ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್…

ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್…

  • Crime
  • June 30, 2026
  • No Comment
  • 207

ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್…

ಮೈಸೂರು,ಜೂ30,Tv10 ಕನ್ನಡ

ಪ್ರೀತಿಸಿ ಮದುವೆಯಾದ ವಿವಾಹಿತೆಯನ್ನ ಮೂವರು ವ್ಯಕ್ತಿಗಳು ಕಿಡ್ನಾಪ್ ಮಾಡಿ ರಾಮನಗರದ ಮನೆಯೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟ ಘಟನೆ ಬೆಳಕಿಗೆ ಬಂದಿದೆ.ವಿವಾಹಿತೆ ನೀಡಿದ ಮಾಹಿತಿ ಆಧಾರದ ಮೇಲೆ ರಾಮನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಸಂತ್ರಸ್ಥೆಯನ್ನ ರಕ್ಷಣೆ ಮಾಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಆಲನಹಳ್ಳಿ ಠಾಣೆ ಪೊಲೀಸರು ಮೂವರನ್ನ ಬಂಧಿಸಿ ಕಂಬಿ ಎಣಿಸಲು ಕಳಿಸಿದ್ದಾರೆ.

ಆಲನಹಳ್ಳಿಯ ಶಿವಕುಮಾರ್ ಎಂಬುವರ ಪತ್ನಿ ಭವ್ಯ (19) ಎಂಬುವರೇ ಅಪಹರಣಕ್ಕೆ ಒಳಗಾದವರು.ರಾಮನಗರದ ಸುಮ,ಕಿರಣ್ ಹಾಗೂ ಮತ್ತೊಬ್ಬ ಮಹಿಳೆ ಅಪಹರಿಸಿದ ಆರೋಪದ ಹಿನ್ನಲೆ ಅರೆಸ್ಟ್ ಆದವರು.ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಶಿವಕುಮಾರ್ ಒಂದು ವರ್ಷದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರದ ಭವ್ಯ ರನ್ನ ಪ್ರೀತಿಸಿ ಮದುವೆ ಆಗಿದ್ದು ಆಲನಹಳ್ಳಿಯಲ್ಲಿ ವಾಸವಿದ್ದಾರೆ.ಜೂನ್ 25 ರಂದು ಶಿವಕುಮಾರ್ ರವರು ಕೆಲಸದ ನಿಮಿತ್ತ ಬೋಗಾದಿಗೆ ತೆರಳಿದ್ದರು.ಪತ್ನಿಯನ್ನ ಮಾತನಾಡಿಸಲು ಫೋನ್ ಮಾಡಿದಾಗ ಸ್ವಿಚ್ ಆಫ್ ಬಂದಿದೆ.ದೇವಸ್ಥಾನಕ್ಕೆ ಹೋಗಿರಬಹುದೆಂದು ಸುಮ್ಮನಾಗಿದ್ದಾರೆ.ರಾತ್ರಿಯಾದರೂ ಪತ್ನಿ ಮನೆಗೆ ಹಿಂದಿರುಗದ ಹಿನ್ನಲೆ ಆತಂಕದಲ್ಲಿದ್ದ ಶಿವಕುಮಾರ್ ಗೆ ಮರುದಿನ ಕರೆ ಬಂದಿದೆ.ಪತ್ನಿಯೇ ಮಾತನಾಡಿ ನನ್ನನ್ನ ಮೂವರು ವ್ಯಕ್ತಿಗಳು ರಾಮನಗರಕ್ಕೆ ಕರೆತಂದು ಮನೆಯೊಂದರಲ್ಲಿ ಬಂಧಿಸಿದ್ದಾರೆ ರಕ್ಷಣೆ ಮಾಡಿ ಎಂದು ಮಾಹಿತಿ ನೀಡಿ ಲೊಕೇಶನ್ ಕಳಿಸಿದ್ದಾರೆ.ಕೂಡಲೇ ಶಿವಕುಮಾರ್ 112 ಗೆ ಸಂಪರ್ಕಿಸಿ ಸಂಪೂರ್ಣ ಮಾಹಿತಿ ನೀಡಿ ಪತ್ನಿ ಕಳಿಸಿದ ಲೊಕೇಶನ್ ಕೊಟ್ಟಿದ್ದಾರೆ.ರಾಮನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಭವ್ಯರನ್ನ ರಕ್ಷಿಸಿದ್ದಾರೆ.ರಾಮನಗರಕ್ಕೆ ತೆರಳಿದ ಶಿವಕುಮಾರ್ ಪತ್ನಿಯನ್ನ ಸುರಕ್ಷಿತವಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ.ಭವ್ಯರನ್ನ ಮನೆಯಿಂದ ಕರೆದೊಯ್ದ ಹಿನ್ನಲೆ ಶಿವಕುಮಾರ್ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಸುಮ,ಕಿರಣ್ ಹಾಗೂ ಮತ್ತೊಂದು ಲೇಡಿಯನ್ನ ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ದಾರೆ…

Spread the love

Related post

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…
ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…
ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…

Leave a Reply

Your email address will not be published. Required fields are marked *