ಮಠದ ಚಿನ್ನದ ತಟ್ಟೆ ಗಿರವಿ ಇಟ್ಟ ಪ್ರಕರಣ…ಆರೋಪ ಸಾಬೀತು…ಮೂವರಿಗೆ ದಂಡ ವಿಧಿಸಿದ ನ್ಯಾಯಾಲಯ…
- CrimeMysore
- March 24, 2023
- No Comment
- 156
ಮೈಸೂರು,ಮಾ24,Tv10 ಕನ್ನಡ
ಸೋಸಲೆ ಮಠಕ್ಕೆ ಸೇರಿದ ಚಿನ್ನದ ತಟ್ಟೆಗಳನ್ನ ಗಿರವಿ ಇಟ್ಟ ಆರೋಪ ಸಾಬೀತಾದ ಹಿನ್ನಲೆ ಆಡಳತಾಧಿಕಾರಿ ಸೇರಿದಂತೆ ಮೂವರಿಗೆ ಮೈಸೂರು ನ್ಯಾಯಾಲಯ ದಂಡ ವಿಧಿಸಿದೆ.ಕೃಷ್ಣಮೂರ್ತಿ ಪುರಂ ನಲ್ಲಿರುವ ಸೋಸಲೆ ಶ್ರೀ ವ್ಯಾಸರಾಜ ಮಠದ ಹಿಂದಿನ ಸ್ವಾಮೀಜಿಗಳಾದ ಶ್ರೀ ವಿದ್ಯಾಮನೋಹರ ತೀರ್ಥ,ಇವರ ತಾಯಿ ಶ್ರೀಮತಿ ಹಾಗೂ ಆಡಳಿತಾಧಿಕಾರಿ ನಟರಾಜ್ ರವರ ಮೇಲಿದ್ದ ಆರೋಪ ಸಾವ
ಬೀತಾಗಿದೆ.ಮೈಸೀರಿನ 6 ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಗುರುರಾಜ ಸೋಮಲಕ್ಕಲವರ್ ರವರು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಶ್ರೀ ವಿದ್ಯಾ ಮನೋಹರ ತೀರ್ಥ ರವರು ಈ ಹಿಂದೆ ಮಠದ ಸ್ವಾಮೀಜಿಗಳಾಗಿದ್ದ ಸಮಯದಲ್ಲಿ ಮಠಕ್ಕೆ ಸೇರಿದ ಎರಡು ಚಿನ್ನದ ತಟ್ಟೆಗಳನ್ನ ದೇವರಾಜ ಅರಸ್ ರಸ್ತೆಯಲ್ಲಿರುವ ಖಾಸಗಿ ಗಿರವಿ ಅಂಗಡಿಯಲ್ಲಿ ಗಿರವಿ ಇಟ್ಟು 5 ಲಕ್ಷ ಸಾಲ ಪಡೆದಿದ್ದರು.ಬೆಂಗಳೂರಿನ ನಿವಾಸಿ ನರೇಂದ್ರ ಎಂಬುವರು ಈ ವಿಚಾರವನ್ನ ಬಯಲಿಗೆಳೆದು ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಎರಡೂ ಕಡೆಯ ವಾದ ವಿವಾದಗಳನ್ನ ಆಲಿಸಿದ ನ್ಯಾಯಾಧೀಶರು ಆರೋಪಿಗಳನ್ನ ಅಪರಾಧಿಗಳೆಂದು ಪರಿಗಣಿಸಿ ದಂಡ ವಿಧಿಸಿದೆ…