ಇಂದಿನಿಂದ ಮೇಲುಕೋಟೆ ವೈರಮುಡಿ ಬ್ರಹ್ಸೋತ್ಸವ

ಇಂದಿನಿಂದ ಮೇಲುಕೋಟೆ ವೈರಮುಡಿ ಬ್ರಹ್ಸೋತ್ಸವ

  • Temples
  • March 27, 2023
  • No Comment
  • 169

ಇಂದಿನಿಂದ ಮೇಲುಕೋಟೆ ವೈರಮುಡಿ ಬ್ರಹ್ಸೋತ್ಸವ

ಮಂಡ್ಯ,ಮಾ,27:- ಶ್ರೀ ಚಲುವನಾರಾಯಣ ಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಇಂದಿನಿಂದ ಏಪ್ರಿಲ್ 8 ರವರೆಗೆ ನಡೆಯಲಿದ್ದು, ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪತ್ರಿಕಗೋಷ್ಟಿ ನಡೆಸಿ ಮಾತನಾಡಿದರು. ಏಪ್ರಿಲ್ 1 ರಂದು ವೈರಮುಡಿ ಕಿರೀಟಧಾರಣೆ ನಡೆಯಲಿದೆ. ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಭಕ್ತಾಧಿಗಳಿಗೆ ಅಗತ್ಯ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಕುಡಿಯುವ ನೀರಿನ ಟ್ಯಾಂಕರ್ ಗಳು ಅಗತ್ಯತೆಗೆ ತಕ್ಕಂತೆ ವ್ಯವಸ್ಥೆಯಾಗಿದೆ. ಬಿಸಿಲು ಹೆಚ್ಚಿರುವುದರಿಂದ ಟ್ಯಾಂಕರ್ ಖಾಲಿಯಾದ ನಂತರ ಮರುಪೂರ್ಣವಾಗುವ ರೀತಿ ನೋಡಿಕೊಳ್ಳಲಾಗಿದೆ. ಶೌಚಾಲಯ, ವಾಹನ ನಿಲುಗಡೆ, ವಯಸ್ಸಾದವರು ಹಾಗೂ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವಾಹನದ ಮಾಡಲಾಗಿದೆ ಎಂದರು.

ಏ.1 ರಂದು ವೈರಮುಡಿ ಕಿರೀಟ ಧಾರಣೆ ಮಹೋತ್ಸವ ನಡೆಯಲಿದೆ. ರಾಜಮುಡಿ ಹಾಗೂ ವೈರಮುಡಿಯನ್ನು ಜಿಲ್ಲಾಖಜಾನೆಯಿಂದ ಮೇಲುಕೋಟೆಗೆ ತೆಗೆದುಕೊಂಡು ಹೋಗುವಾಗ ಮಾರ್ಗದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಜಿಲ್ಲಾ ಖಜಾನೆಯಿಂದ, ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಸ್ಥಾನ, ಇಂಡುವಾಳು, ತೂಬಿನಕೆರೆ, ಗಣಂಗೂರು,ಶೆಟ್ಟಿಹಳ್ಳಿ, ಕಿರಂಗೂರು ಬನ್ನಿಮಂಟಪ, ಕೂಡಲಕುಪ್ಪೆ ಗೇಟ್, ದರಸಗುಕುಪ್ಪೆ, ಪಾಂಡವಪುರ ರೈಲ್ವೆ ನಿಲ್ದಾಣ, ಕೆನ್ನಾಳು, ಪಾಂಡವಪುರ, ಹಿರೇಮರಳಿ ಗೇಟ್, ಬಣಘಟ್ಟ,ಟಿ.ಎಸ್.ಛತ್ರ,, ಮಹದೇಶ್ವರ ಪುರ, ಬೆಳ್ಳಾಳೆ, ಜಕ್ಕನಹಳ್ಳಿ, ತಗಲಕೆರೆ ಹಾಗೂ ಮೇಲುಕೋಟೆ ತಲುಪಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡ.ಹೆಚ್ ಎಲ್ ನಾಗರಾಜು, ವಾರ್ತಧಿಕಾರಿ ಎಸ್ ಹೆಚ್ ನಿರ್ಮಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬ್ರಹ್ಮೋತ್ಸವದ ವಿವರ: ಮಾರ್ಚ್ 27 ರಂದು ಶ್ರೀ ವೈರಮುಡಿ ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣ(ಮೃತ್ತಿಕಾ ಸಂಗ್ರಹಣೆ), ಮಾರ್ಚ್ 28 ರಂದು ಕಲ್ಯಾಣೋತ್ಸವ -ಧಾರಾಮಹೋತ್ಸವ -ಅಧಿವಾಸನ- ರಕ್ಷಾ ಬಂಧನ – ಧ್ವಜ ಪ್ರತಿಷ್ಠೆ, ಮಾರ್ಚ್ 29 ರಂದು ಧ್ವಜಾರೋಹಣ- ಶ್ರೀ ರಾಮಾನುಜಾಚಾರ್ಯರಿಗೆ ಅಭಿಷೇಕ,ಭೇರಿತಾಡನ- ತಿರುಪ್ಪರೈ – ಹಂಸವಾಹನ -ಯಾಗಶಾಲಾ ಪ್ರವೇಶ, ಮಾರ್ಚ್ 30 ರಂದು ಶ್ರೀರಾಮನವಮಿ -ಶೇಷವಾಹನ ಪಡಿಯೇತ್ತ, ಮಾರ್ಚ್ 31 ರಂದು ನಾಗವಲ್ಲಿ ಮಹೋತ್ಸವ- ನರಾಂಧೋಳಿಕಾರೋಹಣ -ಚಂದ್ರಮಂಡಲ ವಾಹನ -ಪಡಿಯೇತ್ತ, ಏಪ್ರಿಲ್ 1 ರಂದು ಶ್ರೀ ವೈರಮುಡಿ ಕಿರೀಟಧಾರಣ ಮಹೋತ್ಸವ- ಪಡೆಯೇತ್ತ, ಏಪ್ರಿಲ್ 2 ರಂದುಪ್ರಹ್ಲಾದ ಪರಿಪಾಲನ- ಗರುಡವಾಹನ- ವಿಶೇಷ ಪಡಿಯೇತ್ತ, ಏಪ್ರಿಲ್ 3 ರಂದು ಗಜೇಂದ್ರ ಮೋಕ್ಷ -ಅನೆವಸನ್ತ-ಕುದುರೆ ವಾಹನ -ಆನೆ ವಾಹನ ವಿಶೇಷ ಪಡಿಯೇತ್ತ, ಏಪ್ರಿಲ್ 4ರಂದು – ಶ್ರೀ ಮನ್ಮಹಾರಥೋತ್ಸವ ಯಾತ್ರಾದಾನ, ರಥೋತ್ಸವ, ಶ್ರೀ ಚೆಲುವರಾಯಸ್ವಾಮಿ ಮತ್ತು ಶ್ರೀವರಾಮಾನುಜರಿಗೆ ಅಭಿಷೇಕ ಅಮ್ಮನವರ ಸನ್ನಧಿಯಲ್ಲಿ ಬಂಗಾರ ಪಲ್ಲಕ್ಕಿ ಉತ್ಸವ, ಏಪ್ರಿಲ್ 5 ರಂದು ಪಂಗುನ್ಯುತ್ತರಮ್ – ತೆಪ್ಪೊತ್ಸವ – ಡೋಲೋತ್ಸವ ಕುದುರೆ ವಾಹನ – ಕಳ್ಳರ ಸುಲಿಗೆ, ಏಪ್ರಿಲ್ 6 ರಂದು ಶ್ರೀ ನಾರಾಯಣಸ್ವಾಮಿ ಜಯನ್ತಿ, ಸಂಧಾನ ಸೇವೆ – ಚೂರ್ಣಾಭಿಷೇಕ – ಅವಭೃಥ – ಪಟ್ಟಾಭಿಷೇಕ ಪುಷ್ಪಮಂಟಪಾರೋಹಣ – ಸಮರಭೂಪಾಲ ವಾಹನ – ಪಡಿಮಾಲೆ – ಪೂರ್ಣಾಹುತಿ, ಶಾತ್ತುಮೊರೈ, ಕುಂಭಪೆÇ್ರೀಕ್ಷಣೆ, ಏಪ್ರಿಲ್ 7 ರಂದು ಶ್ರೀ ನಾರಾಯಣ ಸ್ವಾಮಿಗೆ ಮಹಾಭಿಷೆÉೀಕ – ಪುಷ್ಪಯಾಗ – ಕತ್ತಲು ಪ್ರದಕ್ಷಿಣೆ – ಹನುಮಂತವಾಹನ – ಉದ್ಘಾಸನ ಪ್ರಬಂಧ, ಏಪ್ರಿಲ್ 8 ರಂದು ಶ್ರೀ ಅಮ್ಮನವರಿಗೆ ಶ್ರೀ ಯೋಗನರಸಿಂಹಸ್ವಾಮಿಗೆ ಮಹಾಭಿಷೇಕ- ಶೇರ್ತಿಸೇವೆ ಕೋಡೈ ತಿರುನಾಳ್ ಉತ್ಸವ ನಡೆಯಲಿದೆ.

Spread the love

Related post

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…
ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು… ಮಂಡ್ಯ,ಜ21,Tv10 ಕನ್ನಡಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ಕಾಲುಜಾರಿ ನೀರುಪಾಲಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಂಚೆಬೀರನಹಳ್ಳಿಯಲ್ಲಿ ನಡೆದಿದೆ.ಆನೆಗೋಳ ಗ್ರಾಮದ ರೈತ…
ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ… ಮೈಸೂರು,ಜ19,Tv10 ಕನ್ನಡ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಮಹತ್ತರ ಯೋಜನೆಯ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಗ್ರೀನ್…

Leave a Reply

Your email address will not be published. Required fields are marked *