ಹೆಚ್.ಡಿ.ಕೋಟೆಗೆ ಸರದಾರ ಯಾರು…?ಬಿಜೆಪಿ ಯಲ್ಲಿ ಗೊಂದಲ…ಅನಿಲ್ ಇತಿಹಾಸ ಸೃಷ್ಟಿಸುತ್ತಾರಾ…?ಕುತೂಹಲ ಮೂಡಿಸಿರುವ ಮೀಸಲು ಕ್ಷೇತ್ರ…

ಹೆಚ್.ಡಿ.ಕೋಟೆಗೆ ಸರದಾರ ಯಾರು…?ಬಿಜೆಪಿ ಯಲ್ಲಿ ಗೊಂದಲ…ಅನಿಲ್ ಇತಿಹಾಸ ಸೃಷ್ಟಿಸುತ್ತಾರಾ…?ಕುತೂಹಲ ಮೂಡಿಸಿರುವ ಮೀಸಲು ಕ್ಷೇತ್ರ…

  • Politics
  • April 11, 2023
  • No Comment
  • 112

ಹೆಚ್.ಡಿ.ಕೋಟೆ,ಏ11,Tv10 ಕನ್ನಡ
ಎಚ್.ಡಿ.ಕೋಟೆಯ ಬಿಜೆಪಿ ಯಲ್ಲಿ ಟಿಕೆಟ್ ಫೈಟ್ ಮುಂದುವರೆಯುತ್ತಿದೆ.ಆಕಾಂಕ್ಷಿಗಳ ನಡುವೆ ಸ್ಪರ್ಧೆ ಹೆಚ್ಚಾದಷ್ಟೂ ಹೆಚ್.ಡಿ.ಕೋಟೆ ಸರದಾರ ಯಾರು ಎಂಬ ಬಗ್ಗೆಯೂ ಕುತೂಹಲ ಮೂಡಿಸಿದೆ. ಈಗಾಗಲೇ ಟಿಕೆಟ್ ಖಚಿತಪಡಿಸಿಕೊಂಡಿರುವ ಕಾಂಗ್ರೆಸ್‌ನ ಅನಿಲ್‌ ಚಿಕ್ಕಮಾದು ಗೆದ್ದರೆ ದಾಖಲೆ ಬರೆಯಲಿದ್ದಾರೆ.
ಜೆಡಿಎಸ್‌ನಲ್ಲಿ ಚಿಕ್ಕಣ್ಣ ಪುತ್ರ ಜಯಪ್ರಕಾಶ್ ಗೆ ಗ್ರೀನ್ ಸಿಗ್ನಲ್ ದೊರೆತಿದೆ. ಉದ್ಯಮಿ ಕೃಷ್ಣನಾಯಕ ಬಿಜೆಪಿ ಯತ್ತ ಮುಖಮಾಡಿದ್ದಾರೆ. ಆಕಾಂಕ್ಷಿಯಾಗಿದ್ದ ಕೃಷ್ಣನಾಯಕ ಸಧ್ಯ ಬಿಜೆಪಿ ಕ್ಯಾಂಡಿಡೇಟ್ ಎಂದೇ ಬಿಂಬಿಸಲಾಗುತ್ತಿದೆ.ಸಾಕಷ್ಟು ಬೆಳವಣಿಗೆಗಳ ನಡುವೆ ಹೆಚ್.ಡಿ.ಕೋಟೆ ಆಳುವ ಸರದಾರ ಯಾರು ಎಂಬ ಕುತೂಹಲ ಕೆರಳಿಸಿದೆ.

ಕೇರಳ ರಾಜ್ಯದ ಗಡಿ ಹಂಚಿಕೊಂಡಿರೋ ಹೆಚ್.ಡಿ.ಕೋಟೆ ಕ್ಷೇತ್ರ ಕಬಿನಿ,‌ ತಾರಕ, ನುಗು ಜಲಾಶಯಗಳನ್ನ ಹೊಂದಿದ್ದು, ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಹಬ್ಬಿರೋ ಕಬಿನಿ ಹಿನ್ನಿರಿನ ಪ್ರದೇಶ, ದಮ್ಮನಕಟ್ಟೆ ಸಫಾರಿ ಪ್ರದೇಶ ದೇಶ ವಿದೇಶಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಇಂತಹ ಪ್ರಾಕೃತಿಕ ಸಂಪತ್ತನ್ನ ಹೊಂದಿರೋ ಈ ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿ ಹೊರ ಹೊಮ್ಮಿದೆ.

