಥೆ,ಚಿತ್ರಕಥೆ,ಗೀತರಚನೆ ಮಾಡಿದ್ದಾರೆ.ವಜ್ರಮುನಿಯಾಗಿ ಕೋಮಲ್ ಕಾಣಿಸಿಕೊಳ್ಳಲಿದ್ದಾರೆ.ಮುಸುರಿ ಕೃಷ್ಣಮೂರ್ತಿ ಪುತ್ರ ಜಯಸಿಂಹ ಮುಸುರಿ ಹಾಗೂ ಜಗ್ಗೇಶ್ ರವರ ಕಿರಿಮಗ ಯತಿರಾಜ್ ತಾರಾಗಣದಲ್ಲಿದ್ದಾರೆ….