ಹುಣಸೂರಿನಲ್ಲಿ ಯಶಸ್ವಿ ಚುನಾವಣೆಗೆ ತಾಲೂಕು ಆಡಳಿತ ಸಜ್ಜು…ಉಪವಿಭಾಗಾಧಿಕಾರಿ ರಚ್ಚು ಬಿಂದಾಲ್…
- Politics
- March 30, 2023
- No Comment
- 86
ಹುಣಸೂರು,ಮಾ30,Tv10 ಕನ್ನಡ
ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಯಶಸ್ವಿಗೊಳಿಸಲು ತಾಲೂಕು ಆಡಳಿತ ಸಜ್ಜಾಗಿದೆ.ಈ ಬಗ್ಗೆ ಪತ್ರಿಕಾಗೋಷ್ಡಿ ನಡೆಸಿದ ಹುಣಸೂರು ಉಪವಿಭಾಗಾಧಿಕಾರಿಗಳಾದ ರಚ್ಚು ಬಿಂದಾಲ್ ಮಾಹಿತಿ ನೀಡಿದ್ದಾರೆ.
ಚುನಾವಣೆ ವೇಳೆ ಸಾಮಾಜಿಕ ಜಾಲತಾಣದ ಬಗ್ಗೆ ಎಚ್ಚರವಿರಲಿ ಎಂದು ಸಲಹೆ ನೀಡಿದ್ದಾರೆ. ಚುನಾವಣಾ ಅಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಚುನಾವಣಾ ಆಯೋಗದ ನಿರ್ದೇನದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ, ಅಕ್ರಮ ಕಂಡುಬಂದಲ್ಲಿ ಸಾರ್ವಜನಿಕರು 08222-251550ಗೆ ದೂರು ನೀಡುವಂತೆ ಮನವಿ ಮಾಡಿದ್ದಾರೆ.
ತಾಲೂಕಿನಲ್ಲಿ 273 ಮತ ಕೇಂದ್ರಗಳಿದ್ದು, 55 ಸೂಕ್ಷ್ಮ,3 ಅತೀಸೂಕ್ಷ್ಮ ಮತಕೇಂದ್ರಗಳಿವೆ. ಐದು ಫ್ಲೈಯಿಂಗ್ ಸ್ಕ್ವಾಡ್, ಐದು ಚೆಕ್ಕಿಂಗ್ ಸ್ಕ್ವಾಡ್ ತಂಡವು ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಮೂರು ವಿಡಿಯೋ ಚಿತ್ರೀಕರಣ ತಂಡವು ತಾಲೂಕಿನಾದ್ಯಂತ ಪಕ್ಷಗಳು ನಡೆಸುವ ಕಾರ್ಯಕ್ರಮಗಳನ್ನ ಚಿತ್ರೀಕರಣಗೊಳಿಸಲಿದ್ದಾರೆ. ಐದು ಕಡೆ ಚೆಕ್ ಪೋಸ್ಟ್ ಅಳವಡಿಸಲಾಗಿದೆ.ತಾಲೂಕು ಪ್ರವೇಶಿಸುವ ಮನುಗನಹಳ್ಳಿ, ವೀರನಹೊಸಹಳ್ಳಿ, ಚಿಲ್ಕುಂದ, ಗಾವಡಗೆರೆ, ಮುತ್ತುರಾಯನಹೊಸಹಳ್ಳಿಗಳಲ್ಲಿ ಒಟ್ಟು ಐದು ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು ಬುಧವಾರದಿಂದಲೇ ತಪಾಸಣೆ ನಡೆಯಲಿದೆ. ತಾಲೂಕಿನಲ್ಲಿ ಯಾವುದೇ ಹಬ್ಬ, ಸಭೆ,ಸಮಾರಂಭ, ಮದುವೆ ಸೇರಿದಂತೆ ಸಾರ್ವಜನಿಕರು ಸೇರುವ ಯಾವುದೇ ಸಮಾರಂಭ ಹಾಗೂ ಪಕ್ಷಗಳು ನಡೆಸುವ ಸಭೆ, ಸಮಾವೇಶಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇದಕ್ಕಾಗಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕಂದಾಯ, ಪೊಲೀಸ್, ಫೈರ್, ತಾ.ಪಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಇದ್ದು, ಒಂದೇ ಕಡೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಯಾವುದೇ ಫ್ಲೆಕ್ಸ್ ಅಳವಡಿಕೆಗೆ ಅನುಮತಿ ಕಡ್ಡಾಯ.ನಿಗದಿತ ಸ್ಥಳ ಹೊರತುಪಡಿಸಿ ಬೇರೆಡೆ ಅಳವಡಿಸುವಂತಿಲ್ಲ.
ಚುನಾವಣಾ ಕಾರ್ಯಕ್ಕಾಗಿಯೇ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ಆರಂಭಿಸಲಾಗಿದ್ದು, 24*7 ಮಾದರಿಯಲ್ಲಿ ಅಧಿಕಾರಿಗಳು ಸರದಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ದೂ.ಸಂ. 08222-251550ಗೆ ದೂರು ನೀಡಬಹುದು. ಸಾರ್ವಜನಿಕರು ಅಕ್ರಮ ಕಂಡುಬಂದಲ್ಲಿ ದೂರು ಸಲ್ಲಿಸುವಂತೆ ಮನವಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ರಾಜಕಾರಣ, ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಯಾವುದೇ ಪೋಸ್ಟ್, ಆರೋಪ-ಪ್ರತ್ಯಾರೋಪ ಮಾಡುವಂತಿಲ್ಲ. ಇದನ್ನು ಗಮನಿಸಲು ಪ್ರತ್ಯೇಕ ತಂಡವಿದ್ದು ಅಕ್ರಮ ಕಂಡುಬಂದಲ್ಲಿ ಪ್ರಕರಣ ದಾಖಲಿಸಲಾಗುವುದೆಂದು ತಾಲೂಕು ಚುನಾವಣಾಧಿಕಾರಿ ರುಚಿ ಬಿಂದಾಲ್ ಎಚ್ಚರಿಸಿದ್ದಾರೆ.
ಈ ಬಾರಿ ಹುಣಸೂರು ತಾಲೂಕಿನಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಎಂಬಂತೆ 5,500 ಮಂದಿ ಪ್ರಥಮ ಮತ ಚಲಾಯಿಸುವ ಯುವ ಜನರಿರುವುದು ವಿಶೇಷವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗೋಷ್ಟಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಡಾ.ಅಶೋಕ್, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ತಾ ಪಂ.ಇಓ.ಮನು ಬಿ.ಕೆ, ಪ್ರಬೇಷನರಿ ತಹಸೀಲ್ದಾರ್ ನೂರಲ್‌ಹುಧಾ, ಉಪತಹಸೀಲ್ದಾರ್ ಶಕಿಲಾಬಾನು ಹಾಜರಿದ್ದರು…