ಹೆಚ್.ಡಿ.ಕೋಟೆ ಜೆಡಿಎಸ್ ನಲ್ಲಿ ಭಿನ್ನಮತ…ಬಂಡಾಯದ ಬಿಸಿ…ಕಾರ್ಯಕರ್ತರಲ್ಲಿ ಗೊಂದಲ…
- Politics
- April 2, 2023
- No Comment
- 117
ಹೆಚ್.ಡಿ.ಕೋಟೆ ಜೆಡಿಎಸ್ ನಲ್ಲಿ ಭಿನ್ನಮತ…ಬಂಡಾಯದ ಬಿಸಿ…ಕಾರ್ಯಕರ್ತರಲ್ಲಿ ಗೊಂದಲ…
ಹೆಚ್.ಡಿ.ಕೋಟೆ,ಏ2,Tv10 ಕನ್ನಡ
ಹೆಚ್.ಡಿ ಕೋಟೆ ಜೆಡಿಎಸ್‌ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಕಾರ್ಯಕರ್ತರಲ್ಲಿ ಗೊಂದಲ ಶುರುವಾಗಿದೆ.
ಜೆಡಿಎಸ್‌ಗೆ ಬಂಡಾಯ ಬಿಸಿ ತಟ್ಟಿದೆ.
ಹೆಚ್‌ಡಿ ಕೋಟೆ ಜೆಡಿಎಸ್ ಟಿಕೆಟ್ ಕೈತಪ್ಪುವ ಭೀತಿಯಿಂದ
ಆಕಾಂಕ್ಷಿ ಕೃಷ್ಣನಾಯಕ ರೆಬೆಲ್ ಆಗಲಿದ್ದಾರೆ.
ಎಚ್.ಡಿ.ಕೋಟೆಯಲ್ಲಿ ಜೆಡಿಎಸ್ ಇಭ್ಭಾಗ ಬಣಗಳಾಗುತ್ತಿವೆ.ಆಕಾಂಕ್ಷಿಗಳಾದ ಜಯಪ್ರಕಾಶ್ ಚಿಕ್ಕಣ್ಣ, ಕೃಷ್ಣನಾಯಕ ಬಣಗಳು ಸೃಷ್ಟಿಯಾಗಿದೆ.ಅಭ್ಯರ್ಥಿ ಯಾರು ಎಂಬ ಬಗ್ಗೆ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ.ಈ ಇಬ್ಬರ ಜಗಳದಿಂದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಅನಿಲ್ ಚಿಕ್ಕಮಾದುಗೆ ಅನುಕೂಲವಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.
ಹೆಚ್.ಡಿ ಕೋಟೆಯಲ್ಲಿ ಇತಿಹಾಸ ಸೃಷ್ಟಿಸಲಿದ್ದಾರಾ ಅನಿಲ್ ಚಿಕ್ಕಮಾದು ಎಂಬ ಮಾತು ಕೇಳಿ ಬರುತ್ತಿದೆ.
ಎರಡನೇ ಭಾರಿಗೆ ಇದುವರೆಗೂ ಯಾವುದೇ ಅಭ್ಯರ್ಥಿ ಸತತವಾಗಿ ಈ ಕ್ಷೇತ್ರದಲ್ಲಿ ಆಯ್ಕೆ ಆಗಿಲ್ಲ. ಹಾಗೊಮ್ಮೆ ಅನಿಲ್ ಚಿಕ್ಕಮಾದು ಜಯಭೇರಿ ಬಾರಿಸಿದ್ದಲ್ಲಿ ಇತಿಹಾಸ ಸೃಷ್ಟಿಸಿದಂತಾಗುತ್ತದೆ.
ಎಚ್.ಡಿ.ಕೋಟೆಯ ಜೆಡಿಎಸ್ ನಲ್ಲಿ ಕೃಷ್ಣನಾಯಕ ಬೆಂಬಲಿಗರ ಸಭೆ ನಡೆಸಿದ್ದಾರೆ.
ಬೇರೆ ಪಕ್ಷದವರು ಆಹ್ವಾನ ಮಾಡಿದ್ದಾರೆ.
ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ಕೇಳಿದ್ದೇನೆ.ಒಪ್ಪದೆ ಇದ್ದರೆ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು
ಸಭೆಯಲ್ಲಿ ಕೃಷ್ಣನಾಯಕ ಘೋಷಣೆ ಮಾಡಿದ್ದಾರೆ.
ಕೃಷ್ಣನಾಯಕ ತುಮಕೂರು ಮೂಲದ ಉದ್ಯಮಿ.ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ಕೋವಿಡ್ ಸಂದರ್ಭದಲ್ಲಿ ಎಚ್.ಡಿ.ಕೋಟೆಗೆ ಬಂದಿದ್ದರು.
ಎರಡೂವರೆ ವರ್ಷದಿಂದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.
ಇದೀಗ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್‌ಗೆ ವರಿಷ್ಠರು ಟಿಕೆಟ್ ಖಚಿತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೃಷ್ಣನಾಯಕ ಬಿಜೆಪಿ ಸಂಪರ್ಕಿಸಿದ್ದಾರೆ.
ಅಲ್ಲಿನ ವರಿಷ್ಠರಿಂದಲೂ ಸ್ಪಷ್ಟ ಮಾರ್ಗದರ್ಶನ ಸಿಗದ ಹಿನ್ನೆಲೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ…