ಏಪ್ರಿಲ್ 5 ರಂದು ಬಾಬು ಜಗಜೀವನ ರಾಮ್ ಹಾಗೂ ಏಪ್ರಿಲ್ 14 ರಂದು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ: ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು
- TV10 Kannada Exclusive
- March 30, 2023
- No Comment
- 96
ಏಪ್ರಿಲ್ 5 ರಂದು ಬಾಬು ಜಗಜೀವನ ರಾಮ್ ಹಾಗೂ ಏಪ್ರಿಲ್ 14 ರಂದು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ: ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು
ಮಂಡ್ಯ,ಮಾ,30:-ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏಪ್ರಿಲ್ 5 ರಂದು ಡಾ.ಬಾಬು ಜಗಜೀವನ ರಾಮ್ ಹಾಗೂ ಏಪ್ರಿಲ್ 14 ರಂದು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಛೇರಿಯ ಪಾರ್ಕ್ ಬಳಿಯಿರುವ ಅಂಬೇಡ್ಕರ್ ಪುತ್ತಳಿ ಮುಂಭಾಗ ಅರ್ಥಪೂರ್ಣವಾಗಿ ಆಚರಿಸಲು ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ನೀತಿ ಸಂಹಿತೆಗೆ ಅಡ್ಡಿಯಾಗದಂತೆ ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು. ಜಂಯತಿಗಳು ನಡೆಯುವ ದಿನಗಳಂದು ಯಾವುದೇ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಕರೆತಂದು ಭಾಷಣ ಮಾಡಿಸಬಾರದು ಹಾಗೂ ಭಾಷಣಕಾರರು ರಾಜಕೀಯವಾಗಿ ಮಾತನಾಡಬಾರದು ಎಂದು ಹೇಳಿದರು.
ಮಹಾನ್ ವ್ಯಕ್ತಿಗಳ ಜಯಂತಿಯನ್ನು ಕೇವಲ ಒಂದು ವರ್ಗ ಮತ್ತು ಒಂದು ಸ್ಥಳಕ್ಕೆ ಸೀಮಿತ ಮಾಡಬಾರದು ಎಂದರು. ಜಯಂತಿಗಳ ದಿನದಂದು ಎಲ್ಲಾ ಶಾಲಾ ಕಾಲೇಜಿನಲ್ಲಿ ವ್ಯಕ್ತಿಗಳ ತತ್ವ ಹಾಗೂ ಆದರ್ಶಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.
ಸರ್ಕಾರಿ ಕಛೇರಿಯನ್ನು ದೀಪಲಂಕಾರಗೊಳಿಸಿ ಎಲ್ಲಾ ಅಧಿಕಾರಿ ಖುದ್ದು ಹಾಜರಿದ್ದು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ಸಿದ್ದಲಿಂಗೇಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯ ಶ್ರೀ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖಾಧಿಕಾರಿ ಓಂಪ್ರಕಾಶ್, ಪ್ರಾದೇಶಿಕ ಸಾರಿಗೆ ಇಲಾಖಾಧಿಕಾರಿ ವಿವೇಕಾನಂದ, ಸಮಾಜದ ಮುಖಂಡರುಗಳಾದ ವಿಜಯಲಕ್ಷ್ಮಿ ಲಘುನಂದನ್, ಗುರುಪ್ರಸಾದ್ ಕೆರಗೋಡು, ತುಳಸಿದಾಸ್, ಪತ್ರಕರ್ತರಾದ ಸೋಮಶೇಖರ್ ಕೆರಗೋಡು ಸೇರಿದಂತೆ ಇನ್ನಿತರರು ಹಾಜರಿದ್ದರು.