- March 15, 2023
*ಇಂದು ಬಾಂಬೆ ರಿಟರ್ನ್ ಡೇಸ್ ಪುಸ್ತಕ ರಿಲೀಸ್…ಸಾಹಿತಿ ವೀರಭದ್ರಪ್ಪ ಬಿಸ್ಲಳ್ಳಿ ಬರೆದ ಬುಕ್



ಮೈಸೂರು,ಮಾ15,Tv10 ಕನ್ನಡ
ಮೈಸೂರಿನ ಸಾಹಿತಿ ವೀರಭದ್ರಪ್ಪ ಬಿಸ್ಲಳ್ಳಿ ಬರೆದ ಪುಸ್ತಕ ರೂಪದಲ್ಲಿ ಬಾಂಬೆ ಡೇಸ್ ಸ್ಟೋರಿ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಲೋಕಾರ್ಪಣೆಯಾಗಲಿದೆ.ಆಪರೇಷನ್ ಕಮಲಕ್ಕೆ ಒಳಗಾಗಿದ್ದ 17 ಶಾಸಕರ ಬಗೆಗಿನ ಪುಸ್ತಕ ಇಂದು ಬಿಡುಗಡೆಯಾಗಲಿದೆ.ಸಂಜೆ 6:30 ಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜೆಡಿಎಸ್, ಕಾಂಗ್ರೆಸ್‌ಗೆ ಕೈ ಕೊಟ್ಟು ಬಾಂಬೆ ಸೇರಿದ್ದ ಶಾಸಕರ ಸ್ಟೋರಿ ಇದಾಗಿದೆ.
ಚುನಾವಣೆ ಹೊಸ್ತಿಲಲ್ಲಿ ಲೋಕಾರ್ಪಣೆಯಾಗುತ್ತಿರುವುದು ಗಮನ ಸೆಳೆಯುತ್ತಿದೆ.
ಬಾಂಬೆ ರಿಟರ್ನ್ ಡೇಸ್ ಸೆನ್ಸ್‌ಲೆಸ್ ಪಾಲಿಟ್ರಿಕ್ಸ್ ಎಂಬ ಶೀರ್ಷಿಕೆಯಲ್ಲಿ ಪುಸ್ತಕ ಬಿಡುಗಡೆಯಾಗಲಿದೆ. ಎಂಎಲ್ಸಿ ವಿಶ್ವನಾಥ್ ರವರ ಪುಸ್ತಕ ಬಿಡುಗಡೆಗೆ ಮುನ್ನವೇ ಮೈಸೂರಿನವರೇ ಆದ ವೀರಭದ್ರಪ್ಪ ಬಿಸ್ಲಳ್ಳಿ ಪುಸ್ತಕ ರಚಿಸಿ
ಬಿಡುಗಡೆ ಮಾಡಲಿದ್ದಾರೆ.
200 ಪುಟಗಳ ಪುಸ್ತಕ ಇದಾಗಿದೆ.ಬಸವನಗುಡಿ ಸುಜಯ್ ಪಬ್ಲಿಕೇಷನ್ಸ್‌ನಲ್ಲಿ ಪುಸ್ತಕ ಮುದ್ರಣಗೊಂಡಿದೆ.
ಮೈಸೂರು ವಿಶ್ವಯ್ಯ ಬುಕ್‌ಹೌಸ್‌ಗೆ ಮಾರಾಟದ ಅನುಮತಿ ನೀಡಲಾಗಿದೆ.
ರಾಜ್ಯ ಉಚ್ಚ ನ್ಯಾಯಾಲಯ ವಕೀಲ ಸಿ.ಎನ್ ಹನುಮಂತರಾಯಪ್ಪ ರಿಂದ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಆಪರೇಷನ್ ಕಮಲಕ್ಕೆ ಒಳಗಾಗಿ ಬಾಂಬೆ ಸೇರಿದ್ದ ಹದಿನೇಳು ಮಂದಿ ಶಾಸಕರು.
ಮುಂಬೈ ಖಾಸಗಿ ಹೊಟೇಲ್‌ನಲ್ಲಿ ಕಳೆದ ದಿನಗಳು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೇಗೆ, ಸಿದ್ದು ಡಿಕೆಶಿ ಪಾತ್ರ, ಜಾರಕಿಹೊಳಿ ರಾಜೀನಾಮೆ ಪ್ರಕರಣ, ಬಿಎಸ್‌ವೈ ರಾಜೀನಾಮೆ ಹೀಗೆ ಹಲವಾರು ಸಂಗತಿಗಳ ಬಗ್ಗೆ ಉಲ್ಲೇಖವಾಗಿದೆ.
ಮುಂಬೈಗೆ ತೆರಳಿದ್ದ ಕೆಲವರಿಗೆ ಪುಸ್ತಕ ಬಿಡುಗಡೆಗೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.
ಬಾಂಬೆ ಮಿತ್ರಮಂಡಳಿಗೆ ಮುಳುವಾಗುತ್ತಾ ಬಾಂಬೆ ರಿಟರ್ನ್ ಡೇಸ್ ಪುಸ್ತಕ..?
