ಮತ ಚಲಾಯಿಸಿ…ಹೋಟೆಲ್ ಬಿಲ್ ನಲ್ಲಿ ಶೇ50% ರಿಯಾಯಿತಿ ಪಡೆಯಿರಿ…

  • Mysore
  • May 9, 2023
  • No Comment
  • 228

ಮತ ಚಲಾಯಿಸಿ…ಹೋಟೆಲ್ ಬಿಲ್ ನಲ್ಲಿ ಶೇ50% ರಿಯಾಯಿತಿ ಪಡೆಯಿರಿ…

ಮೈಸೂರು,ಮೇ9,Tv10 ಕನ್ನಡ
ಮತದಾನದಲ್ಲಿ ಭಾಗವಹಿಸುವಂತೆ ಅರಿವು ಮೀಡಿಸಲು ಚುನಾವಣಾ ಆಯೋಗ ಸಾಕಷ್ಟು ಕಾರ್ಯಕ್ರಮಗಳನ್ನ ಕೊಟ್ಟಿದೆ.ಪ್ರಜಾಪ್ರಭುತ್ವದ ಹಕ್ಕನ್ನ ಚಲಾಯಸಲು ಹಬ್ಬದಂತೆ ಆಚರಿಸಲು ಮನವಿ ಮಾಡಿದೆ.ಚುನಾವಣಾ ಆಯೋಗಕ್ಕೆ ಹಕವು ಸಂಘಸಂಸ್ಥೆಗಳು ಸಾಥ್ ನೀಡಿವೆ.ಮೈಸೂರಿನ ಚಾಮುಂಡಿಪುರಂನಲ್ಲಿರುವ ಹೋಟೆಲ್ ಮಾಲೀಕರು ಮತದಾನ ಉತ್ತೇಜನಕ್ಕಾಗಿ ಚುನಾವಣಾ ಆಯೋಗದೊಂದಿಗೆ ಕೈ ಜೋಡಿಸಿದೆ. ಕೆಫೆ ಗುಡ್ ವೈಬ್ಸ್ ನ ಮಾಲೀಕರು ಮತದಾನ ಮಾಡಿದ ಯುವ ಸಮೂಹಕ್ಕೆ ರಿಯಾಯಿತಿ ಘೋಷಿಸಿದ್ದಾರೆ. ನಾಳೆ ಮತದಾನ ಮಾಡಿದ ಗುರುತು ತೋರಿಸಿದ 18 ರಿಂದ 30 ವರ್ಷದ ಯುವ ತರುಣ ಮತದಾರರು ತಮ್ಮ ಕೆಫೆಯಲ್ಲಿ ಯಾವುದೇ ತಿನಿಸುಗಳು ಸೇವಿಸಿದರೆ ಶೇ 50% ರಿಯಾಯಿತಿ ನೀಡುವುದಾಗಿ ತಿಳಿಸಿದ್ದಾರೆ. ಪ್ರತಿ ಗ್ರಾಹಕನಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಒಟ್ಟು ಬಿಲ್ಸ್ ನಲ್ಲಿ ಶೇಕಡ 50% ರಿಯಾಯಿತಿ ನೀಡಲಾಗುವುದೆಂದು ಹೇಳಿದ್ದಾರೆ.
ಮತದಾನ ನಮ್ಮ ಹಕ್ಕು
ತಪ್ಪದೇ ಮತ ಚಲಾಯಿಸಿ
ಸಮೃದ್ಧ ಭಾರತ ನಿರ್ಮಿಸೋಣ ಎಂದು ಉಲ್ಲೇಖಿಸಿರುವ ಬ್ಯಾನರ್ ವನ್ನು ಕೆಫೆ ಮುಂಬಾಗ ರಾರಾಜಿಸುತ್ತಿದೆ.
ಮತ ಚಲಾಯಿಸಿ ಬಂದವರಿಗೆ ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ತಿಂಡಿಗಳನ್ನು ರಿಯಾಯಿತಿಯಲ್ಲಿ ಕೊಡಲು ತಯಾರಿ ನಡೆಸಿದ್ದಾರೆ.
ಈ ಕುರಿತು ಹೋಟೆಲ್ ಮಾಲಿಕರಾದ ಸುರೇಶ್ ರವರು ಮಾತನಾಡಿ ದಿನಸಿ, ತರಕಾರಿ, ಗ್ಯಾಸಸಿಲಿಂಡರ್ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿಯೂ ಕೂಡ ನಾವು ಮತದಾನದ ಉತ್ತೇಜನಕ್ಕಾಗಿ ಚುನಾವಣಾ
ಆಯೋಗದೊಂದಿಗೆ ಕೈಜೋಡಿಸಲು ಸಜ್ಜಾಗಿದ್ದೇವೆ. ಮತದಾರರು ಒಂದು ಮತ ಚಲಾಯಿಸಿರುವ ಗುರುತು ತೋರಿಸಿ 50%ರಿಯಾಯಿತಿ ಪಡೆಯಬಹುದೆಂದು ತಿಳಿಸಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *