ಮತ್ತೆ ಕೈ ಗೆ ರಾಜ್ಯದ ಚುಕ್ಕಾಣಿ…ಕಮಲ ಎಡವಿದ್ದೆಲ್ಲಿ… ಚಾಣುಕ್ಯನ ತಂತ್ರವೇ ಮುಳುವಾಯ್ತೇ ಬಿಜೆಪಿಗೆ…

ಮೈಸೂರು,ಮೇ14,Tv10 ಕನ್ನಡ
ಬದಲಾವಣೆ ಜಗದ ನಿಯಮವಂತೆ.ಈ ನಾಣ್ಣುಡಿಗೆ ತಕ್ಕಂತೆ ರಾಜ್ಯದ ರಾಜಕೀಯದಲ್ಲಿ ಬೆಳವಣಿಗೆಯಾಗಿದೆ.ಬಿಜೆಪಿ ಯ (ದುರಾ)ಆಡಳಿತಕ್ಕೆ ಬೇಸತ್ತ ಜನ ಬದಲಾವಣೆ ಬಯಸಿದ್ದಾರೆ ಅಂದ್ರೆ ತಪ್ಪಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಬುಡಸಮೇತ ಅಲುಗಾಡಿಸಲು ತಂತ್ರ ಹೂಡಿದ ಬಿಜೆಪಿ ಚಾಣುಕ್ಯನ ತಂತ್ರ ತಿರುಗುಬಾಣವಾಗಿ ಈ ಫಲಿತಾಂಶಕ್ಕೆ ಕಾರಣವಾಗಿದೆ ಅಂದ್ರೂ ತಪ್ಪಿಲ್ಲ.ಹೌದು..ಮೋದಿ ಅಲೆಯಲ್ಲಿ ಜನ ತೇಲಿ ಹೋಗಿದ್ದಂತೂ ನಿಜ.ಮೋದಿ ಅಲೆಯ ಮುಂದೆ ಕಾಂಗ್ರೆಸ್ ಮಕ್ಕಾಡೆ ಮಲಗುತ್ತದೆ ಎಂಬ ಮಾತುಗಳೂ ಭಾರಿ ಚರ್ಚೆಗೆ ಗ್ರಾಸವಾಗಿತ್ತು.ಆದ್ರೆ ರಾಜ್ಯದ ಜನ ನೀಡಿದ ಉತ್ತರ ಬಿಜೆಪಿಯ ಎಲ್ಲಾ ತಂತ್ರಗಳೂ ತಿರುಗುಮರುಗಾಯ್ತು.ಹಾಗಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಧೂಳೀಪಟ ಮಾಡಲು ಯತ್ನಿಸಿದ ಬಿಜೆಪಿ ಎಡವಿದ್ದಾದರೂ ಎಲ್ಲಿ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಕಾರಣವಾಗುತ್ತಿದೆ.of course ಹಿಂದುತ್ವದ ಅಜೆಂಡಾ ಹಿಡಿದ ಬಿಜೆಪಿ ಅಧಿಕಾರಕ್ಕೆ ಬಂದಿದ್ದಂತೂ ಸತ್ಯ.ಆದ್ರೆ ಕೇವಲ ಹಿಂದುತ್ವದ ಅಜೆಂಡಾ ಮಾತ್ರ ಇದ್ರೆ ಸಾಕಾ ಎಂಬ ಪ್ರಶ್ನೆಗೆ ಈಗಾಗಲೇ ಮತದಾರ ತಕ್ಕ ಉತ್ತರ ನೀಡಿದ್ದಾನೆ.ಜಾತ್ಯಾತೀತ ವ್ಯವಸ್ಥೆಯನ್ನ ನಂಬಿದ ಜನಕ್ಕೆ ಕೇವಲ ಹಿಂದುತ್ವದ ಅಜೆಂಡಾ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.ಯೆಸ್…ಈ ಹಿನ್ನಲೆ ತಕ್ಕ ಪಾಠ ಕಲಿಸಿದ್ದಾರೆ ಅಂಬೋಣ.ಈ ಚುನಾವಣೆಯಲ್ಲಿ ಬಿಜೆಪಿ ಎಡವಲು ನಾನಾ ಕಾರಣಗಳಿವೆ.ಒಂದೆಡೆ ದುರಾಡಳಿತ,ಮನಸೋ ಇಚ್ಛೆ ಹೇಳಿಕೆಗಳು,ಬೆಲೆ ಏರಿಕೆ,ಪೆಡ್ರೋಲ್ ಬೆಲೆ ಏರಿಕೆ,40% ಕಮೀಷನ್ ಆರೋಪಗಳು,ನಿಯಂತ್ರಣವಿಲ್ಲದ ಲಂಚಗುಳಿತನ,ಸರ್ಕಾರಿ ಕಚೇರಿಗಳಲ್ಲಿ ಮಾಯವಾದ ಪಾರದರ್ಶಕತೆ,ಅನಗತ್ಯ ವರ್ಗಾವಣೆ,ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ ಹಗರಣ,ಪ್ರಶ್ನೆ ಪತ್ರಿಕೆಗಳ ಸೋರಿಕೆ,ಸಂವಿಧಾನ ಬದಲಿಸುವ ಹೇಳಿಕೆಗಳು,ಕೆಲವು ಧರ್ಮಗಳನ್ನ ಟಾರ್ಗೆಟ್ ಮಾಡಿರುವುದು,ಬಿಜೆಪಿ ಅಸ್ತಿತ್ವಕ್ಕೆ ಬರಲು ಕಾರಣರಾದ ನಾಯಕರನ್ನೇ ಕಡೆಗಣಿಸಿದ್ದು ಹೀಗೆ ಹತ್ತಾರು ಅಂಶಗಳು ಕಣ್ಣಿಗೆ ಕಾಣಿಸುತ್ತದೆ.ಆದ್ರೆ ಮತ್ತೊಂದು ವಿಚಾರದಲ್ಲಿ ಬಿಜೆಪಿ ಕೈ ಹಾಕಿದ್ದೇ ಮುಳುವಾಯ್ತು ಅನ್ನೋದು ರಾಜಕೀಯ ಪಂಡಿತರ ಅಭಿಪ್ರಾಯ.

ಹೌದು…ಮೋದಿ,ಅಮಿತ್ ಷಾ ಒಂದು ಬಾರಿ ಬಂದು ಹೋದ್ರೆ ಸಾಕು ಬಿಜೆಪಿಗೆ ಪ್ಲಸ್ ಪಾಯಿಂಟ್ ಎಂದು ಹೇಳುತ್ತಿದ್ದವರ ಬಾಯಿಗೆ ಇದೀಗ ಬೀಗ ಬಿದ್ದಂತಾಗಿದೆ.ಮೋದಿ ಅಲೆಯೊಂದೇ ಸಾಕು ಎನ್ನುವರ ಲೆಕ್ಕಾಚಾರವೂ ತಪ್ಪಾಗಿದೆ.ಇದಲ್ಲದೆ ಬಿಜೆಪಿ ಯ ಕೇಂದ್ರ ನಾಯಕರು ಇಟ್ಟ ಹೆಜ್ಜೆ ಮುಳುವಾಗಲು ಕಾರಣವಾಗಿದೆ.ಅದೇನು ಗೊತ್ತಾ..? ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಮಾಡಿದ ಟಾರ್ಗೆಟ್.ಚುನಾವಣೆ ಕಾವು ಶುರುವಾದ ದಿನಗಳಿಂದಲೂ ಬಿಜೆಪಿಯ ಒಂದೇ ಮಂತ್ರ ಸಿದ್ದು,ಡಿಕೆಶಿ ಯನ್ನ ಹಣೆಯುವುದು.ಈ ಇಬ್ಬರು ನಾಯಕರನ್ನ ಮಣಿಸಿದರೆ ಕಾಂಗ್ರೆಸ್ ಕಥೆ ಮುಗಿದಂತೆಯೇ ಎಂದು ತೀರ್ಮಾನಕ್ಕೆ ಬಂದಿದ್ದು ಬಿಜೆಪಿ ಇಟ್ಟ ತಪ್ಪು ಹೆಜ್ಜೆ.ಇಂತಹ ನಿರ್ಧಾರವನ್ನ ಕಾರ್ಯಗತಗೊಳಿಸಲು ಬಿಜೆಪಿ ನಡೆಸಿದ ರಣತಂತ್ರಗಳು ಉಲ್ಟಾ ಹೊಡೆಯಿತು.ಹಿಂದುತ್ವದ ಅಜೆಂಡಾ ಹಾಗೂ ಅಭಿವೃದ್ದಿಯ ಮಂತ್ರ ಪಠಿಸುತ್ತಾ ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ಯತ್ನಿಸಿದ್ದರೆ ನಿಜವಾಗ್ಲೂ ಜನ ಕೈ ಹಿಡಿಯುತ್ತಿದ್ದರು.ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಣಿಸುವುದೇ ಗುರಿ ಎಂಬ ಕಾನ್ಸೆಪ್ಟ್ ನಿಂದ ರಾಜ್ಯಕ್ಕೆ ಎಂಟ್ರಿ ಕೊಟ್ಟ ನಾಯಕರಿಗೆ ಈ ಫಲಿತಾಂಶ ಮುಖಭಂಗವಾಗಿದೆ.ಇದು ನನ್ನ ಕೊನೆ ಚುನಾವಣೆ ಎಂದು ಘೋಷಿಸಿಕೊಂಡ ಸಿದ್ದರಾಮಯ್ಯರನ್ನ ಮುಗಿಸಲು ಬಿಜೆಪಿ ಕೊನೆ ಗಳಿಗೆಯಲ್ಲಿ ಯಾವುದೇ ಮುನ್ಸೂಚನೆ ನೀಡದೆ ಲಿಂಗಾಯಿತ ಸಮುದಾಯದ ಪ್ರಬಲ ನಾಯಕ ವಿ.ಸೋಮಣ್ಣರನ್ನ ಕಣಕ್ಕೆ ಇಳಿಸಿ ಸ್ಕೆಚ್ ಹಾಕಿತು.ಮುಖ್ಯಮಂತ್ರಿಯ ಗಾಧಿಗೆ ಪೈಪೋಟಿ ನಡೆಸುತ್ತಿರುವ ಮತ್ತೊಬ್ಬ ಕೈ ನಾಯಕ ಡಿ.ಕೆ.ಶಿವಕುಮಾರ್ ಮಣಿಸಲು ಅಶೋಕ್ ರನ್ನ ಕಣಕ್ಕೆ ಇಳಿಸಿತು.ಇಬ್ಬರು ನಾಯಕರನ್ನ ರಾಜಕೀಯವಾಗಿ ಮುಗಿಸಲು ಇನ್ನಿಲ್ಲದ ತಂತ್ರ ರೂಪಿಸಿತು.ಸಿದ್ದರಾಮಯ್ಯರನ್ನ ಮುಗಿಸುವುದೇ ಏಕೈಕ ಗುರಿ ಎಂಬಂತೆ ಬಿಂಬಿಸುತ್ತಾ ಬಂದ ನಾಯಕರಿಗೆ ಹಿಂದಿನಿಂದಲೂ ಕೈ ಹಿಡಿಯುತ್ತಾ ಬಂದಿದೆ ಕೆಲ ಸಮುದಾಯಗಳು ಸವಾಲಾಗಿ ಸ್ವೀಕರಿಸಿತು.ಇದೇ ತಂತ್ರ ಕನಕಪುರದಲ್ಲೂ ಬೆಳವಣಿಗೆಯಾಯಿತು.ಕೇವಲ ಎರಡು ಸಮುದಾಯಗಳ ಬೆಂಬಲ ಹೊಂದಿದ್ದ ಬಿಜೆಪಿ ಸಿದ್ದು,ಡಿಕೆಶಿಯನ್ನ ಟಾರ್ಗೆಟ್ ಮಾಡಿಕೊಂಡಿದ್ದು ಇಡೀ ರಾಜ್ಯದ ಜನತೆಗೆ ಮೆಸೇಜ್ ಪಾಸ್ ಆಗಿತ್ತು.ದೇಶದಲ್ಲಿ ಮೋದಿ ಎಷ್ಟು ಮುಖ್ಯವೋ ಹಾಗೇ ರಾಜ್ಯದಲ್ಲೂ ಸಿದ್ದರಾಮಯ್ಯ,ಡಿಕೆಶಿ ಪ್ರಮುಖ ನಾಯಕರು.ಈ ಹಿಂದಿನ ಚುನಾವಣೆಗಳನ್ನ ಸೂಕ್ಷ್ಮವಾಗಿ ಗಮನಿಸಿದರೆ ಸಾಕು.ಸಿದ್ದರಾಮಯ್ಯರ ವಿರುದ್ದ ಹರಿಹಾಯ್ದ ಉಪಚುನಾವಣೆಗಳಲ್ಲಿ ಸೋಲು ಕಂಡಿದ್ದೇ ಹೆಚ್ಚು.ಈ ಅಂಶಗಳನ್ನಾದ್ರೂ ಗಮನದಲ್ಲಿಟ್ಟುಕೊಂಡು ಬಿಜೆಪಿ ಇಂತಹ ನಿರ್ಧಾರ ಕೈಗೊಳ್ಳಬೇಕಿತ್ತು.ಇಬ್ಬರು ನಾಯಕರನ್ನ ಹಣೆಯಲು ತಂತ್ರ ರೂಪಿಸಿದ ಬಿಜೆಪಿಯ ಈ ನಡೆ ಮುಳುವಾಗಿದೆ.ಇಬ್ಬರು ನಾಯಕರ ಸಮುದಾಯಗಳು ಹಾಗೂ ಕಾಂಗ್ರೆಸ್( ಸಿದ್ದರಾಮಯ್ಯ,ಡಿಕೆಶಿ) ನೇ ನಂಬಿರುವ ಅಹಿಂದಾ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಒಗ್ಗಟ್ಟಾಗಲು ವೇದಿಕೆ ಸೃಷ್ಟಿಯಾಗಲು ಬಿಜೆಪಿ ಪರೋಕ್ಷವಾಗಿ ಕಾರಣವಾಗಿದೆ.ಕಾಂಗ್ರೆಸ್ ನಂಬಿದ ಸಮುದಾಯಗಳು ಒಗ್ಗಟ್ಟಾಗಿ ತಕ್ಕ ಪಾಠ ಕಲಿಸಿದೆ.ವರುಣಾ ದಲ್ಲಿ ಹಾಗೂ ಕನಕಪುರದಲ್ಲಿ ನಡೆದ ಒಂದೊಂದು ಬೆಳವಣಿಗೆಯೂ ಈ ಸಮುದಾಯಗಳು ಒಗ್ಗಟ್ಟಾಗಲು ಸಂದೇಶ ರವಾನಿಸಿದಂತಾಗಿದೆ.

