ದೈವ ಸೂಚನೆಗೆ ಬದ್ದರಾದರಾ ಸಿದ್ದರಾಮಯ್ಯ…ಹಾಗೇ ಎನಿಸುತ್ತಿದೆ ಇತ್ತೀಚಿನ ಬೆಳವಣಿಗೆ…

ದೈವ ಸೂಚನೆಗೆ ಬದ್ದರಾದರಾ ಸಿದ್ದರಾಮಯ್ಯ…ಹಾಗೇ ಎನಿಸುತ್ತಿದೆ ಇತ್ತೀಚಿನ ಬೆಳವಣಿಗೆ…

  • Politics
  • March 29, 2023
  • No Comment
  • 227

ದೈವ ಸೂಚನೆಗೆ ಬದ್ದರಾದರಾ ಸಿದ್ದರಾಮಯ್ಯ…ಹಾಗೇ ಎನಿಸುತ್ತಿದೆ ಇತ್ತೀಚಿನ ಬೆಳವಣಿಗೆ…

ಮೈಸೂರು,ಮಾ29,Tv10 ಕನ್ನಡ
ದೇವರು ನೀಡಿದ ಸೂಚನೆ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬದ್ದರಾಗುತ್ತಿದ್ದಾರಾ ಎಂಬ ಮಾತು ನಿಜವಾಗುತ್ತಿದೆ.ಬೊಟ್ಟೆನಹಳ್ಳಿ ಗ್ರಾಮದ ಆದಿನಾಡು ಚಿನ್ನಮ್ಮ ದೇವಾಲಯದ ಅರ್ಚಕರ ಮೇಲೆ ದೇವಿ ಬಂದು ಎರಡು ಕಡೆ ಸ್ಪರ್ಧಿಸುವಂತೆ ಸೂಚನೆ ನೀಡಿತ್ತು.ದೇವಿಯ ಮಾತಿಗೆ ಪುಷ್ಟಿ ನೀಡುವಂತೆ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ.ದೇವಿ ನೀಡಿದ ಸಲಹೆ ಸಿದ್ದರಾಮಯ್ಯ ಪಾಲಿಸುತ್ತಿದ್ದಾರೆ ಎ ಎಂಬಂತಿದೆ ಇತ್ತೀಚಿನ ರಾಜಕೀಯ ಬಳವಣಿಗೆ.ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ
ಸಿದ್ದರಾಮಯ್ಯನವರ ಹೆಸರನ್ನು ಈಗಾಗಲೇ ವರುಣದಿಂದ ಸ್ಪರ್ಧಿಸಲು ಸೂಚಿಸಿದೆ. ಆದರೆ ಸಿದ್ದರಾಮಯ್ಯನವರು ನಾನು ಕೋಲಾರದಿಂದಲೂ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಸಿದ್ದರಾಮನವರು 2 ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಯೇ ಎಂಬುದಕ್ಕೆ ಕಾಂಗ್ರಸ್ ಹೈ ಕಮಾಂಡ್ ಇನ್ನೂ ಅಧಿಕೃತವಾಗಿ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.
ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಸಿದ್ದು ಹೆಸರನ್ನು ಸೂಚಿಸಿದೆ. ಆದರೆ ಕೋಲಾರ ಹಾಗೂ ಬಾದಾಮಿಗೆ ಯಾವುದೆ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿಲ್ಲ.
ಕಾಂಗ್ರೆಸ್ ನ ಈ ನಡೆಯಿಂದ ಸಿದ್ದು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಪಕ್ಕಾ ಎಂಬಂತೆ ಭಾಸವಾಗುತ್ತಿದೆ. ಜನವರಿ ತಿಂಗಳಲ್ಲಿ ಬೊಟ್ಟೆನ ಹಳ್ಳಿ ಗ್ರಾಮದಲ್ಲಿನ ಆದಿನಾಡು ಚಿನ್ನಮ್ಮ ದೇವಸ್ಥಾನಕ್ಕೆ ಸಿದ್ದರಾಮಯ್ಯನವ ಪುತ್ರ ಹಾಗೂ ವರುಣಾ ಶಾಸಕ ಯತೀಂದ್ರ ಅವರು ತೆರಳಿದ್ದಾಗ ದೇವಾಲಯದ ಅರ್ಚಕರ ಮೈಮೇಲೆ ದೇವಿ ಆವಾಹನೆಯಾಗಿ 2 ಕ್ಷೇತ್ರದಲ್ಲಿ ಸಿದ್ದರಾಮಯ್ಯ ನಿಲ್ಲುವಂತೆ ಸೂಚಿಸಿ, ಒಂದೇ ಕ್ಷೇತ್ರದಲ್ಲಿ ನಿಂತರೆ ಸಮಸ್ಯೆ ಎಂದು ಹೇಳಿ ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ಸೂಚಿಸಿತ್ತು.ದೇವಿಯ ಸೂಚನೆಯಂತೆ ಸಿದ್ದರಾಮಯ್ಯ ಇದೀಗ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಅಂದು ಯತೀಂದ್ರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 2 ಕಡೆ ನಿಲ್ಲುವಂತೆ ದೇವಿ ಹೇಳಿರುವುದು ನಿಜ. ಆದರೆ 2 ಕ್ಷೇತ್ರಗಳಲ್ಲಿ ನಮ್ಮ ತಂದೆ ಅವರು ನಿಲ್ಲುವುದಿಲ್ಲ. ಕೋಲಾರದಿಂದಲೇ ಸ್ಪರ್ಧಿಸಲಿದ್ದಾರೆಂದು ಯತಿಂದ್ರ ಹೇಳಿದ್ದರು.ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಎನ್ನುತ್ತಿದ್ದ ಸಿದ್ದರಾಮಯ್ಯ ಎರಡು ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ.ಹೀಗಾಗಿ ದೇವಿಯ ಸೂಚನೆ ಪಾಲಿಸಲು ಖಡಕ್ ಆಗಿ ರೆಡಿಯಾಗುತ್ತಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *