ಬಿಜೆಪಿ ಟಿಕೆಟ್ ಘೋಷಣೆ…ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿರುವ ಮೈಸೂರು…
- Politics
- April 12, 2023
- No Comment
- 83
ಮೈಸೂರು,ಏ12,Tv10 ಕನ್ನಡ
ಬಿಜೆಪಿ ಟಿಕೆಟ್ ಘೋಷಣೆಯಿಂದ ಸಾಂಸ್ಕೃತಿಕ ನಗರಿ ಮೈಸೂರು ರಣಾಂಗಣವಾಗಲಿದೆ.
ಹೈ ವೊಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ.
ಘಟಾನುಘಟಿ ನಾಯಕರುಗಳಿಂದ ತೀವ್ರ ಪೈಪೋಟಿ ಶುರುವಾಗಲಿದೆ.ಈಗಾಗಲೇ
ಚಾಮುಂಡೇಶ್ವರಿ, ವರುಣ, ಹುಣಸೂರಿನಲ್ಲಿ ಚುನಾವಣಾ ಅಖಾಡ ರಂಗೇರಿದೆ.
ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ವಿ. ಸೋಮಣ್ಣ ಕಣಕ್ಕೆ ಇಳಿಯಲಿದ್ದಾರೆ. ವರುಣ ವಿಧಾನ ಸಭಾ ಕ್ಷೇತ್ರ ಕಾವು ಪಡೆದುಕೊಂಡು ರಾಜ್ಯದ ಗಮನ ಸೆಳೆಯಲಿದೆ.
ಹುಣಸೂರಿನಲ್ಲಿ ಜೆಡಿಎಸ್ ತೊರೆದು ಕಮಲ ಹಿಡಿದಿರುವ ದೇವರಹಳ್ಳಿ ಸೋಮಶೇಖರ್ ಕಣಕ್ಕೆ ಇಳಿಯಲಿದ್ದು ಜೆಡಿಎಸ್ ಗರ ತೊಡೆ ತಟ್ಟಿದ್ದಾರೆ.
ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೋತಿದ್ದ ದೇವರಹಳ್ಳಿ ಸೋಮಶೇಖರ್
ಈ ಬಾರಿ ಜೆಡಿಎಸ್‌ನಿಂದ ಟಿಕೆಟ್ ತಪ್ಪಿದ ಹಿನ್ನಲೆ ಬಿಜೆಪಿ ಸೇರಿದ್ದಾರೆ.
ಹುಣಸೂರಿನಲ್ಲಿ ಮೂರು ಪಕ್ಷಗಳಲ್ಲೂ ತೀವ್ರ ಹಣಾಹಣಿ ನಡೆಯುತ್ತಿದೆ.
ಕಾಂಗ್ರೆಸ್ ಹೆಚ್.ಪಿ ಮಂಜುನಾಥ್, ಜೆಡಿಎಸ್‌ನ ಹರೀಶ್‌ಗೌಡ, ಬಿಜೆಪಿಯ ದೇವರಹಳ್ಳಿ ಸೋಮಶೇಖರ್ ನಡುವೆ ಬಿಗ್ ಫೈಟ್ ಇದೆ.ಚಾಮುಂಡೇಶ್ವರಿಯಲ್ಲಿ ಅಭ್ಯರ್ಥಿಗಳ ಎದೆ ಬಡಿತ ಜೋರಾಗಿದೆ.ಇದೀಗ
ಚಾಮುಂಡೇಶ್ವರಯಲ್ಲಿ ಮತದಾರರೇ ಸಾರ್ವಭೌಮರು.
ಜೆಡಿಎಸ್‌ನ ಜಿಟಿ ದೇವೇಗೌಡ, ಕಾಂಗ್ರೆಸ್‌ನ ಮಾವಿನಹಳ್ಳಿ ಸಿದ್ದೇಗೌಡ, ಕಾಂಗ್ರೆಸ್‌ನ ವಾಸು ಪುತ್ರ ಬಿಜೆಪಿಯ ಕವೀಶ್‌ಗೌಡ ನಡುವೆ ಪ್ರಬಲ ಪೈಪೋಟಿ ಇದೆ.
ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳು ತೀವ್ರ ಕುತೂಹಲ ಮೂಡಿಸಿದೆ…