
ಆದಾಯ ಮೀರಿ ಆಸ್ತಿಗಳಿಕೆ ಆರೋಪ ಸಾಬೀತು…ಉಪಮೊಂದಣಾಧಿಕಾರಿಗೆ 4 ವರ್ಷ ಜೈಲು ಶಿಕ್ಷೆ…
- CrimeMysore
- March 28, 2023
- No Comment
- 137
ಆದಾಯ ಮೀರಿ ಆಸ್ತಿಗಳಿಕೆ ಆರೋಪ ಸಾಬೀತು…ಉಪಮೊಂದಣಾಧಿಕಾರಿಗೆ 4 ವರ್ಷ ಜೈಲು ಶಿಕ್ಷೆ…
ಮೈಸೂರು,ಮಾ28,Tv10 ಕನ್ನಡ
ಆದಾಯ ಮೀರಿ ಆಸ್ತಿಗಳಿಸಿದ ಆರೋಪ ಸಾಬೀತಾದ ಹಿನ್ನಲೆ ಉಪನೊಂದಣಾಧಿಕಾರಿಗೆ ಮೈಸೂರಿನ ಪೂರ್ವ ಉಪನೊಂದಣಾಧಿಕಾರಿ ಎಂ.ಗಿರೀಶ್ ಗೆ 4 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.ಸಾಕ್ಷಿಗಳನ್ನ ಪರಿಗಣಿಸಿದ 3 ನೇ ಸತ್ರ ನ್ಯಾಯಾಲಯ ಹಾಗೂ ವಿಶೇಷ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶೆ ಕೆ.ಭಾಗ್ಯ ರವರು ತೀರ್ಪು ಪ್ರಕಟಿಸಿದ್ದಾರೆ.2014 ರಲ್ಲಿ ಗುರುಮಂಟೇಸ್ವಾಮಿ ಎಂಬುವರು ದೂರು ನೀಡಿದ ಹಿನ್ನಲೆ ಪೊಲೀಸ್ ನಿರೀಕ್ಷಕರಾದ ಜಗದೀಶ್ ಪ್ರಸಾದ್ ಪ್ರಕರಣ ದಾಖಲಿಸಿಕೊಂಡಿದ್ದರು.ಪೊಲೀಸ್ ನಿರೀಕ್ಷಕರುಗಳಾದ ನಟರಾಜ್,ಗೋಪಾಲಕೃಷ್ಣ,ಪರಶುರಾಮ್ ಹಾಗೂ ಬಾಲಕೃಷ್ಣ ರವರು ತನಿಖೆ ನಡೆಸಿ ಶೇ.58.77 ರಷ್ಟು ಆಸ್ತಿ ಅಧಿಕವಾಗಿದೆ ಎಂದು 77 ಮಂದಿ ಸಾಕ್ಷಿದಾರರ ಸಮೇತ ಅಂತಿಮ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ವಾದ ವಿವಾದಗಳನ್ನ ಆಲಿಸಿದ ನ್ಯಾಯಾಧೀಶರು ಆರೋಪಿಯನ್ನ ಧೋಷಿ ಎಂದು ಪರಿಗಣಿಸಿ 4 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಲಾಗಿದೆ.ಪ್ರಕರಣದ ವಾದವನ್ನ ಲೋಕಾಯುಕ್ತ ವಿಶೇಷ ಅಭಿಯೋಜಕಿ ಕಲಿಯಂಡ ಮುತ್ತಮ್ಮ ಪೂಣಚ್ಚ ವಾದ ಮಂಡಿಸಿದ್ದಾರೆ.