ಹೆಚ್.ಡಿ.ಕೋಟೆ:ಸಿಡಿಲು ಬಡಿದು ರೈತ ಸಾವು…
- CrimeMysore
- April 24, 2023
- No Comment
- 119
ಎಚ್.ಡಿ.ಕೋಟೆ,ಏ24,Tv10 ಕನ್ನಡ
ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಹುಲ್ಲೆಮಾಳ ಗ್ರಾಮದಲ್ಲಿ ನಡೆದಿದೆ. ಮುತ್ತಯ್ಯ ಸಿಡಿಲಿಗೆ ಬಲಿಯಾದ ರೈತ.
ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಮಳೆ ಆರಂಭವಾಗಿದೆ. ರಕ್ಷಿಸಿಕೊಳ್ಳಲು ಮುತ್ತಯ್ಯ ಮರದ ಆಶ್ರಯ ಪಡೆದಿದ್ದಾರೆ.
ಈ ಸಮಯದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..