ಪ್ರೀತಿಸಿ ಮದುವೆಯಾದ ಹುಡುಗಿ ನೇಣಿಗೆ…ವರದಕ್ಷಿಣೆ ಕಿರುಕುಳ ಆರೋಪ…ಗಂಡ,ಅತ್ತೆ,ಮಾವ ಅಂದರ್…

ಪ್ರೀತಿಸಿ ಮದುವೆಯಾದ ಹುಡುಗಿ ನೇಣಿಗೆ…ವರದಕ್ಷಿಣೆ ಕಿರುಕುಳ ಆರೋಪ…ಗಂಡ,ಅತ್ತೆ,ಮಾವ ಅಂದರ್…

ಸಾಲಿಗ್ರಾಮ,ಮೇ8,Tv10 ಕನ್ನಡ
ಪ್ರೀತಿಸಿ ಮದುವೆಯಾದ ಹುಡುಗಿ ಮೂರು ವರ್ಷಕ್ಕೇ ನೇಣಿಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಸಾಲಿಗ್ರಾಮದ ಮಲುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.ದೀಪಿಕಾ(21) ಮೃತ ದುರ್ದೈವಿ.ವರದಕ್ಷಿಣೆ ಕಿರುಕುಳ ಆರೋಪದ ಹಿನ್ನಲೆ ಗಂಡ ನಾಗರಾಜ್,ಮಾವ ತಮ್ಮಯ್ಯ,ಅತ್ತೆ ಪೊಲೀಸರ ಅತಿಥಿಯಾಗಿದ್ದಾರೆ.ದೀಪಿಕಾ ಹಾಗೂ ನಾಗರಾಜ್ ದೂರದ ಸಂಭಂಧವಾಗಿದ್ದರೂ ವರಸೆಯಲ್ಲಿ ಅಣ್ಣತಂಗಿ ಆಗಬೇಕು.ಹೀಗಿದ್ದೂ ಇಬ್ಬರು ಪ್ರೀತಿಸಿದ್ದಾರೆ.ವರಸೆಯಲ್ಲಿ ಅಣ್ಣತಂಗಿ ಆದ ಕಾರಣ ಎರಡು ಮನೆಯವರಲ್ಲೂ ಮದುವೆಗೆ ವಿರೋದ ವ್ಯಕ್ತವಾಗಿದೆ.ಮನೆಯವರ ವಿರೋಧ ಲೆಕ್ಕಿಸದ ಲವರ್ಸ್ ಮೂರು ವರ್ಷಗಳ ಹಿಂದೆ ಎಸ್ಕೇಪ್ ಆಗಿ ಮದುವೆ ಆಗಿದ್ದಾರೆ.ಎರಡು ವರ್ಷಗಳ ಕಾಲ ಕೆ.ಆರ್.ನಗರದ ಗ್ರಾಮವೊಂದರಲ್ಲಿ ನೆಲೆಸಿದ್ದು ಒಂದು ವರ್ಷದ ಹಿಂದೆ ಮಲುಗನಹಳ್ಳಿ ಗ್ರಾಮಕ್ಕೆ ಬಂದಿದ್ದಾರೆ.ನಾಗರಾಜ್ ಹಾಗೂ ಪೋಷಕರು ದೀಪಿಕಾಗೆ ವರದಕ್ಷಿಣೆಗಾಗಿ ಕಿರುಕುಳ ಕೊಟ್ಟಿದ್ದಾರೆ.ಬೇಸತ್ತ ದೀಪಿಕ ನೇಣಿಗೆ ಶರಣಾಗಿದ್ದಾಳೆ.ದೀಪಿಕಾ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣವೆಂದು ಆರೋಪಿಸಿ ದೀಪಿಕಾ ಪೋಷಕರು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಸಧ್ಯ ಪತಿ ನಾಗರಾಜ್,ಮಾವ ತಮ್ಮಯ್ಯ,ಅತ್ತೆ ಜಯಮ್ಮ ಪೊಲೀಸರ ಅತಿಥಿಯಾಗಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *