ನಿಗೂಢ ಕೊಲೆ ರಹಸ್ಯ ಬಯಲು…ಪ್ರಿಯಕರ ಅಂದರ್…ಅಕ್ರಮ ಸಂಭಂಧ ಹಿನ್ನಲೆ ಕೊಲೆ…ಸಾಲ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಕ್ಕೆ ಹತ್ಯೆ…

ನಿಗೂಢ ಕೊಲೆ ರಹಸ್ಯ ಬಯಲು…ಪ್ರಿಯಕರ ಅಂದರ್…ಅಕ್ರಮ ಸಂಭಂಧ ಹಿನ್ನಲೆ ಕೊಲೆ…ಸಾಲ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಕ್ಕೆ ಹತ್ಯೆ…

ನಂಜನಗೂಡು,ಏ18,Tv10 ಕನ್ನಡ
ಮಹಿಳೆಯ ನಿಗೂಢ ಕೊಲೆ ರಹಸ್ಯ ಭೇಧಿಸುವಲ್ಲಿ ನಂಜನಗೂಡು ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.ಅಕ್ರಮ ಸಂಭಂದ ಇರಿಸಿಕೊಂಡಿದ್ದ ಪ್ರಿಯತಮ ಅಂದರ್ ಆಗಿದ್ದಾನೆ.ಸಾಲವಾಗಿ ಕೊಟ್ಟ ಹಣ ವಾಪಸ್ ಕೇಳಿದ ಪ್ರಿಯತಮೆಯನ್ನ ಪ್ರಿಯಕರ ಬರ್ಭರವಾಗಿ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಮಳವಳ್ಳಿಯ ನಿವಾಸಿ ಶ್ಯಾಂಪ್ರಸಾದ್ ಬಂಧಿತ ಆರೋಪಿ.ಪ್ರಿಯಕರನ ಕೈಲಿ ಹತ್ಯೆಗೊಳಗಾದವಳು ಕನಕಪುರದ ನಿವಾಸಿ ಮಂಜುಳ(40).

ಎರಡು ದಿನಗಳ ಹಿಂದೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಇರುವ ಹದಿನಾರುಕಾಲಿನ ಮಂಟಪದ ಬಳಿ ಅಪರಿಚಿತ ಮಹಿಳೆ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪೊಲೀಸರು ಮೃತ ಮಹಿಳೆಯ ಮಾಹಿತಿ ಜಾಲಾಡಿದಾಗ ಕನಕಪುರದ ಮಂಜುಳಾ ಎಂದು ತಿಳಿದುಬಂತು.ಮೂಲತಃ ಮಳವಳ್ಳಿ ತಾಲೂಕಿನ ಮಂಜುಳಾ ವಿವಾಹಿತಳು.ಮಹದೇವಾಚಾರಿ ಎಂಬುವರನ್ನ ವಿವಾಹವಾಗಿದ್ದ ಮಂಜುಳಾ ಎರಡು ಮಕ್ಕಳ ತಾಯಿ.ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾಗೆ ಶ್ಯಾಂಪ್ರಸಾದ್ ಪರಿಚಯವಾಯಿತು.ಸ್ನೇಹ ಪ್ರಣಯಕ್ಕೆ ತಿರುಗಿ ಅಕ್ರಮ ಸಂಭಂಧಕ್ಕೆ ದಾರಿಯಾಯಿತು.ಈ ವಿಚಾರ ಪತಿ ಮಹದೇವಾಚಾರಿಗೆ ತಿಳಿದು ಗಲಾಟೆ ನಡೆದಿದೆ.ಶ್ಯಾಂಪ್ರಸಾದ್ ಸಹವಾಸ ಬಿಡುವಂತೆ ಪತಿ ಮನವಿ ಮಾಡಿದ್ದಾರೆ.3 ಲಕ್ಷ ಸಾಲ ಕೊಟ್ಟಿದ್ದೀನಿ ವಾಪಸ್ ತಗೊಂಡು ಸಹವಾಸ ಬಿಡ್ತೀನಿ ಅಂತ ಮಾತು ಕೊಟ್ಟಿದ್ದಾರೆ.ನಂತರ ಮಹದೇವಾಚಾರಿ ತನ್ನ ಪತ್ನಿ ಹಾಗೂ ಮಕ್ಕಳ ಸಮೇತ ಕನಕಪುರದಲ್ಲಿ ನೆಲೆಸಿದ್ದಾರೆ.ಹೀಗಿದ್ದೂ ಇಬ್ಬರ ನಡುವೆ ಅಕ್ರಮ ಸಂಭಂಧ ಮುಂದುವರೆದಿದೆ.ಏಪ್ರಿಲ್ 8 ರಂದು ದೇವಸ್ಥಾನಕ್ಕೆ ಎಂದು ಮನೆ ಬಿಟ್ಟ ಮಂಜುಳಾ ಮನೆಗೆ ಹಿಂದಿರುಗಿಲ್ಲ.ಪ್ರಿಯಕರನ ಜೊತೆ ಹೋಗಿದ್ದಾಳೆಂದು ಖಚಿತಪಡಿಸಿಕೊಂಡ ಪತಿ ಮೌನಕ್ಕೆ ಶರಣಾಗಿದ್ದಾರೆ.ಏಪ್ರಿಲ್ 15 ರಂದು ಬೆಳಿಗ್ಗೆ ಹದಿನಾರುಕಾಲು ಮಂಟಪದ ಬಳಿ ಮಂಜುಳಾ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಠಾಣೆ ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನ ಬಂಧಿಸಿದ್ದಾರೆ.ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದ್ದ ಪತ್ನಿಯನ್ನ ಶ್ಯಾಮ್ ಪ್ರಸಾದ್ ಕೊಲೆ ಮಾಡಿರುವುದಾಗಿ ಪತಿ ಮಹದೇವಾಚಾರಿ ದೂರು ನೀಡಿದ್ದಾರೆ.ಅಕ್ರಮ ಸಂಭಂಧಕ್ಕೆ ಹಾತೊರೆದು ಹಣ ಕಳೆದುಕೊಂಡ ಮಂಜುಳಾ ಪ್ರಾಣವನ್ನೂ ಕಳೆದುಕೊಂಡಿದ್ದಾಳೆ…

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *