ಗ್ರಾಮ ಲೆಕ್ಕಾಧಿಕಾರಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…
- TV10 Kannada Exclusive
- March 11, 2023
- No Comment
- 379
ಹುಣಸೂರು,ಮಾ11,Tv10 ಕನ್ನಡ
ಬಿಳಿಕೆರೆ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಗ್ರಾಮಲೆಕ್ಕಾಧಿಕಾರಿ ಕೃಷ್ಣಾಭಾಯಿ(25) ಮೃತ ದುರ್ದೈವಿ. ಬಿಳಿಕೆರೆಯ ಎಸ್.ಬಿ.ಐ ಬ್ಯಾಂಕ್ ಹಿಂಭಾಗ ಇದ್ದ ಮನೆಯೊಂದರಲ್ಲಿ ಕೊಠಡಿ ಬಾಡಿಗೆ ಪಡೆದು ತಂಗಿದ್ದರು. ಒಂದು ತಿಂಗಳ ಹಿಂದಷ್ಟೇ ಹನೂರಿನಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಭಾಷ್ ಬೋಸ್ ಎಂಬುವರನ್ನ ವಿವಾಹವಾಗಿದ್ದರು.ಕೊಠಡಿಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕೃಷ್ಣಾಭಾಯಿ ಶವ ಪತ್ತೆಯಾಗಿದೆ.ಬೆಳಗಾವಿ ಜಿಲ್ಲೆಯ ಅಥಣಿ ಗ್ರಾಮದ ನಿವಾಸಿ ಕೃಷ್ಣಾಭಾಯಿ.ಬಿಳಿಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ…