ರಾಮದಾಸ್ ಗೆ ಟಿಕೆಟ್ ಮಿಸ್…WHAT NEXT…?
- MysorePolitics
- April 18, 2023
- No Comment
- 102
ಮೈಸೂರು,ಏ18,Tv10 ಕನ್ನಡ
ಕೊನೆಗೂ ಅಂತಿಮ ಪಟ್ಟಿಯಲ್ಲಿ ಮೈಸೂರಿನ ಕೆ ಆರ್. ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆಗಿದೆ.ಹೈಕಮಾಂಡ್ ಅಳೆದೂ ತೂಗಿ 30 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ಕ್ಷೇತ್ರದ ಗಮನ ಸೆಳೆದಿದ್ದ ನಗರಾಧ್ಯಕ್ಷ ಶ್ರೀವತ್ಸ ಗೆ ಮಣೆ ಹಾಕಿದೆ.ಮೂರು ದಶಕಗಳಿಂದ ಕೃಷ್ಣರಾಜ ಕ್ಷೇತ್ರ ಪ್ರತಿನಿಧಿಸಿ ನಾಲ್ಕು ಬಾರಿ ಗೆದ್ದು ಬಿಜೆಪಿ ಪಕ್ಷದ ಬೆನ್ನೆಲುಬಾಗಿದ್ದ ರಾಮದಾಸ್ ಗೆ ಕೊನೆ ಕ್ಷಣದವರೆಗೂ ಕಾದು ನೋಡುವ ತಂತ್ರ ಅನುಸರಿಸಿದ ಹೈಕಮಾಂಡ್ ಕೊನೆಗೂ ಟಿಕೆಟ್ ತಪ್ಪಿಸಿದೆ. ಟಿಕೆಟ್ ಆಗುವರೆಗೂ ಒಂದು ಲೆಕ್ಕ ಇತ್ತು ಇದೀಗ ಟಿಕೆಟ್ ಘೋಷಣೆ ಆದ ನಂತರ ಮತ್ತೊಂದು ಲೆಕ್ಕ ಆರಂಭವಾಗಿದೆ. ಟಿಕೆಟ್ ಬಗ್ಗೆ ಕಾನ್ಫಿಡೆನ್ಸ್ ನಲ್ಲಿದ್ದ ರಾಮದಾಸ್ ಗೆ ನಿರಾಸೆಯಾಗಿದೆ. ರಾಮದಾಸ್ ಅವರ ಆಸೆಗೆ ಬಿಜೆಪಿ ಹೈಕಮಾಂಡ್ ತಣ್ಣೀರು ಎರಚಿದೆ.
ಟಿಕೆಟ್ ವಂಚಿತರಾಗಿರುವ ರಾಮದಾಸ್ ಮುಂದಿನ ನಡೆ ಬಗ್ಗೆ ಲೆಕ್ಕಾಚಾರ ಶುರುವಾಗಿದೆ.ಟಿಕೆಟ್ ಕೈ ತಪ್ಪುತ್ತಿದ್ದಂತೆಯೇ ಮುನಿಸಿಕೊಂಡಿರುವ ರಾಮದಾಸ್ ನನ್ನನ್ನು ನನ್ನ ತಾಯಿ ಮನೆಯಿಂದ ಹೊರ ಹಾಕಲಾಗಿದೆ. ಹಾಗಾಗಿ ನಾನು ಬಿಜೆಪಿಯಲ್ಲಿ ಇರಬೇಕಾ ಬೇಡವ ಎಂಬುದರ ಬಗ್ಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.
ಇದೇ ವೇಳೆ ಟಿಕೆಟ್ ಘೋಷಣೆ ಆದ ನಂತರ ಅಭ್ಯರ್ಥಿ ಶ್ರೀವತ್ಸ, ಸಂಸದ ಪ್ರತಾಪ್ ಸಿಂಹ, ಬಿಜೆಪಿ ಮುಖಂಡ ರವಿಶಂಕರ್ ಸೇರಿದಂತೆ ಹಲವು ಮುಖಂಡರು ರಾಮದಾಸ್ ಅವರ ಕಚೇರಿಗೆ ತೆರಳಿದಾಗ ಅವರೊಂದಿಗೆ ಮಾತನಾಡಲುನಿರಾಕರಿಸಿದ್ದಾರೆ.ಈ ಎಲ್ಲ ಬೆಳವಣಿಗೆ ನೋಡಿದರೆ ರಾಮದಾಸ್ ಅವರಿಗೆ ಟಿಕೆಟ್ ನೀಡದಿರುವ ಬಗ್ಗೆ ಬೇಸರ ಉಂಟಾಗಿ ಅವರು ಬೇರೆಯದೆ ನಿರ್ಧಾರ ಕೈಗೊಳ್ಳಲಿದ್ದಾರೆಯೇ ಎಂಬ ಗುಸು ಗುಸು ಬಿಜೆಪಿಯಲ್ಲಿ ಚರ್ಚೆ ಶುರುವಾಗಿದೆ.
ನಾನು ಟಿಕೆಟ್ ಗಾಗಿ ಯಾವುದೇ ಲಾಬಿ ನಡೆಸಿಲ್ಲ. ನನಗೆ ಈ ಬಾರಿ ಟಿಕೆಟ್ ನೀಡಿದರೂ ಸರಿ ನೀಡದಿದ್ದರೂ ಸರಿ ಎಂದೆಲ್ಲ ರಾಮದಾಸ್ ಅವರೇ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹೇಳಿದ್ದರು.
ಆದರೀಗ ಟಿಕಟ್ ಘೋಷಣೆ ಆದ ನಂತರ ಶ್ರೀವತ್ಸರನ್ನು ಭೇಟಿ ಆಗದಿರುವುದು ಏಕೆ ಎಂಬ ಪ್ರಶ್ನೆ ಹಲವು ಬಿಜೆಪಿಗರನ್ನ ಕಾಡಿದೆ.ರಾಮದಾಸ್ ಒಂದು ವೇಳೆ ಜಗದೀಶ್ ಶಟ್ಟರ್ ಹಾದಿ ಹಿಡಿಯುತ್ತಾರಾ ಎಂಬಲ್ಲ ಮಾತು ಕೇಳಿ ಬರುತ್ತಿದೆ.ಕೆಲ ಮುಖಂಡರ ಅನಿಸಿಕೆಯಂತರ ರಾಮದಾಸ್ ಅವರ ಮನಸ್ಸಿಗೆ ನೋವುಂಟಾಗಿದೆ. ನಿಜ. ಆದರೆ ಅವರು ಬಿಜೆಪಿ ತೊರೆಯುದಿಲ್ಲ. ಒಂದೆರಡು ದಿನಗಳ ನಂತರ ಅವರೇ ಮುಂದೆ ಬಂದು ಶ್ರೀವತ್ಸರ ಪರ ಮತಯಾಚನೆ ಮಾಡಿ ಅವರನ್ನು ಗೆಲ್ಲಿಸಲಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ ಎನ್ನುತ್ತಿದ್ದಾರೆ.ಅಥವಾ ಬಿಜೆಪಿಯಲ್ಲಿ ಇದ್ದುಕೊಂಡೇ ತಟಸ್ಥವಾಗಿರುತ್ತಾರಾ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಏತನ್ಮಧ್ಯೆ ಶ್ರಿವತ್ಸರವರು ಗುರುವಾರ ನಾಮ ನಿರ್ದೇಶನ ಪತ್ರವನ್ನು ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆಗೆ ರಾಮದಾಸ್ ತಮ್ಮ ನಿರ್ಧಾರ ತಿಳಿಸಲಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ಹೈ ಕಮಾಂಡ್ ಹಾಲಿ ಶಾಸಕ ರಾಮ್ ದಾಸ್ ಅವರಿಗೂ ಟಿಕಟ್ ನೀಡದೆ, ಮತ್ತೊಬ್ಬ ಪ್ರಬಲ ಆಕಾಂಕ್ಷಿ ಆಗಿದ್ದ ರಾಜೀವ್ ಅವರಿಗೂ ಟಿಕೆಟ್ ನಿರಾಕರಿಸಿ ಈಗ ಬಿಜೆಪಿಯಲ್ಲೇ 30 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಒಬ್ಬ ಕಾರ್ಯಕರ್ತನಿಗೆ ಟಿಕಟ್ ನೀಡಿರುವುದು ಅಚ್ಚರಿಗೂ ಕಾರಣವಾಗಿದೆ.
ಇದೀಗ ರಾಮದಾಸ್ ನಡೆ ಕುತೂಹಲ ಪಡೆಯುತ್ತಿದೆ…