ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದ ಕಾಂಗ್ರೆಸ್…ಮಾಜಿ ಸಿಎಂ ಸಿದ್ದು ಫಿಕ್ಸ್…?ವರುಣಾ ಕ್ಷೇತ್ರದ ಮತದಾರರ ಮೇಲೆ ಸಿದ್ದು ನಂಬಿಕೆ ಕಳಕೊಂಡ್ರಾ…?ಚಾಮುಂಡೇಶ್ವರಿ ಸೋಲಿನ ಕಹಿ ಮರೆತಿಲ್ವಾ…?
- Politics
- April 7, 2023
- No Comment
- 75
ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದ ಕಾಂಗ್ರೆಸ್…ಮಾಜಿ ಸಿಎಂ ಸಿದ್ದು ಫಿಕ್ಸ್…?ವರುಣಾ ಕ್ಷೇತ್ರದ ಮತದಾರರ ಮೇಲೆ ಸಿದ್ದು ನಂಬಿಕೆ ಕಳಕೊಂಡ್ರಾ…?ಚಾಮುಂಡೇಶ್ವರಿ ಸೋಲಿನ ಕಹಿ ಮರೆತಿಲ್ವಾ…?
ಮೈಸೂರು,ಏ7,Tv10 ಕನ್ನಡ
ಅಂತೂ ಇಂತೂ ತೀವ್ರ ಕಸರತ್ತು ನಡೆಸಿದ ಕಾಂಗ್ರೆಸ್ ಹೈ ಕಮಾಂಡ್ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.
2ನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳ ಘೋಷಣೆ ಮಾಡಿದೆ.ಇದರಲ್ಲಿ ಕುತೂಹಲ ಕೆರಳಿಸಿರುವ ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಣೆ ಮಾಡಿಲ್ಲ.
ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ಧಿಸಲು ಬಯಸಿದ್ದಾರೆ. ಒಂದೆಡೆ ಇದಕ್ಕೆ ಹೈ ಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎನ್ನುವಂತಾಗಿದೆ ಕೋಲಾರಕ್ಕೆ ಇನ್ನೂ ಅಭ್ಯರ್ಥಿ ಘೋಷಿಸಿಲ್ಲದಿರುವುದನ್ನು ನೋಡಿದರೆ.
ಹಾಗಿದ್ದಲ್ಲಿ ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ಧಿಸುತ್ತಾರೆ ಎಂಬ ಮಾತು ನಿಜವಾಗುವ ಸಾಧ್ಯತೆ ಹೆಚ್ಚಾಗಿದೆ.
ಕಳೆದ ಚುನಾವಣೆಯಂತೆ ಈ ಬಾರಿಯೂ ಸಿದ್ದರಾಮಯ್ಯ ಎರಡು ಕ್ಷೇತ್ರಗಳನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಸ್ಪರ್ಧಿಸಿ ತಮ್ಮ ಸ್ಥಾನ ಉಳಿಸಿಕೊಂಡಿದ್ದರು.ಈ ಬಾರಿಯೂ ಇದೇ ನಿರ್ಧಾರಕ್ಕೆ ಬಂದಿರುವುದನ್ನ ಗಮನಿಸಿದರೆ 2018 ರ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಕಹಿಯನ್ನ ಇನ್ನೂ ಮರೆತಂತೆ ಕಾಣಿಸುತ್ತಿಲ್ಲ.ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಎರಡು ಬಾರಿ ಸಿದ್ದರಾಮಯ್ಯರನ್ನ ಆಯ್ಕೆ ಮಾಡಿರುವ ವರುಣಾ ಕ್ಷೇತ್ರದ ಮತದಾರರು (2008,2013) ಈ ಬಾರಿ ಕೈ ಕೊಡುತ್ತಾರೆ ಎಂಬ ಭೀತಿ ಇರಬಹುದೇ ಎಂಬುದು.
ಎರಡು ಬಾರಿ ಸಿದ್ದರಾಮಯ್ಯ ರನ್ನ ಆಯ್ಕೆ ಮಾಡಿದ್ದಾರೆ ಮತ್ತೊಮ್ಮ ಪುತ್ರ ಡಾ.ಯತೀಂದ್ರ ರನ್ನೂ ಸಹ ಆಯ್ಕೆ ಮಾಡಿದ್ದಾರೆ ವರುಣಾ ಮತದಾರ.
