ಕ್ರೀಡೆಗಳ ಹೆಸರಲ್ಲಿ ಮತಬೇಟೆ…ಹುಣಸೂರಿನಲ್ಲಿ ಆಕಾಂಕ್ಷಿಗಳ ರಾಜಕೀಯ ಆಟ…
- MysorePolitics
- March 14, 2023
- No Comment
- 104
ಕ್ರೀಡೆಗಳ ಹೆಸರಲ್ಲಿ ಮತಬೇಟೆ…ಹುಣಸೂರಿನಲ್ಲಿ ಆಕಾಂಕ್ಷಿಗಳ ರಾಜಕೀಯ ಆಟ…
ಹುಣಸೂರು,ಮಾ14,Tv10 ಕನ್ನಡ
ಚುನಾವಣೆ ಘೋಷಣೆಗೂ ಮುನ್ನ ಹುಣಸೂರಿನಲ್ಲಿ ಆಕಾಂಕ್ಷಿಗಳು ರಾಜಕೀಯ ಆಟ ಶುರು ಮಾಡಿದ್ದಾರೆ.ಮತದಾರರನ್ನ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.ನಾನಾ ರೀತಿಯಲ್ಲಿ ಮತದಾರರಿಗೆ ಹತ್ತಿರವಾಗುತ್ತಿದ್ದಾರೆ.ಕಾರ್ಯಕ್ರಮಗಳು,ಹುಟ್ಟುಹಬ್ಬಗಳು,ಜಾತ್ರಾಮಹೋತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಸೆಳೆಯುತ್ತಿದ್ದಾರೆ.ಸಧ್ಯ ಕ್ರೀಡೆಯನ್ನೂ ಸಹ ಆಕಾಂಕ್ಷಿಗಳು ಬಿಟ್ಟಿಲ್ಲ.ಕ್ರೀಡೆ ಹೆಸರಿನಲ್ಲಿ ಮತ ಬೇಟೆ ಆರಂಭವಾಗಿದೆ.
ಕ್ರೀಡೆಗಳನ್ನ ಆಯೋಜಿಸುವ ಮೂಲಕ ಯುವಕರನ್ನ ಸೆಳೆಯುತ್ತಿದ್ದಾರೆ.
ಕ್ಷೇತ್ರದ ಪ್ರತಿ ಕಾರ್ಯಕ್ರಮಗಳಲ್ಲೂ ಆಕಾಂಕ್ಷಿ ಭಾಗಿಯಾಗುತ್ತಿದ್ದಾರೆ.
ಚುನಾವಣೆ ಕಾವು ಗ್ರಾಮೀಣ ಪ್ರದೇಶದ ಕ್ರೀಡೆಗಳ ಮೇಲೂ ಪ್ರಭಾವ ಬೀರಿದೆ.
ಗ್ರಾಮೀಣಾ ಕ್ರೀಡೆಗೂ ಆಕಾಂಕ್ಷಿಗಳು ಸ್ಪಾನ್ಸರ್ ಮಾಡುವ ಮೂಲಕ ಮತಬೇಟೆಗೆ ಮುಂದಾಗಿದ್ದಾರೆ.ಸಣ್ಣಪುಟ್ಟ ಪಂದ್ಯಾವಳಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೆಡಿಎಸ್ ಆಕಾಂಕ್ಷಿ ಹರೀಶ್‌ಗೌಡ,
ಕಾಂಗ್ರೆಸ್ ಆಕಾಂಕ್ಷಿ ಮಂಜುನಾಥ್ ಸ್ಪಾನ್ಸರ್ ಮಾಡುವ ವಿಚಾರದಲ್ಲಿ ಸ್ಪರ್ಧೆ ನಡೆಸುತ್ತಿದ್ದಾರೆ.
ಮತದಾರರ ಓಲೈಕೆಗೆ ಅಭ್ಯರ್ಥಿಗಳ ಉಪಾಯ ಗಮನ ಸೆಳೆಯುತ್ತಿದೆ.ಚುನಾವಣೆಗೂ ಮುನ್ನವೇ ಹುಣಸೂರು ಕ್ಷೇತ್ರ ಹೈಲೈಟ್ ಆಗುತ್ತಿದೆ.ಪ್ರಮುಖ ಪಕ್ಷಗಳ ಆಕಾಂಕ್ಷಿಗಳ ಕಸರತ್ತು ಒಂದಡೆಯಾದೃ
ಇನ್ನೊಂದೆಡೆ ಟಿಕೆಟ್ ಆಕಾಂಕ್ಷೆಗಳಿಂದಲೂ ವಿಭಿನ್ನ ಕಾರ್ಯಕ್ರಮಗಳು ಆಯೋಜಿಸುತ್ತಿದ್ದಾರೆ.
ಆರೋಗ್ಯ ತಪಾಷಣೆ ಶಿಬಿರ, ಉದ್ಯೋಗ ಮೇಳ ಸೇರಿದಂತೆ ಹಲವು ಕಾರ್ಯಕ್ರಮಗಳ ಆಯೋಜನೆ ಮಾಡುವ
ಮೂಲಕ ಮತದಾರರನ್ನ ಓಲೈಸಿಕೊಳ್ಳುವ ಯತ್ನದಲ್ಲಿದ್ದಾರೆ.
ಒಂದೆಡೆ ಹುಟ್ಟುಹಬ್ಬದ ನೆಪದಲ್ಲಿ ಬೃಹತ್ ಸಮಾವೇಶಗಳ ಆಯೋಜನೆ ಮಾಡಲಾಗುತ್ತಿದೆ.
ಕ್ರಿಕೆಟ್ ವಾಲಿಬಾಲ್, ಗಿಲ್ಲಿದಾಂಡು ಸೇರಿದಂತೆ ಸದ್ದು ಮಾಡುತ್ತಿವೆ.
ಹಬ್ಬ, ಮದುವೆ, ಗೃಹಪ್ರವೇಶ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಅಭ್ಯರ್ಥಿಗಳು ಗಮನ ಸೆಳೆಯುತ್ತಿದ್ದಾರೆ…