5 ರೌಡಿ ಶೀಟರ್ ಗಳಿಗೆ ಗಡೀಪಾರು…ಚುನಾವಣೆ ಹಿನ್ನಲೆ ಚಾಟಿ ಬೀಸಿದ ಮೈಸೂರು ಖಾಕಿ ಪಡೆ…
- CrimeMysore
- March 29, 2023
- No Comment
- 74
ಮೈಸೂರು,ಮಾ29,Tv10 ಕನ್ನಡ
ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಮೈಸೂರು ನಗರ ಪೊಲೀಸರು ಭಯಮುಕ್ತ ವಾತಾವರಣ ನಿರ್ಮಿಸಲು ಮುಂದಾಗಿದ್ದಾರೆ.ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರು ನಗರದ 5 ರೌಡಿ ಶೀಟರ್/ಎಂ.ಓ.ಆಸಾಮಿಗಳನ್ನ ಗಡೀಪಾರು ಮಾಡಿದ್ದಾರೆ.5 ಮಂದಿ ರೌಡಿ ಶೀಟರ್ ಗಳು ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಸುತ್ತಿರುವ ಹಿನ್ನಲೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎನ್.ಮುತ್ತುರಾಜ್ ರವರು ಗಡೀಪಾರು ಆದೇಶ ಹೊರಡಿಸಿದ್ದಾರೆ.
ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಯಶವಂತ್@ಯಶು@ಮಿಕ್ಕಿ ಯನ್ನ 4 ತಿಂಗಳ ಕಾಲ ಶಿವಮೊಗ್ಗ ಜಿಲ್ಲೆಗೆ, ಎನ್.ಆರ್.ಹಾಗೂ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬಾನ್.ಆ.ಕೊಯ್ತಾಬಾಬು ವನ್ನ 4 ತಿಂಗಳ ಕಾಲ ಚಿಕ್ಕಬಳ್ಳಾಪುರ ಜಿಲ್ಲೆಗೆ,ಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣ.@.ಕಿಟ್ಟಿ ಯನ್ನ 5 ತಿಂಗಳ ಕಾಲ ದಾವಣಗೆರೆ ಜಿಲ್ಲೆಗೆ,ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಸೈಯದ್ ಅಯೂಬ್.@.ಬಿಡ್ಡ ವನ್ನ 5 ತಿಂಗಳ ಕಾಲ ಚಿಕ್ಕಮಂಗಳೂರು ಜಿಲ್ಲೆಗೆ ಹಾಗೂ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ತೌಸೀಫ್ ಖಾನ್.@.ಡಾನ್ ಗೆ 5 ತಿಂಗಳ ಕಾಲ ಚಿಕ್ಕಬಳ್ಳಾಪುರ ಜಿಲ್ಲೆಗೆ ಗಡೀಪಾರು ಮಾಡಿ ಆದೇಶಿಸಿರುತ್ತಾರೆ.
ಈ ಎಲ್ಲಾ ರೌಡಿ ಶೀಟರ್ ಗಳು ವಿವಿದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಎಚ್ಚರಿಕೆಯ ನಡುವೆಯೂ ಅಪರಾಧ ಚಟುವಟಿಕೆಗಳನ್ನ ಮುಂದುವರೆಸಿ ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನ ನಡೆಸಿರುತ್ತಾರೆ.ಈ ಹಿನ್ನಲೆ ನಗರ ಪೊಲೀಸರು ಗಡೀಪಾರು ಆದೇಶ ಹೊರಡಿಸಿದ್ದಾರೆ.
ಯಾವುದೇ ವ್ಯಕ್ತಿಗಳು ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದ್ದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಎಚ್ಚರಿಕೆ ನೀಡಿದ್ದಾರೆ…