ವರುಣಾ ಕ್ಷೇತ್ರ ಘೋಷಣೆಯಾದ ನಂತರ ಇಲ್ಲಿನ ಮತದಾರರು ಸಿದ್ದರಾಮಯ್ಯರನ್ನೇ ಆಯ್ಕೆ ಮಾಡುತ್ತಾ ಬಂದಿದ್ದಾರೆ.ಹೀಗಿದ್ದೂ ಸಿದ್ದರಾಮಯ್ಯರವರಿಗೆ ಅಳುಕು ಶುರುವಾಗಿರುವುದು ಕಂಡು ಬರುತ್ತಿದೆ.
ಚಾಮುಂಡೇಶ್ವರಿ ಸೋಲಿನ ಕಹಿಯಿಂದ ಹೊರಬಾರದ ಸಿದ್ದರಾಮಯ್ಯ ಮತ್ತೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.ಸಿದ್ದರಾಮಯ್ಯ ರವರ ತೀರ್ಮಾನ ವರುಣಾ ಕ್ಷೇತ್ರದ ಮತದಾರರಿಗೂ ಅಚ್ಚರಿ ಮೂಡಿಸುತ್ತಿದೆ.ಸಿದ್ದರಾಮಯ್ಯ ಯಾಕೆ ವರುಣ ಮತದಾರರನ್ನು ನಂಬುತ್ತಿಲ್ಲ ಎಂಬ ಪ್ರಶ್ನೆ ವರುಣಾ ಕ್ಷೇತ್ರದ ಮತದಾರರಲ್ಲಿ ಮೂಡಿದೆ.
ಮೇಲ್ನೋಟಕ್ಕೆ ವರುಣಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ತೀನಿ. ಪ್ರಚಾರಕ್ಕೂ ಬರುವುದಿಲ್ಲ ಎಂದು ವಿಶ್ವಾಸದಿಂದ ಸಿದ್ದರಾಮಯ್ಯ ಹೇಳುತ್ತಾ ಬಂದರೂ ಎಲ್ಲೋ ಒಂದು ಕಡೆ ಅಳುಕಿರುವುದು ಕಂಡು ಬರುತ್ತಿದೆ.
ವರುಣಾ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯ ಪ್ರಾಬಲ್ಯ ಹೊಂದಿದ್ದರೂ ಕುರುಬ ಸಮಾಜ,ದಲಿತ ಸಮಾಜ ಹಾಗೂ ಹಿಂದುಳಿದ ವರ್ಗ ಇವರನ್ನ ಕೈ ಬಿಟ್ಟಿಲ್ಲ. ಈಗಲೂ ಸಹ ಇದೇ ಸ್ಟ್ರಾಟಜಿ ಇದ್ದರೂ ಸಿದ್ದರಾಮಯ್ಯನವರಿಗೆ ವಿಶ್ವಾಸ ಕಾಣುತ್ತಿಲ್ಲ ಎಂಬುದು ವರುಣಾದ ಮತದಾರರನ ಪ್ರಶ್ನೆ ಆಗಿದೆ.
ವರುಣಾ ಕ್ಷೇತ್ರದ ಮತದಾರರು ಸಿದ್ದರಾಮಯ್ಯನವರ ಕೈ ಹಿಡಿಯಲು ತೀರ್ಮಾನಿಸಿದ್ದರೂ ಒಳೇಟಿನ ಭೀತಿ ಕಾಡುತ್ತಿರುವುದು ಸಹಜ.ಸಿದ್ದರಾಮಯ್ಯರನ್ನ ಸೋಲಿಸಲು ವಿರೋಧ ಪಕ್ಷದ ತಂತ್ರಕ್ಕಿಂತ ಸ್ವಂತ ತಮ್ಮ ವಿರೋಧಿಗಳ ಕುತಂತ್ರ ಎದುರಿಸಬೇಕಾದ ಅನಿವಾರ್ಯತೆ ಇದೆ.
ಈ ಬಾರಿ ಕಾಂಗ್ರಸ್ ಅಧಿಕಾರ ಹಿಡಿಯುವ ಅವಕಾಶ ಒದಗಿ ಬಂದರೆ ಸಿದ್ದರಾಮಯ್ಯಗೆ ಸಿಎಂ ಗದ್ದುಗೆ ಗ್ಯಾರೆಂಟಿ ಎಂದು ರಾಜಕೀಯ ವಲಯದಲ್ಲಿ ಪ್ರಬಲ ಚರ್ಚೆ ಸಾಗಿದೆ.
ಈ ಹಿನ್ನಲೆ ತಮ್ಮ ಪಕ್ಷದಲ್ಲಿರುವ ವಿರೋಧಿಗಳನ್ನೇ ಸಮರ್ಥವಾಗಿ ಎದುರಿಸಬೇಕಾದ ಅನಿವಾರ್ಯತೆ ಸಿದ್ದು ಮುಂದಿದೆ.
ಈಗಾಗಲೇ ಜೆಡಿಎಸ್ ಅಭ್ಯರ್ಥಿಯನ್ನ ಘೋಷಿಸಿದೆ.ಆದ್ರೆ ಬಿಜೆಪಿ ಇನ್ನೂ ಅಭ್ಯರ್ಥಿಯನ್ನ ಘೋಷಿಸಿಲ್ಲ.ವಿಜಯೇಂದ್ರ ಸೂಕ್ತ ಅಭ್ಯರ್ಥಿ ಎಂಬ ಊಹಾಪೋಹಕ್ಕೆ ಬಿಎಸ್ವೈ ಬ್ರೇಕ್ ಹಾಕಿಬಿಟ್ಟಿದ್ದಾರೆ.
ಇವೆಲ್ಲಾ ಬೆಳವಣಿಗೆ ಗಮನಿಸಿದರೆ ಸಿದ್ದರಾಮಯ್ಯರಿಗೆ ಗೆಲುವಿನ ಹಾದಿ ಸುಗಮ.ಆದರೂ ಕ್ಷೇತ್ರದ ಜನತೆಯ ಮೇಲೆ ವಿಶ್ವಾಸ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಕೊನೆ ಗಳಿಗೆಯಲ್ಲಿ ಬಿಜೆಪಿ ಯಾವ ಅಭ್ಯರ್ಥಿಗೆ ಟಿಕೆಟ್ ಘೋಷಿಸುವುದೋ ಗೊತ್ತಿಲ್ಲ. ಕಳೆದ (2013) ಚುನಾವಣೆಯಲ್ಲಿ ಬಿಎಸ್ವೈ ಪಟ್ಟಾ ಶಿಷ್ಯ ಕಾ.ಪು.ಸಿದ್ದಲಿಂಗಸ್ವಾಮಿ ಟಿಕೆಟ್ ಪಡೆದು ಪ್ರಬಲವಾದ ಸ್ಪರ್ಧೆ ನೀಡಿದ್ರು.ಈ ಬಾರಿ ಕೊನೆ ಗಳಿಗೆಯಲ್ಲಿ ಪ್ರಬಲ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿ ಇಂತಹ ತಂತ್ರ ನಡೆಯಬಹುದೇ ಎಂಬ ಅನುಮಾನ ಸಿದ್ದರಾಮಯ್ಯರಲ್ಲಿ ಮೂಡಿದೆ.
ಹೀಗಾಗಿ ಸಿದ್ದರಾಮಯ್ಯ ಎರಡನೇ ಆಯ್ಕೆ ಕೋಲಾರದಿಂದ ಬಯಸಿದ್ದಾರೆ.ಕೋಲಾರದಲ್ಲಿ ಇನ್ನೂ ಕಾಂಗ್ರೆಸ್ ಅಭ್ಯರ್ಥಿಯನ್ನ ಘೋಷಿಸದಿರುವುದು ಸಿದ್ದರಾಮಯ್ಯಗಾಗಿ ಎಂಬುದು ಹೇಳಲಾಗುತ್ತಿದೆ.
ಇದೆಲ್ಲರ ಜೊತೆ ಸಿದ್ದು ಮನೆದೇವರ ಭವಿಷ್ಯ ನಂಬಿ 2 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ಮುಂದಾಗಿದ್ದಾರೆಯೇ ಎಂಬ ಕುತೂಹಲ ಸಹ ಉಂಟಾಗಿದೆ.
ಬಿಜೆಪಿ ವರುಣಾ ಕ್ಷೇತ್ರದ ಅಭ್ಯರ್ಥಿಯನ್ನ ಘೋಷಿಸಿದ ನಂತರವಷ್ಟೇ ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಬಹುದು.
ಒಟ್ಟಾರೆ ಸಿದ್ದರಾಮಯ್ಯ 2018 ರ ಚುನಾವಣೆಯಂತೆ ಈ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಬಯಸಿರುವುದನ್ನ ಗಮನಿಸಿದ್ದಲ್ಲಿ ವರುಣಾ ಸಹ ಸೇಫ್ ಎಂದು ಕಾಣಿಸುತ್ತಿಲ್ಲ ಎನ್ನಬಹುದೇ…?