- March 14, 2023
ಕಾವೇರಿ ನದಿ ಪಾತ್ರದ ಒತ್ತುವರಿ ಜಮೀನು ತೆರುವು…ಸ್ಮಶಾನಕ್ಕಾಗಿ ನೀಡಿದ ಜಿಲ್ಲಾಡಳಿತ…ಗ್ರಾಮಸ್ಥರಲ್ಲಿ ಸಂತಸ…


ಕಾವೇರಿ ನದಿ ಪಾತ್ರದ ಒತ್ತುವರಿ ಜಮೀನು ತೆರುವು…ಸ್ಮಶಾನಕ್ಕಾಗಿ ನೀಡಿದ ಜಿಲ್ಲಾಡಳಿತ…ಗ್ರಾಮಸ್ಥರಲ್ಲಿ ಸಂತಸ…

ಮಂಡ್ಯ,ಮಾ14,Tv10 ಕನ್ನಡ
ಕಾವೇರಿ ನದಿ ಪಾತ್ರದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನ ಮಂಡ್ಯ ಜಿಲ್ಲಾಡಳಿತ ತೆರುವುಗೊಳಿಸಿ ಸ್ಮಶಾನಕ್ಕಾಗಿ ಬಳಕೆ ಮಾಡಿಕೊಳ್ಳಲು ಗ್ರಾಮಸ್ಥರಿಗೆ ಇಂದು ಹಸ್ತಾಂತರಿಸಲಾಯಿತು.
ಮಂಡ್ಯಾ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಹೊಂಗಳ್ಳಿ ಗ್ರಾಮದ ಕಾವೇರಿ ನದಿ ದಡದಲ್ಲಿರುವ ಸರ್ವೆ ನಂ 39,40,42,53 ಹಾಗೂ 55 ಕ್ಕೆ ಸೇರಿದ 2 ಎಕ್ರೆ 20 ಗುಂಟೆ ಜಮೀನನ್ನ ಹೊಂಗಳ್ಳಿ ಗ್ರಾಮದ ಪುಟ್ಟರಾಮ.ಬಿನ್.ಲಿಂಗಮ್ಮ ಹಾಗೂ ಬಸವಲಿಂಗೇಗೌಡ.ಬಿನ್.ಬಸವನಾಗೇಗೌಡ ರವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು.ಈ ಬಗ್ಗೆ ಗ್ರಾಮಸ್ಥರು ತೆರುವುಗೊಳಿಸಿ ಸ್ಮಶಾನಕ್ಕಾಗಿ ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದ್ದರು.ಕೂಡಲೇ ಎಚ್ಚೆತ್ತ ಮಂಡ್ಯಾ ಜಿಲ್ಲಾಡಳಿತ ದಾಖಲೆಗಳನ್ನ ಪರಿಶೀಲಿಸಿ ಒತ್ತುವರಿ ತೆರುವುಗೊಳಿಸುವಂತೆ ಆದೇಶಿಸಿತ್ತು.ಮಂಡ್ಯ ಜಿಲ್ಲಾಡಳಿತ ಆದೇಶದಂತೆ ಹುಲಿಕೆರೆ ಗ್ರಾಮ ಲೆಕ್ಕಾಧಿಕಾರಿ ಕೆ.ರಮೇಶ್,ಗ್ರಾಮ ಸಹಾಯಕ ಶ್ರೀನಿವಾಸ್,ಸರ್ವೇಯರ್ ಬಸವರಾಜು,ರವಿಕುಮಾರ್ ರವರು ಇಂದು ಅಳತೆ ಮಾಡಿ ಒತ್ತುವರಿ ಜಾಗವನ್ನ ತೆರುವುಗೊಳಿಸಿ ನಂತರ ಸದರಿ ಜಮೀನನ್ನ ಸ್ಮಶಾನದ ಉದ್ದೇಶಕ್ಕೆ ಬಳಸಿಕೊಳ್ಳಲು ಹೊಂಗಳ್ಳಿ ಗ್ರಾಮಸ್ಥರಿಗೆ ಹಸ್ತಾಂತರಿಸಿದ್ದಾರೆ…