ವನಸಿರಿ ನಾಡು, ಹುಲಿಗಳ ನಾಡು ಎಂಬ ಖ್ಯಾತಿ ಮಾತ್ರವಲ್ಲದೆ ರಾಜ್ಯದ ಅತಿ ಹೆಚ್ಚು ಹಿಂದುಳಿದವರ ಕ್ಷೇತ್ರದಲ್ಲಿ ಒಂದೆನಿಸಿಕೊಂಡಿರುವ ಹೆಚ್‌.ಡಿ.ಕೋಟೆಯ ನಾಯಕರು ಯಾರಾಗ್ತಾರೆ ಎಂಬ ಕದನ ಕೂತೂಹಲಕ್ಕೆ ಮತದಾರರೇ ಅಂತಿಮ ತೀರ್ಮಾನ ಬರೆಯಬೇಕಿದೆ. ಯಾಕೆಂದರೆ ಈ ಕ್ಷೇತ್ರದಲ್ಲಿ ಒಮ್ಮೆ ಆಯ್ಕೆಯಾದವರೂ ಮತ್ತೊಮ್ಮೆ ಆಯ್ಕೆ ಆಗಲ್ಲ. ಹಾಗೊಮ್ಮೆ ಆಯ್ಕೆಯಾದರೂ ಎರಡನೇ ಬಾರಿಗೆ ಅದೇ ಪಕ್ಷದಲ್ಲಿ ಇದುವರೆವಿಗೂ ಗೆದ್ದ ಇತಿಹಾಸವಿಲ್ಲ. ಹೀಗಾಗಿ ಈ ಬಾರಿ ಅನಿಲ್‌ ಚಿಕ್ಕಮಾದು ಮತ್ತೊಮ್ಮೆ ಗೆದ್ದರೆ ಇತಿಹಾಸ ಬರೆದಂತಾಗುತ್ತದೆ.

ಇನ್ನೂ, ಹೆಚ್ ಡಿ ಕೋಟೆ ತಾಲೂಕು ಕ್ಷೇತ್ರವಾಗಿ ಮಾರ್ಪಟ್ಟ ಬಳಿಕ 1962 ರಲ್ಲಿ ನಡೆದ ಚುನಾವಣೆಯಲ್ಲಿ ಪೀರಣ್ಣ ಸಾಧಿಸಿದ್ದರು.ಸ್ವತಂತ್ರವಾಗಿ ಗೆದ್ದು, ಬಳಿಕ ಸತತ ಎರಡು ಬಾರಿ ಗೆಲುವು ಸಾಧಿಸಿದ್ರು.ಆದರೆ ಒಂದೇ ಪಕ್ಷದಿಂದ ಇವರು ಆಯ್ಕೆ ಆಗಿರಲಿಲ್ಲ. ನಂತರ ಪೀರಣ್ಣ ಪುತ್ರ ಎಂಪಿ ವೆಂಕಟೇಶ್ ಇದೇ ಕ್ಷೇತ್ರದಲ್ಲಿ ಎರಡು ಬಾರಿ ಎಂ ಎಲ್ ಎ ಆಗಿದ್ದರು. ಇನ್ನೂ ಇದೇ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ 2013 ರಲ್ಲಿ ದಿ.ಚಿಕ್ಕಮಾದು ಗೆಲುವು ಸಾಧಿಸಿ ಶಾಸಕರಾದ್ರೆ, ಚಿಕ್ಕಮಾದು ಪುತ್ರ ಅನಿಲ್ ಚಿಕ್ಕಮಾದು 2018 ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿ ಮೊದಲಬಾರಿಗೆ ಶಾಸಕರಾಗಿದ್ದು ಅಪ್ಪ‌ಮಕ್ಕಳ ರಾಜಕೀಯಕ್ಕೆ ಕ್ಷೇತ್ರ ಸಾಕ್ಷಿಯಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಗರಡಿಯಲ್ಲಿ, ದಿವಂಗತ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧೃವನಾರಾಯಣ್ ಮಾರ್ಗದರ್ಶನದಲ್ಲಿ ಪಳಗಿರೋ ಯುವ ಶಾಸಕ ಅನಿಲ್ ಚಿಕ್ಕಮಾದು ಕೋಟೆ ನಾಡಿನಲ್ಲಿ ಭರವಸೆ ಮೂಡಿಸಿದ್ದಾರೆ. ನಾಯಕ ಜನಾಂಗದ ಪ್ರಭಾವಿ ಮುಖಂಡ ದಿ. ಎಸ್ ಚಿಕ್ಕಮಾದು ಅವರ ಜನಪರ ಕೆಲಸಗಳ ಮೂಲಕ ತಂದೆ ಚಿಕ್ಕಮಾದು ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿರೋ ಅನಿಲ್ ಚಿಕ್ಕಮಾದು ಜೆಡಿಎಸ್ ನಿಂದ ಯಾರೇ ಎದುರಾಳಿಯಾದ್ರು ಗೆದ್ದೆ ಗೆಲ್ಲುತ್ತೇನೆ ಅನ್ನೋ ವಿಶ್ವಾಸದಲ್ಲಿದ್ದಾರೆ. ಮಗಳ ಹುಟ್ಟುಹಬ್ಬಕ್ಕೆ ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳುವ ಮೂಲಕ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸೋ ಆಂದೋಲನ ಶುರುಮಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೂಡ ಕಾಂಗ್ರೆಸ್ ಶಾಸಕರಾಗಿರೋ ಅನಿಲ್ ಚಿಕ್ಕಮಾದು ಅತಿ ಹೆಚ್ಚಿನ ಅನುದಾನ ತಂದು ಹಿಂದುಳಿದ ತಾಲೂಕು ಅನ್ನೊ ಹಣೆ ಪಟ್ಟಿ ಕಳಚೊ ಪ್ರಯತ್ನ ಮಾಡಿದ್ದಾರೆ. ಇನ್ನೂ ಕೋವಿಡ್ ಸಂಕಷ್ಟ ಕಾಲದಲ್ಲಿ ತಮ್ಮ ಜಮೀನು ಅಡವಿಟ್ಟು ಔಷಧೀ ಖರೀದಿ ಮಾಡಿ ಜನರ ರಕ್ಷಣೆ ಮಾಡೋಕೆ ಕೂಡ ಮುಂದಾಗಿದ್ದರು. ಹೀಗಾಗಿ ಕ್ಷೇತ್ರದಲ್ಲಿ ಅನಿಲ್ ಚಿಕ್ಕಮಾದುವಿಗೆ ಜನರ ಒಲವು ಹೆಚ್ಚಾಗಿಯೇ ಇದೆ

ಇನ್ನೂ, ಹೆಚ್.ಡಿ‌.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆ ನೇರಾ ನೇರ ಫೈಪೋಟಿ ಇದೆ. 1962 ರಿಂದ ಈ ವರೆಗೂ ಬಿಜೆಪಿ ಖಾತೆಯನ್ನೇ ತೆರೆದಿಲ್ಲ. 2023 ನೇ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ನಿಂದ ಅನಿಲ್ ಚಿಕ್ಕಮಾದು ಸ್ಪರ್ಧೆ ಮಾಡಲಿದ್ದಾರೆ. ಇನ್ನೂ ಜೆಡಿಎಸ್ ನಿಂದ ಟಿಕೆಟ್ ಗೆ ತೀವ್ರ ಫೈಪೋಟಿ ಎದುರಾಗಿದೆ. ಜೆಡಿಎಸ್ ನಲ್ಲಿ ರಾಜ್ಯದಲ್ಲಿ ಒಂದೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಅಪ್ಪಾಜಿ ಕ್ಯಾಂಟಿನ್ ತೆರೆದಿರೋ ಕೆ.ಎಂ.ಕೃಷ್ಣನಾಯಕ ಸಧ್ಯ ಕಮಲ ಅಪ್ಪಿಕೊಂಡಿದ್ದಾರೆ.ಇನ್ನೂ ಖಾತೆ ತೆರೆಯದ ಬಿಜೆಪಿಯಿಂದ ಡಾ. ಹೆಚ್.ವಿ. ಕೃಷ್ಣಸ್ವಾಮಿ,‌ ಅಪ್ಪಣ್ಣ ಕೂಡ ರೇಸ್ ನಲ್ಲಿದ್ದು ಬಿಜೆಪಿ ಕೂಡ ಈ ಕ್ಷೇತ್ರದಲ್ಲಿ ಟಿಕೆಟ್ ಫೈನಲ್ ಮಾಡಿಲ್ಲ.

ಇನ್ನೂ, ಹೆಚ್ ಡಿ ಕೋಟೆಯಲ್ಲಿ ಜಾತಿವಾರು ಲೆಕ್ಕಾಚಾರ ನೋಡೋದಾದ್ರೆ..
ಒಟ್ಟು ಮತದಾರರು : 2,20911(ನ.9 2022ಕ್ಕೆ ಅನ್ವಯ)
ಪುರುಷ – 111267
ಮಹಿಳೆ – 109644
ಮತಗಳ ಜಾತಿ ಲೆಕ್ಕಾಚಾರ ಇಂತಿದೆ :
ಲಿಂಗಾಯತ -26 ಸಾವಿರ
ದಲಿತ – 58 ಸಾವಿರ
ಒಕ್ಕಲಿಗ – 28 ಸಾವಿರ
ಕುರುಬ – 15 ಸಾವಿರ
ಉಪ್ಪಾರ – 5 ಸಾವಿರ
ಎಸ್.ಟಿ. – 60 ಸಾವಿರ
ಮುಸ್ಲಿಂ – 8 ಸಾವಿರ
ಇತರೆ – 25 ಸಾವಿರ
ಡಿಸೈಡಿಂಗ್ಫ್ಯಾಕ್ಟರ್ ಮತದಾರರು – ಪರಿಶಿಷ್ಟ ಪಂಗಡ

ಒಟ್ಟಿನಲ್ಲಿ, ಕೈ ತೆನೆ ನಡುವೆ ಈ ಬಾರಿಯೂ ಜಿದ್ದಜಿದ್ದಿ ಹೆಚ್. ಡಿ‌.ಕೋಟೆಯಲ್ಲಿ ಮುಂದುವರೆಯೋದು ಬಹುತೇಕ ಪಕ್ಕ. ಸಿದ್ದರಾಮಯ್ಯ ಶ್ರೀರಕ್ಷೆ, ಆರ್ .ಧೃವನಾರಾಯಣ್ ಅನುಕಂಪ, 5 ವರ್ಷ ಗಳ ಆಡಳಿತದ ಸಾಧನೆ ಮೂಲಕ ಅನಿಲ್ ಚಿಕ್ಕಮಾದು ಚುನಾವಣಾ ಅಖಾಡಕ್ಕೆ ಸಜ್ಜಾಗಿದ್ದಾರೆ. ಇತ್ತ ಕೈ ಯಲ್ಲಿ ಅಧಿಕಾರ ಇಲ್ಲದೆ ಇದ್ದರೂ ಕೋಟೆ ನಾಡಿನ ಸೇವೆಗೆ ಮುಂದಾಗಿರೋ ಕೆ.ಎಂ.ಕೃಷ್ಣನಾಯಕ ಬಿಜೆಪಿಯಿಂದ ಟಿಕೆಟ್ ಗಾಗಿ ಕಾತುರದಿಂದ ಎದುರು ನೋಡುತ್ತಿದ್ದರೆ ಜಯಪ್ರಕಾಶ್ ಚಿಕ್ಕಣ್ಣ ಕ್ಲೈಮ್ಯಾಕ್ಸ್ ರಿಜೆಲ್ಟ್ ಎದುರು ನೊಡುತ್ತಿದ್ದಾರೆ. ಇತ್ತ ಬಿಜೆಪಿ ಹೆಚ್.ವಿ ಕೃಷ್ಣಸ್ವಾಮಿ,ಅಪ್ಪಣ್ಣ ಯಾರಿಗೆ ಟಿಕೆಟ್ ಅನ್ನೋದು ಕುತೂಹಲ‌ ಮೂಡಿಸಿದೆ.

1952ರ ಮೊದಲ ಚುನಾವಣೆಯಲ್ಲಿ ಗುಂಡ್ಲುಪೇಟೆ ದ್ವಿಸದಸ್ಯ ಕ್ಷೇತ್ರಕ್ಕೆ ಹಾಗೂ 1957ರಲ್ಲಿ ಹುಣಸೂರು ದ್ವಿಸದಸ್ಯ ಕ್ಷೇತ್ರಕ್ಕೂ ಸೇರಿದ್ದ ಜಿಲ್ಲೆಯ ಹೆಗ್ಗಡದೇವನಕೋಟೆ(ಎಚ್‌.ಡಿ.ಕೋಟೆ) ವಿಧಾನಸಭಾಕ್ಷೇತ್ರದ 1962ರಲ್ಲಿ ಪ್ರತ್ಯೇಕವಾಯಿತಲ್ಲದೆ ಅಂದೇ ಮೀಸಲು ಕ್ಷೇತ್ರವಾಗಿದೆ.
ಏಕ ಸದಸ್ಯ ಕ್ಷೇತ್ರವಾದ ಬಳಿಕ 13 ಬಾರಿ ಚುನಾವಣೆ ನಡೆದಿದ್ದು ಆರ್‌.ಪೀರಣ್ಣ ಮೂರು ಬಾರಿ ಗೆದ್ದಿದ್ದಾರೆ. ಆದರೆ, ಬೇರೆ ಬೇರೆ ಪಕ್ಷದಿಂದ ಗೆದ್ದಿದ್ದಾರೆ ಹೊರತು ಇದುವರೆವಿಗೂ ಒಮ್ಮೆ ಬಂದ ಪಕ್ಷ ಮತ್ತೊಮ್ಮೆ ಇದುವರೆವಿಗೂ ಬಂದಿಲ್ಲ.
ಮೈಸೂರು ಒಡೆಯರ ಅರಸರಲ್ಲಿ ಹೆಗ್ಗಡದೇವನು ಈ ಭಾಗದ ಕಾಕನಕೋಟೆಯಲ್ಲಿ ಆನೆಗಳನ್ನು ಖೆಡ್ಡಾಗೆ ಕೆಡುವುತ್ತಿದ್ದು ಪ್ರಸಿದ್ಧಿ ಪಡೆದಿತ್ತು. ಅಂತಹ ಭಾಗದಲ್ಲಿ ಈಗ ರಾಜಕೀಯವಾಗಿಯೂ ಕೆಳಗಳಿಸುವ ನಿರಂತರ ಪೈಪೋಟಿವುಳ್ಳ ಕ್ಷೇತ್ರ ಎನಿಸಿದೆ. ಕೈ ಗೆದ್ದರೆ ದಾಖಲೆ
ಇನ್ನೂ ತಂದೆ ಚಿಕ್ಕಮಾದು ನಿಧನದ ಅನುಕಂಪ ಹಾಗೂ ಸಿದ್ದರಾಮಯ್ಯರ ವರ್ಚಸ್ಸಿನಿಂದ ಕಳೆದ ಬಾರಿ ಗೆಲುವು ಸಾಧಿಸಿದ ಹಾಲಿ ಶಾಸಕ ಅನಿಲ್‌ ಚಿಕ್ಕಮಾದುವಿಗೆ ಈ ಬಾರಿ ಟಿಕೇಟ್‌ ಆದರೆ ಕ್ಷೇತ್ರದಲ್ಲಿ ಮನೆ ಮಾಡಿದರೂ ಬ್ಯಾಂಕ್‌ ಉದ್ಯೋಗಿಯ ಪತಿಯಾದ ಅನಿಲ್‌ ಚಿಕ್ಕಮಾದು ಇಂದಿಗೂ ನಗರದಿಂದಲೇ ಬಂದೂ ಹೋಗುವುದು ಮಾಡುತ್ತಿದ್ದಾರೆ. ಹೀಗಾಗಿ ಕ್ಷೇತ್ರದ ಜನರ ಮನದಲ್ಲಿ ಅಭಿವೃದ್ಧಿ ಕಾರ್ಯಗಳ ಮೇಲೆ ಮತ ಪಡೆದು ಗೆದ್ದರೆ ಹೊಸ ದಾಖಲೆ ಬರೆಯಲಿದ್ದಾರೆ.

