ಕೈ ಪಾಳೆಯದಲ್ಲಿ ಯುವ ನಾಯಕರ ಕಲರವ…ಹಳೇ ಮೈಸೂರು ಭಾಗದಲ್ಲಿ ಯಂಗ್ ಬ್ಲಡ್ ಕಾರುಬಾರು…
- Politics
- March 20, 2023
- No Comment
- 63
ಕೈ ಪಾಳೆಯದಲ್ಲಿ ಯುವ ನಾಯಕರ ಕಲರವ…ಹಳೇ ಮೈಸೂರು ಭಾಗದಲ್ಲಿ ಯಂಗ್ ಬ್ಲಡ್ ಕಾರುಬಾರು…
ಮೈಸೂರು,ಮಾ20,Tv10 ಕನ್ನಡ
ಹಳೇ ಮೈಸೂರು ಭಾಗದಲ್ಲಿ ಯುವನಾಯಕರ ಕಾರುಬಾರು ಕೈ ಪಾಳೆಯದಲ್ಲಿ ಸಂಚಲನ ಮೂಡಿಸುತ್ತಿದೆ.ಯುವಕರ ಹಿಡಿತಕ್ಕೆ ಮೈಸೂರು ಕಾಂಗ್ರೆಸ್ ಒಲಿಯಲಿದೆಯಾ ಎಂಬ ಕುತೂಹಲ ಮನೆ ಮಾಡಿದೆ.ಯುವ ನಾಯಕತ್ವಕ್ಕೆ ಹಳೇ ಮೈಸೂರಿನಲ್ಲಿ ಕೈ ಪಕ್ಷ ಮಣೆ ಹಾಕಲು ಗಂಭೀರವಾಗಿ ಚಿಂತನೆ ನಡೆಸುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಯುವಕರ ರಾಜಕೀಯ ಬೆಳವಣಿಗೆ ಇಂತಹ ಕುತೂಹಲಕ್ಕೆ ಪುಷ್ಟಿ ನೀಡುತ್ತಿದೆ.ಒಂದೆಡೆ ಈ ಬೆಳವಣಿಗೆ
ಕಾಂಗ್ರೆಸ್ ಪಕ್ಷಕ್ಕೆ ವರವೂ ಎನ್ನಲಾಗುತ್ತಿದೆ.
ಹಳೇ ಮೈಸೂರು ಭಾಗದಲ್ಲಿ ಯುವ ನಾಯಕರಿಂದ ಕಾಂಗ್ರೆಸ್ ಬಲಿಷ್ಠವಾಗಲಿದೆ ಬ ವಿಶ್ವಾಸ ಬರುತ್ತಿದೆ.ಈಗಾಗಲೆ
ತಮ್ಮ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿರುವ ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಉದಾಹರಣೆಯಾಗಿ ಕಂಡು ಬರುತ್ತಿದ್ದಾರೆ.
ಸಮರ್ಥವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿ, ಉತ್ತಮ ಜನ ಸ್ಪಂದನೆ ಮೂಲಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಯುವ ಕೈ ಶಾಸಕರು
ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸಿ ಮುಂಚುಣಿಯಲ್ಲಿದ್ದಾರೆ ಎಂಬ ಹೆಗ್ಗಳಿಕೆ ಇವರಿಗೆ ಸಂದಿದೆ.ಇದೀಗ ಯುವ ಶಾಸಕರ ಸಾಲಿಗೆ ಟಿ. ನರಸೀಪುರ ಕ್ಷೇತ್ರದಲ್ಲಿ ಸುನೀಲ್ ಬೋಸ್, ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ್, ಗುಂಡ್ಲುಪೇಟೆ ಕ್ಷೇತ್ರದಲ್ಲಿ ಗಣೇಶ್ ಪ್ರಸಾದ್ ಹೀಗೆ ಪಟ್ಟಿ ಬೆಳೆದಿದೆ.ಈಗಾಗಲೇ
ಈ ಯುವ ಪ್ರತಿಭೆಗಳ ರಾಜಕೀಯ ಅಖಾಡಕ್ಕೆ ದುಮುಕಿ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ.
ಮುಖ್ಯಮಂತ್ರಿಯಾಗಿ, ಸಚಿವರಾಗಿ, ಪ್ರಭಾವಿಗಳಾಗಿ ಅನುಭವ ಹೊಂದಿರುವ
ಅಪ್ಪಂದಿರ ನಾಮ ಬಲದಿಂದ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ ಯುವ ಕಲಿಗಳು. ಈ ಬಾರಿಯ ಚುನಾವಣೆಯಲ್ಲಿ ಅಗ್ನಿ ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ.
ಈ ಬಾರಿಯ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ನ ಯಂಗ್ ಅಭ್ಯರ್ಥಿಗಳು.
ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ದಿ.ಎಸ್ ಚಿಕ್ಕಮಾದು ಪುತ್ರ ಅನಿಲ್ ಚಿಕ್ಕಮಾದು, ಮಾಜಿ ಸಚಿವ ಹೆಚ್‌ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್, ದಿ. ಧ್ರುವನಾರಾಯಣ್ ಪುತ್ರ ದರ್ಶನ್ ಧ್ರುವನಾರಾಯಣ್, ಮಾಜಿ ಸಚಿವ ದಿ. ಮಹದೇವಪ್ರಸಾದ್ ಪುತ್ರ ಗಣೇಶ್ ಪ್ರಸಾದ್ ಕಣದಲ್ಲಿ ಇಳಿಯುವುದು ಬಹುತೇಕ ಗ್ಯಾರೆಂಟಿ ಎನ್ನಲಾಗಿದೆ.
ಯುವಕರ ಪರವಾಗಿ ಕ್ಷೇತ್ರದ ಜನ ಬೆಂಬಲ ಸೂಚಿಸುತ್ತಿದ್ದಾರೆ.
ಅಪ್ಪಂದಿರ ನಾಮ ಬಲದಿಂದ ಅಧಿಕಾರ ಹಿಡಿಯಲು ಯೂತ್ಸ್ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ.ಹೈ ಕಮಾಂಡ್ ಯೂತ್ ವಿಂಗ್ ಗೆ ಮಣೆ ಹಾಕುವುದೇ ಕಾದು ನೋಡಬೇಕಿದೆ…