ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ಮಾಧ್ಯಮ ಕಿಟ್ ವಿತರಣೆ

ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ಮಾಧ್ಯಮ ಕಿಟ್ ವಿತರಣೆ

ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ಮಾಧ್ಯಮ ಕಿಟ್ ವಿತರಣೆ

ಜನೋಪಯೋಗಿ ಮಾಹಿತಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ

ಬೆಂಗಳೂರು, ಮಾ.27(ಕರ್ನಾಟಕ ವಾರ್ತೆ): ಸಮಾಜ‌ ಸುಧಾರಣೆಯಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪತ್ರಕರ್ತರ ವೃತ್ತಿಗೆ ಅನುಕೂಲವಾಗುವಂತಹ ಲ್ಯಾಪ್‌ಟಾಪ್, ಕ್ಯಾಮೆರಾ ಮತ್ತಿತರ ಅಗತ್ಯ ಸಲಕರಣೆಗಳನ್ನು ಸರಕಾರದ ವತಿಯಿಂದ ನೀಡಲಾಗಿದ್ದು, ಇವುಗಳನ್ನು ಬಳಸಿಕೊಂಡು ಇನ್ನಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸೋಮವಾರ (ಮಾ.27) ನಡೆದ‌ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾಧ್ಯಮ‌ ಕಿಟ್ ವಿತರಿಸಿ ಅವರು ಮಾತನಾಡಿದರು.

ಪತ್ರಕರ್ತರು ಮಾಹಿತಿ ಸಂಗ್ರಹದ ಜತೆಗೆ ವಿಚಾರಸಂಗ್ರಹವನ್ನೂ ಹೆಚ್ಚಿಸಿಕೊಂಡು ಜನೋಪಯೋಗಿ ಮಾಹಿತಿಯನ್ನು ನೀಡಬೇಕು.
ಇದನ್ನು ಬಳಸಿಕೊಂಡು ಇನ್ನಷ್ಟು ‌ಪರಿಣಾಮಕಾರಿ‌ ಕೆಲಸ ಸಮಾಜ ಹಾಗೂ ವ್ಯವಸ್ಥೆಯ ಅಂಕುಡೊಂಕು ತಿದ್ದುವ ಕೆಲಸವನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಹಿಂದುಳಿದ ವರ್ಗಗಳ ಪತ್ರಕರ್ತರ ವೃತ್ತಿಗೆ ಸಹಕಾರಿಯಾಗುವಂತಹ ಕ್ಯಾಮೆರಾ, ಲ್ಯಾಪ್‌ಟಾಪ್ ಮತ್ತಿತರ ಗುಣಮಟ್ಟದ ಸಲಕರಣೆಗಳನ್ನು ಸರಕಾರದ ವತಿಯಿಂದ ನೀಡಲಾಗುತ್ತಿದೆ. ರಾಜ್ಯ ಎಲ್ಲ ಜಿಲ್ಲೆಗಳ ಒಟ್ಟು 605 ಜನರಿಗೆ ಅಗತ್ಯ ಸಲಕರಣೆಯನ್ನು ನೀಡಲಾಗುತ್ತಿದೆ.

ಹಿಂದೆ ಯಾವುದೇ ಸರಕಾರ ಈ ರೀತಿಯ ಮಾಧ್ಯಮ ಕಿಟ್ ನೀಡಿರಲಿಲ್ಲ. ಈ ಸಲಕರಣೆಗಳನ್ನು ಬಳಸಿಕೊಂಡು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಕೇಂದ್ರ ಸರಕಾರದ ಮಾಜಿ ಸಚಿವರಾದ ಡಿ.ವಿ.ಸದಾನಂದಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ, ಜಂಟಿ ನಿರ್ದೇಶಕರಾದ ಡಿ..ಪಿ.ಮುರಳೀಧರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.

ಆಯವ್ಯಯದಲ್ಲಿ ಘೋಷಿಸಿದಂತೆ ಹಿಂದುಳಿದ ವರ್ಗಗಳ ‌ಪತ್ರಕರ್ತರಿಗೆ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಮಾಧ್ಯಮ ಕಿಟ್ ವಿತರಿಸಿದರು.
**

Spread the love

Related post

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ… ಚಾಮರಾಜನಗರ,ಜು28,Tv10 ಕನ್ನಡ ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.ಕೊಡಗು ಜಿಲ್ಲೆ…
ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…

Leave a Reply

Your email address will not be published. Required fields are marked *