
ಮತ್ತೊಮ್ಮೆ ಸಿಎಂ ಕನಸು ಕಾಣುತ್ತಿರುವ ಸಿದ್ದು ಹಾದಿ ದುರ್ಗಮ…ಗೆಲುವಿಗೆ ಸ್ಟ್ರಾಟಜಿ ಕುತೂಹಲ…
- MysorePolitics
- April 25, 2023
- No Comment
- 97
ಮೈಸೂರು,ಏ25,Tv10 ಕನ್ನಡ
ದಿನೇ ದಿನೇ ವರುಣಾ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸುತ್ತಿದೆ.ಈಗಾಗಲೇ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇದು ಕೊನೆ ಚುನಾವಣೆಯಾಗಿದೆ.ಇದುವರೆಗೂ ಸಿದ್ದರಾಮಯ್ಯನವರ ಕುಟುಂಬವನ್ನ ಕೈಬಿಡದ ಕ್ಷೇತ್ರದ ಜನತೆ ಈ ಬಾರಿಯೂ ಆಯ್ಕೆ ಮಾಡುವರೇ ಎಂಬ ಕುತೂಹಲ ಕೆರಳಿಸಿದೆ.ಇದು ಕೊನೆ ಚುನಾವಣೆ ಎಂದೇ ಬಿಂಬಿಸಿಕೊಂಡು ಮತ್ತೆ ಸಿಎಂ ಆಗುವ ಕನಸು ಕಾಣುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಗೆಲುವಿನ ಹಾದಿ ಸಧ್ಯಕ್ಕಂತೂ ದುರ್ಗಮವಾಗಿ ಕಂಡುಬರುತ್ತಿದೆ.
ಸಿದ್ದರಾಮಯ್ಯರನ್ನ ಸೋಲಿಸೋದೆ ಮುಖ್ಯ ಟಾರ್ಗೆಟ್ ಎನ್ನುವ ಕಾನ್ಸೆಪ್ಟ್ ನಲ್ಲಿ ಬಿಜೆಪಿ ಹೆಜ್ಜೆಹಾಕಿದೆ.ತವರು ಕ್ಷೇತ್ರದಲ್ಲಿ ಸೋಲಿನ ರುಚಿ ತೋರಿಸಲು ಜೆಡಿಎಸ್ ಸಹ ತಂತ್ರ ಹಣೆಯುತ್ತಿದೆ.ಸಿದ್ದರಾಮಯ್ಯ ಬೆನ್ನೆಲುಬಾಗಿದ್ದ ದಲಿತ ಮತ ಬ್ಯಾಂಕ್ ಈ ಬಾರಿ ಚದುರಿಹೋಗುವ ಸಾಧ್ಯತೆ ಎದ್ದು ಕಾಣುತ್ತಿದೆ.ಬಿಎಸ್ಪಿ ತನ್ನ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿರುವುದು ದಲಿತ ಮತಗಳನ್ನ ಸೆಳೆಯುವ ಉದ್ದೇಶದಿಂದ.
ನಾಮಪತ್ರ ಸಲ್ಲಿಸಲಷ್ಟೇ ಕ್ಷೇತ್ರಕ್ಕೆ ಬರುತ್ತೇನೆಂದಿದ್ದ ಸಿದ್ದರಾಮಯ್ಯಗೆ ಆತಂಕ ಶುರುವಾಗಿರೋದು ಸತ್ಯ.ಇದಕ್ಕೆ ಪುಷ್ಠಿ ನೀಡುವಂತೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರವಾಸಕ್ಕೆ ಮುಂದಾಗಿರೋದು.
ಪ್ರಚಾರಕ್ಕೆ ಒಂದೇ ದಿನ ಬರುತ್ತೇನೆಂದಿದ್ದ ಸಿದ್ದರಾಮಯ್ಯ.
ಬಿಜೆಪಿ ತಂತ್ರಕ್ಕೆ ಬೆಚ್ಚಿ ಹೆಚ್ಚಿನ ಸಮಯ ವರುಣದಾಲ್ಲೇ ಕಳೆಯುತ್ತಿದ್ದಾರೆ.
ಕೇಸರಿ ಪಡೆ ತಂತ್ರದ ಎದುರು ಸಿದ್ದು ಕೊನೆ ಚುನಾವಣೆ ಸುಲಭದ ತುತ್ತಲ್ಲ.ಸಿದ್ದುವನ್ನ ಮಣಿಸುವುದೇ ಬಿಜೆಪಿ ಪ್ಲಾನ್.ಇದಕ್ಕಾಗಿ ಬಿಜೆಪಿ ಚಾಣುಕ್ಯ ಸ್ವತಃ ವಿಶೇಷ ಆಸಕ್ತಿಯನ್ನೂ ತೋರಿಸಿದ್ದಾರೆ.
ಇವೆಲ್ಲವುಗಳ ಮಧ್ಯೆ ಸಿದ್ದರಾಮಯ್ಯ ಆತ್ಮವಿಶ್ವಾಸದಿಂದ ಗೆಲುವು ನಮ್ಮದೇ ಎನ್ನುತ್ತಿದ್ದಾರೆ.ಗೆಲುವಿಗಾಗಿ ತಮ್ಮದೇ ಆದ ಸ್ಟ್ರಾಟಜಿ ರೂಪಿಸಿದ್ದಾರೆ.2013 ರ ಚುನಾವಣೆಯನ್ನ ಸಿದ್ದು ಮರೆತಿಲ್ಲ.ಬಿಎಸ್ವೈ ಪಟ್ಟಾ ಶಿಷ್ಯ ಕಾ.ಪು.ಸಿದ್ದಲಿಂಗಸ್ವಾಮಿಯನ್ನ ನಿಲ್ಲಿಸಿ ತೀವ್ರ ಸ್ಪರ್ಧೆ ನೀಡಿತ್ತು.ಕೊನೆ ಗಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿ ಚೆಲುವರಾಜು ಸ್ಪರ್ಧೆಯಲ್ಲಿ ನಿರಾಸಕ್ತಿ ತೋರಿದ್ದು ಒಂದು ರೀತಿಯಲ್ಲಿ ಕಾಂಗ್ರೆಸ್ ಗೆ ವರದಾನವಾಯಿತು.ಸಿದ್ದರಾಮಯ್ಯ ಭರ್ಜರಿಯಾಗೇ ಗೆದ್ದು ಬೀಗಿದ್ದರು.ಈ ಬಾರಿ ಲಿಂಗಾಯಿತ ಸಮುದಾಯದ ಪ್ರಬಲ ಅಭ್ಯರ್ಥಿಯನ್ನ ಬಿಜೆಪಿ ಕಣಕ್ಕೆ ಇಳಿಸಿದೆ.ಲಿಂಗಾಯಿತ ಮತಗಳೇ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದೆ.ವಿ.ಸೋಮಣ್ಣ ಲಿಂಗಾಯಿತ ಮತಗಳನ್ನ ಸಂಪೂರ್ಣವಾಗಿ ಸೆಳೆಯಲು ತಂತ್ರ ರೂಪಿಸಿದ್ದಾರೆ.ಜೊತೆಗೆ ಲಿಂಗಾಯಿತ ಮುಖ್ಯಮಂತ್ರಿಗಳ ಬಗ್ಗೆ ಸಿದ್ದು ನೀಡಿದ ವಿವಾದಾತ್ಮಕ ಹೇಳಿಕೆ ಸಹ ತಿರುಗುಬಾಣವಾಗುವ ಸಾಧ್ಯತೆ ಇದೆ.ಒಟ್ಟಾರೆ ಸಿದ್ದು ಗೆಲುವಿನ ಸ್ಟ್ಯಾಟರ್ಜಿ ಕುತೂಹಲ ಮೂಡಿಸುತ್ತಿದೆ.
ಹಂತಹಂತದಲ್ಲೂ ಪ್ರಬಲ ಪೈಪೋಟಿ ಎದುರಿಸಬೇಕಿದೆ.
ವರುಣದ ಬಹುಸಂಖ್ಯಾತ ಲಿಂಗಾಯತ ಮತದಾರರನ್ನ ಒಲಿಸಿಕೊಳ್ಳೊದು ಸಿದ್ದರಾಮಯ್ಯರಿಗೆ ಸಾಹಸವೇ ಆಗಲಿದೆ.
ಬಹುಸಂಖ್ಯಾತ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸಿ ಸಿದ್ದು ಮಣಿಸಲು ಬಿಜೆಪಿ ಬೀಷ್ಮ ಈಗಾಗಲೇ ತಂತ್ರ ಹಣೆದಿದ್ದಾರೆ.
ಮೈಸೂರಿನಲ್ಲೇ ವಾಸ್ತವ್ಯವಿದ್ದು ಸಿದ್ದು ಸೋಲಿಸಲು ಕೇಂದ್ರ ನಾಯಕರ ಪ್ಲಾನ್ ಹಾಕಿದ್ದಾರೆ.
ವರುಣ ಕ್ಷೇತ್ರ ಬಿಟ್ಟು ಮತ್ತಾವುದೇ ಕ್ಷೇತ್ರದತ್ತ ಬಿಜೆಪಿ ನಾಯಕರು ತಿರುಗಿಯೂ ನೋಡಿಲ್ಲ.
ಸೋಮಣ್ಣ ಗೆಲ್ಲಿಸಲು ಸ್ಥಳೀಯ ನಾಯಕರಲ್ಲದೇ ರಾಷ್ಟ್ರ ನಾಯಕರು ವರುಣಕ್ಕೆ ಎಂಟ್ರಿ ಕೊಡಲು ಮುಂದಾಗಿದ್ದಾರೆ.
ವರುಣದ ಎರಡು ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿ ಇಲ್ಲದೆ ಸುಲಭವಾಗಿ ಗೆದ್ದಿದ್ದ ಸಿದ್ದರಾಮಯ್ಯಗೆ
ಈ ಭಾರಿ ಪ್ರಬಲ ಅಭ್ಯರ್ಥಿ ಸ್ಪರ್ಧೆಯಿಂದ ಸಿದ್ದರಾಮಯ್ಯಗೆ ಆತಂಕ ಶುರುವಾಗಿದೆ.
ಬಿಜೆಪಿ ನಾಯಕರಿಗೆ ಒಬ್ಬರೆ ಗುರಿ ಸಿದ್ದರಾಮಯ್ಯ.ಈ ಹಿನ್ನಲೆ ಸಿದ್ದು ಗೆಲುವಿನ ಹಾದಿ ದುರ್ಗಮ ಎಂದೇ ಹೇಳಲಾಗುತ್ತಿದೆ…