ಒಟ್ಟು ಮತದಾರರು: ೨,೧೪,೯೭೪
ಪುರುಷರು: ೧,೦೮,೪೭೭
ಮಹಿಳೆಯರು: ೧,೦೬,೩೯೦
ಇತರೆ-೭

ಈವರೆಗೆ ಗೆದ್ದವರಿವರು
1952: ಎಚ್.ಕೆ.ಶಿವರುದ್ರಪ್ಪ ಮತ್ತು ಸಿದ್ದಯ್ಯ(ಪಕ್ಷೇತರರು)ಗುಂಡ್ಲುಪೇಟೆ
1957: ಡಿ.ದೇವರಾಜ ಅರಸು ಮತ್ತು ಎನ್.ರಾಚಯ್ಯ (ಕಾಂಗ್ರೆಸ್) ಹುಣಸೂರು
ಏಕ ಸದಸ್ಯ ಕ್ಷೇತ್ರ
1962: ಆರ್.ಪೀರಣ್ಣ(ಸ್ವತಂತ್ರ ಪಾರ್ಟಿ)
1967: ಆರ್.ಪೀರಣ್ಣ(ಕಾಂಗ್ರೆಸ್)
1972: ಆರ್.ಪೀರಣ್ಣ(ಸಂಸ್ಥಾ ಕಾಂಗ್ರೆಸ್)
1978: ಸುಶೀಲಾ ಚೆಲುವರಾಜ್(ಕಾಂಗ್ರೆಸ್-ಐ)
1983: ಎಚ್.ಬಿ.ಚಲುವಯ್ಯ(ಜನತಾಪಕ್ಷ)
1985: ಎಂ.ಶಿವಣ್ಣ(ಕಾಂಗ್ರೆಸ್)
1989: ಎಂ.ಪಿ.ವೆಂಕಟೇಶ್(ಸಮಾಜವಾದಿ ಜನತಾಪಕ್ಷ)
1994: ಎನ್.ನಾಗರಾಜು(ಜನತಾದಳ)
1999: ಎಂ.ಶಿವಣ್ಣ(ಕಾಂಗ್ರೆಸ್)
2004: ಎಂ.ಪಿ. ವೆಂಕಟೇಶ್ (ಜೆಡಿಎಸ್)
2008: ಚಿಕ್ಕಣ್ಣ (ಕಾಂಗ್ರೆಸ್)
2013: ಎಸ್.ಚಿಕ್ಕಮಾದು(ಜೆಡಿಎಸ್)
2018: ಅನಿಲ್ ಚಿಕ್ಕಮಾದು(ಕಾಂಗ್ರೆಸ್‌)

Spread the love

Related post

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆಸ್ತಿ ಮುಟ್ಟುಗೋಲು…ಬಣ್ಣ ಬಯಲು ಮಾಡಿದ ಇಡಿ…

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ…

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆಸ್ತಿ ಮುಟ್ಟುಗೋಲು…ಬಣ್ಣ ಬಯಲು ಮಾಡಿದ ಇಡಿ… ಬೆಂಗಳೂರು,ಜ22,Tv10 ಕನ್ನಡ ಮುಡಾ ಮಾಜಿ ಆಯುಕ್ತ GT ದಿನೇಶ್…
ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ…

ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ…

ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ… ಮೈಸೂರು,ಜ22,Tv10 ಕನ್ನಡ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯಾಗಿ ಎರಡು ವರ್ಷಗಳು ಪೂರೈಸಿದ ಐತಿಹಾಸಿಕ…
ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…

Leave a Reply

Your email address will not be published. Required fields are marked *