ರಸ್ತೆಯಲ್ಲಿ ಅಡ್ಡವಾಗಿ ನಿಂತಿದ್ದ ಟ್ರಾಕ್ಟರ್…ದಾರಿ ಬಿಡಿ ಅಂದಿದ್ದಕ್ಕೇ ಹಲ್ಲೆ…ಇಬ್ಬರು ಯುವಕರು ಆಸ್ಪತ್ರೆಗೆ ದಾಖಲು…
- CrimeMysore
- March 27, 2023
- No Comment
- 125

ರಸ್ತೆಯಲ್ಲಿ ಅಡ್ಡವಾಗಿ ನಿಂತಿದ್ದ ಟ್ರಾಕ್ಟರ್…ದಾರಿ ಬಿಡಿ ಅಂದಿದ್ದಕ್ಕೇ ಹಲ್ಲೆ…ಇಬ್ಬರು ಯುವಕರು ಆಸ್ಪತ್ರೆಗೆ ದಾಖಲು…
ನಂಜನಗೂಡು,ಮಾ27,Tv10 ಕನ್ನಡ
ರಸ್ತೆ ಮಧ್ಯದಲ್ಲಿ ನಿಲ್ಲಿಸಲಾಗಿದ್ದ ಟ್ರಾಕ್ಟರ್ ತೆಗೆದು ದಾರಿ ಬಿಡಿ ಎಂದ ಯುವಕರಿಗೆ ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲೂಕಿನ ಕರಳಪುರ ಗ್ರಾಮದಲ್ಲಿ ನಡೆದಿದೆ.ಹಲ್ಲೆಯಿಂದ ಗಾಯಗೊಂಡ ಇಬ್ಬರು ಯುವಕರಿಗೆ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕರಳಪುರ ಗ್ರಾಮದ ಸಂತೋಷ್ ಮತ್ತು ಗಿರೀಶ್ ಗಾಯಗೊಂಡ ಯುವಕರು.
ರಸ್ತೆ ಮಧ್ಯೆ ನಿಲ್ಲಿಸಿದ್ದ ಟ್ರಾಕ್ಟರ್ ತೆಗೆದು ದಾರಿ ಬಿಡಿ ಎಂದಾಗ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಕಳೆದ ವರ್ಷ ಅಂಬೇಡ್ಕರ್ ಜಯಂತಿ ವೇಳೆ ಗಲಾಟೆ ನಡೆದು ಒಂದು ಕೋಮಿನವರು ಮತ್ತೊಂದು ಕೋಮಿನವರಿಗೆ ಹಲ್ಲೆ ನಡೆಸಿದ್ದರು.ನಂಜನಗೂಡು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಧಾನ ಸಭೆ ಮಾಡಿ ಪ್ರಕರಣಕ್ಕೆ ಅಂತ್ಯ ಹಾಡಿದ್ದರು.ಇದೀಗ ಮತ್ತೆ ಈ ಘಟನೆಯಿಂದ ಎರಡು ಕೋಮುಗಳ ನಡುವೆ ಘರ್ಷಣೆ ನಡೆಯುವ ಸಂಭವ ಕಾಣುತ್ತಿದೆ.ಈ ಬೆಳವಣಿಗೆಗೆ ನಂಜನಗೂಡು ಗ್ರಾಮಾಂತರ ಠಾಣೆ ನಿರೀಕ್ಷಕ ಕಾರಣ ಎಂದು ಕರಳಪುರ ಗ್ರಾಮಸ್ಥರು ಆರೋಪಿಸಿದ್ದಾರೆ.
ನಂಜನಗೂಡು ಗ್ರಾಮಾಂತರ ಪೊಲೀಸರು ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಅನಾಹುತಕ್ಕೆ ದಾರಿ ಮಾಡಿ ಕೊಟ್ಟಂತಾಗುತ್ತದೆ.
ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ಕರುಳಾಪುರ ಗ್ರಾಮದಲ್ಲಿ ಶಾಂತಿಯುತ ವಾತಾವರಣಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ…