- March 14, 2023
ಧ್ರುವನಾರಾಯಣ್ ಅಗಲಿಕೆ ಹಿನ್ನಲೆ…ಪುತ್ರನ ಪರ ಬೆಂಬಲಿಗರ ಬ್ಯಾಟಿಂಗ್…


ಧ್ರುವನಾರಾಯಣ್ ಅಗಲಿಕೆ ಹಿನ್ನಲೆ…ಪುತ್ರನ ಪರ ಬೆಂಬಲಿಗರ ಬ್ಯಾಟಿಂಗ್…

ಚಾಮರಾಜನಗರ,ಮಾ14,Tv10 ಕನ್ನಡ
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ನಿಧನವಾದ ಬೆನ್ನಹಿಂದೆಯೇ ನಂಜನಗೂಡು ಮೀಸಲು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕಾಗುತ್ತಿದೆ.ನಂಜನಗೂಡಿನಿಂದ ಆರ್.ಧ್ರುವನಾರಾಯಣ್ ಸ್ಪರ್ಧೆ ಗ್ಯಾರೆಂಟಿ ಎನ್ನಲಾಗಿದ್ದು ಈಗಾಗಲೇ ಸಿದ್ದತೆ ನಡೆಸಿದ್ದರು.ಈ ಮಧ್ಯೆ ಧ್ರುವನಾರಾಯಣ್ ಅಗಲಿದ್ದರು.ನಂಜನಗೂಡಿನ ಕ್ಷೇತ್ರಕ್ಕೆ ಧ್ರುವನಾರಾಯಣ್ ಬದಲು ಉತ್ತರಾಧಿಕಾರಿಯಾಗಿ ಆಕಾಂಕ್ಷಿ ಯಾರು ಎಂಬ ಪ್ರಶ್ನೆ ಉದ್ಭವಿಸುವ ಮುನ್ನವೇ ಪುತ್ರ ದರ್ಶನ್ ಪರ ಬ್ಯಾಟಿಂಗ್ ಆರಂಭವಾಗಿದೆ.
ಧ್ರುವನಾರಾಯಣ್ ಬೆಂಬಲಿಗರು ಮಗ ದರ್ಶನ್ ಗೆ ಟಿಕೆಟ್ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ.
ಧ್ರುವನಾರಾಯಣ್ ಅಂತ್ಯ ಸಂಸ್ಕಾರದ ವೇಳೆಯಲ್ಲಿಯೂ ಈ ಕೂಗು ಕೇಳಿಬಂದಿತ್ತು.
ಈ ಬಾರಿ ನಂಜನಗೂಡಿನಿಂದ ದರ್ಶನ್ ಧ್ರುವಗೆ ಟಿಕೆಟ್ ನೀಡಿ ಎನ್ನುವ ಕೂಗು ಹೆಚ್ಚಾಗುತ್ತಿದೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಪರ ಬೆಂಬಲಿಗರು ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದಾರೆ. ಪೋಸ್ಟರ್ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
I support darshan dhruva ಎನ್ನುವ ಪೋಸ್ಟರ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ…