ಮಂಡ್ಯದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಧ್ವಜಕ್ಕೆ ಗೌರವ ವಂದನೆ ಸಲ್ಲಿಸುವ ಮೂಲಕ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಯಿತು.
- TV10 Kannada Exclusive
- April 2, 2023
- No Comment
- 95
ಜಿಲ್ಲೆಯಲ್ಲಿ ಪೊಲೀಸ್ ಧ್ವಜ ದಿನಾಚರಣೆ
ಮಂಡ್ಯದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಧ್ವಜಕ್ಕೆ ಗೌರವ ವಂದನೆ ಸಲ್ಲಿಸುವ ಮೂಲಕ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಯಿತು.
ಮುಖ್ಯಾ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಎಸ್. ರಮೇಶ್ ಇದೇ ವೇಳೆ ಪೊಲೀಸ್ ಧ್ವಜದ ಸ್ಟಿಕರ್ ಬಿಡುಗಡೆ ಮಾಡಿ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪರಿವೀಕ್ಷಣೆ ನಡೆಸಿದರು.
ಬಳಿಕ ಮಾತನಾಡಿದ ಅವರು ಪೊಲೀಸ್ ಠಾಣೆಗೆ ಬಂದ ದೂರಗಳನ್ನ ನಾವು ಪರಿಗಣಿಸಿ ಕೆಲಸ ಮಾಡುವುದರ ಜೊತೆಗೆ ನೊಂದವರಿಗೆ ಪರಿಹಾರ ಕೊಟ್ಟು ನ್ಯಾಯ ಸಿಗುವಂತೆ ಮಾಡಬೇಕು ಎಂದರು.
ಪೊಲೀಸರಿಂದ ಅಮಾಯಕರಿಗೆ ಹಾಗುವ ತೊಂದರೆಗಳನ್ನು ತಪ್ಪಿಸುವ ಕೆಲಸ ಮಾಡಿದಾಗ ಸಮಾಜದಲ್ಲಿ ಪೊಲೀಸ್ ಇಲಾಖೆಗೆ ಗೌರವ ಹಾಗೂ ಪೊಲೀಸರ ಮೇಲೆ ಒಳ್ಳೆಯ ಭಾವನೆ ಬರುತ್ತದೆ ಎಂದು ಹೇಳಿದರು.
ನಮ್ಮ ವೃತ್ತಿಯನ್ನ ಮೈಗೂಡಿಸಿಕೊಂಡು ಯಶಸ್ಸು ಗಳಿಸಬೇಕು, ಸಮಾಜ ಒಳ್ಳೆಯ ಸ್ಥಿತಿಯಲ್ಲಿದೆ ಅಂದ್ರೆ ಅದಕ್ಕೆ ಪೊಲೀಸ್ ಇಲಾಖೆ ಕಾರಣ. ಪೊಲೀಸರು ಸಮಾಜದ ಆಧಾರದ ಕಂಬ ಇದ್ದ ಹಾಗೇ. ಶ್ರದ್ಧೆಯಿಂದ ನಾವು ಕೆಲಸ ಮಾಡುದ್ರೆ ಪೊಲೀಸ್ ಇಲಾಖೆಗೆ ಗೌರವ ತರಬಹುದು ಎಂದು ಪೊಲೀಸರಿಗೆ ಕಿವಿ ಮಾತು ಹೇಳಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಸ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.