
ಶಾಸಕನಾಗುವುದಕ್ಕಿಂತ ಮೋದಿ ಪ್ರೀತಿ ಮುಖ್ಯ…ಟಿಕೆಟ್ ವಂಚಿತ ಎಸ್.ಎ.ರಾಮದಾಸ್…
- MysorePolitics
- April 18, 2023
- No Comment
- 93
ಮೈಸೂರು,ಏ18,Tv10 ಕನ್ನಡ
ನಾನು ಶಾಸಕನಾಗುವುದಕ್ಕಿಂತಲೂ ಮೋದಿ ಪ್ರೀತಿ ಮುಖ್ಯ ಎಂದು ಎಸ್.ಎ.ರಾಮದಾಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡುವ ಮೂಲಕ
ಬಹುತೇಕ ಬಿಜೆಪಿ ಪಕ್ಷದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.
ನಾನು ಸ್ಪರ್ಧೆ ಮಾಡಿದರೆ 10 ರಿಂದ 12 ಸಾವಿರದಲ್ಲಿ ಗೆಲ್ಲುತ್ತೇನೆ
ಆದರೆ ನನಗೆ ಮಹಾನ್ ನಾಯಕನ ಜವಾಬ್ದಾರಿ ಇದೆ.ನಿಮ್ಮ ಶಾಸಕ ಇದುವರೆಗೂ ಯಾವುದೇ ತಪ್ಪು ಮಾಡಿಲ್ಲ.ನನ್ನ ಮೇಲೂ ಹಲವು ಆಪಾದನೆ ಬಂದವು.ಅದಕ್ಕೆ ಕಾಲವೇ ಉತ್ತರ ನೀಡುತ್ತದೆ.ಯಾವತ್ತು ಹುಟ್ಟುತ್ತಿವೋ ಯಾವತ್ತೋ ಸಾಯುತ್ತಿವೋ ಗೊತ್ತಿಲ್ಲ.
ನನಗೆ ಮುಖ್ಯ ತಾಯಿ ಭಾರತಾಂಭೆ.
ಇಡೀ ದೇಶ ನಮ್ಮ ರಾಜ್ಯದ ಕಡೆ ನೋಡುತ್ತಿದೆ.
ನಿಮ್ಮ ಶಾಸಕ ನಿಮ್ಮ ಜೊತೆಯೇ ಇರುತ್ತಾನೆ.
ನಮ್ಮ ಉದ್ದೇಶ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಉಳಿಸಿಕೊಳ್ಳುವುದಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ…