ಏ.13 ರಂದು ವಿವಿಧೆಡೆ ಮತದಾರರ ಜಾಗೃತಿ ಕಾರ್ಯಕ್ರಮ

ಏ.13 ರಂದು ವಿವಿಧೆಡೆ ಮತದಾರರ ಜಾಗೃತಿ ಕಾರ್ಯಕ್ರಮ

ಮಂಡ್ಯ ಜಿಲ್ಲೆಯಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾರರಿಗೆ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರಂದು ತಪ್ಪದೇ ಮತದಾನ ಮಾಡುವ ಬಗ್ಗೆ ಹಾಗೂ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ಏಪ್ರಿಲ್ 13 ರಂದು ಆಯೋಜಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಮಾತನಾಡಿದರು.

ಮಂಡ್ಯ ಜಿಲ್ಲೆಯ ಸ್ವೀಪ್ ಐಕಾನ್ ಖ್ಯಾತ ಚಲನಚಿತ್ರ ನಟ ನೀನಸಂ ಸತೀಶ್ ಅವರನ್ನು ಏಪ್ರಿಲ್ 13 ರಂದು ಆಹ್ವಾನಿಸಿ ಗೌರವಿಸಲಾಗುವುದು. ಮಂಡ್ಯ ವಿಶ್ವವಿದ್ಯಾಲಯ ಕಾಲೇಜು ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿ, ಪೋಸ್ಟರ್ ಸ್ಪರ್ಧೆ ವಿಜೇತ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸುವರು ಎಂದರು.

ಕಾಲೇಜು ವಿದ್ಯಾರ್ಥಿಗಳಿಗೆ ಮತದಾನ ಮಾಡಲು ಉತ್ತೇಜಿಸುವ ದೃಷ್ಟಿಯಿಂದ 6 ಸೆಲ್ಫಿ ಪಾಯಿಂಟ್ ಗಳನ್ನು ಇಡಲಾಗುವುದು. ಈ ಸೆಲ್ಫಿ ಪಾಯಿಂಟ್‌ಗಳಲ್ಲಿ ಮತದಾನ ಜಾಗೃತಿ ವಾಕ್ಯಗಳನ್ನು ರಚಿಸುವಂತೆ ತಿಳಿಸಿದರು.

ಸಹಿ ಅಭಿಯಾನ: ಮತದಾನ ಜಾಗೃತಿ ಕುರಿತಂತೆ ನೀನಸಂ ಸತೀಶ್, ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಸಹಿ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೆ ಉತ್ತಮವಾದ ಸ್ಥಳ ಗುರುತಿಸಿ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಮಾದರಿ ಮತಗಟ್ಟೆ: ಕಡಿಮೆ ಮತದಾನವಾಗಿರುವ ನಗರದ ಮತಗಟ್ಟೆ ಗುರುತಿಸಿ ಮಾದರಿ ಮತಗಟ್ಟೆ ಮಾಡಿ ಮಾದರಿ ಮತಗಟ್ಟೆಯಲ್ಲಿ ವಿಕಲಚೇತನರಿಗೆ ಮತದಾನ ಮಾಡಿರುವ ವ್ಯವಸ್ಥೆಗಳ ಬಗ್ಗೆ ಅರಿವು ಮೂಡಿಸಬೇಕು. ಈ ಸ್ಥಳದಲ್ಲಿ ಜಾಗೃತಿ ಜಾಥ ಕೂಡ ಹಮ್ಮಿಕೊಳ್ಳುವಂತೆ ತಿಳಿಸಿದರು.

ವಿಡಿಯೋ ತುಣುಕು: ಮೊದಲ ಬಾರಿಗೆ ಮತದಾನ ಮಾಡುವ ಯುವಕರಿಂದ 30 ಸೆಕೆಂಡ್‌ಗಳ ಮತದಾನದ ಮಹತ್ವ ಕುರಿತು ವಿಡಿಯೋ ತುಣುಕುಗಳನ್ನು ಸಿದ್ಧಪಡಿಸಿ ಅವುಗಳಲ್ಲಿ ಉತ್ತಮವಾದ ವಿಡಿಯೋ ತುಣಕನ್ನು ಜಾಗೃತಿಗೆ ಉಪಯೋಗಿಸಿ ಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಂ.ಬಾಬು, ಮಂಡ್ಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ನಾಗರಾಜು ಜಿ.ಚೋಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಮೇಶ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಧನಂಜಯ, ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಹೆಚ್ ಎಸ್ ನಿರ್ಮಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Spread the love

Related post

ಟೋಲ್ ನಲ್ಲಿ ರಾಜಕೀಯ ಪುಡಾರಿಗಳ ಪುಂಡಾಟ…ಮಹಿಳಾ ಸಿಬ್ಬಂದಿಯನ್ನ ಎಳೆದಾಡಿ ರಂಪಾಟ…

ಟೋಲ್ ನಲ್ಲಿ ರಾಜಕೀಯ ಪುಡಾರಿಗಳ ಪುಂಡಾಟ…ಮಹಿಳಾ ಸಿಬ್ಬಂದಿಯನ್ನ ಎಳೆದಾಡಿ ರಂಪಾಟ…

ಮಂಡ್ಯ,ನ22,Tv10 ಕನ್ನಡ ಬೆಂಗಳೂರು ಮೈಸೂರು ಹೈವೇ ಟೋಲ್ ನಲ್ಲಿ ರಾಜಕೀಯ ಪುಡಾರಿಗಳು ನಡೆಸಿದ ಪುಂಡಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಟೋಲ್ ದುಡ್ಡು ಕಟ್ಟದೇ ಸಿಬ್ಬಂದಿಗಳ ವಿರುದ್ದ ತಿರುಗಿ ಬಿದ್ದಿದ್ದಾರೆ.ಟೋಲ್ ಕಟ್ಟಿ…
ವಕ್ಫ್ ಬೋರ್ಡ್ ಆಸ್ತಿ ವಿವಾದ…ಮೈಸೂರಿನಲ್ಲಿ ಬಿಜೆಪಿ ಯಿಂದ ಪ್ರತಿಭಟನೆ…

ವಕ್ಫ್ ಬೋರ್ಡ್ ಆಸ್ತಿ ವಿವಾದ…ಮೈಸೂರಿನಲ್ಲಿ ಬಿಜೆಪಿ ಯಿಂದ ಪ್ರತಿಭಟನೆ…

ಮೈಸೂರು,ನ22,Tv10 ಕನ್ನಡ ರಾಜ್ಯದಲ್ಲಿ ವಖ್ಫ್ ಬೋರ್ಡ್ ಆಸ್ತಿ ವಿವಾದ ತಾರಕಕ್ಕೆ ಏರುತ್ತಿದೆ.ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದೆ.ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ…
ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ…ಓರ್ವನ ಬಂಧನ…ವಾಣಿಜ್ಯ ಹಾಗೂ ಗೃಹಬಳಕೆಯ 119 ಸಿಲಿಂಡರ್ ಸೀಜ್…

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ…ಓರ್ವನ ಬಂಧನ…ವಾಣಿಜ್ಯ ಹಾಗೂ…

ಮೈಸೂರು,ನ21,Tv10 ಕನ್ನಡ ಸಿಸಿಬಿ ಹಾಗೂ ಸರಸ್ವತಿಪುರಂ ಠಾಣೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ನಡೆಸುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ ಓರ್ವನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…

Leave a Reply

Your email address will not be published. Required fields are marked *