ಮೋದಿ ಅಲೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದರೆ ಬಿಜೆಪಿಗೆ ವರದಾನವಾಗುತ್ತಿತ್ತು.ಅದು ಬಿಟ್ಟು ರಾಜ್ಯದ ಇಬ್ಬರು ಪ್ರಬಲ ನಾಯಕರನ್ನ ರಾಜಕೀಯವಾಗಿ ಮುಗಿಸಲು ರೂಪಿಸಿದ ತಂತ್ರ ತಿರುಗುಬಾಣವಾಯಿತು.ಈ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಿಸಿರುವ ಪ್ರಣಾಳಿಕೆ ಎಷ್ಟು ವರ್ಕೌಟ್ ಆಗಿದೆಯೋ ಗೊತ್ತಿಲ್ಲ ಆದ್ರೆ ಸಿದ್ದು ಡಿಕೆಶಿಯನ್ನ ಮುಗಿಸುವ ಹುನ್ನಾರ ಕಾಂಗ್ರೆಸ್ ಗೆ ಪಕ್ಕಾ ವರದಾನವಾಗಿ ಪರಿಣಮಿಸಿದೆ.ಬದಲಾವಣೆ ಬಯಸಿದ್ದ ಜನತೆಗೆ ಸಿದ್ದು,ಡಿಕೆಶಿ ಯನ್ನ ಮುಗಿಸಲು ಹಾಕಿದ ಪ್ಲಾನ್ ಕಾಂಗ್ರೆಸ್ ಗೆ ಒಗ್ಗರಣೆಯಾಗಿ ಫಲಿಸಿದೆ.ಸಿದ್ದು ಡಿಕೆಶಿ ಹವಾದಲ್ಲಿ ಮೋದಿ ಅಲೆ ತೇಲಿಹೋಗಿದೆ.ಇನ್ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಕನಸು ಕಾಣಬೇಕಾದ್ರೆ ಬಿಜೆಪಿ ಹೊಸ ಮಾಸ್ಟರ್ ಪ್ಲಾನ್ ಸಿದ್ದಪಡಿಸಬೇಕಿದೆ.ಸಿದ್ದು,ಡಿಕೆಶಿ ಯನ್ನ ರಾಜ್ಯದ ಜನತೆ ಕೈ ಬಿಡಲ್ಲ ಎಂಬ ಸಂದೇಶವನ್ನೂ ಸಾರಿದಂತಾಗಿದೆ…

Spread the love

Related post

ಮಹಿಳೆ ಬರ್ಭರ ಹತ್ಯೆ…ನಗದು ಚಿನ್ನಾಭರಣ ದೋಚಿದ ಹಂತಕರು…

ಮಹಿಳೆ ಬರ್ಭರ ಹತ್ಯೆ…ನಗದು ಚಿನ್ನಾಭರಣ ದೋಚಿದ ಹಂತಕರು…

ಪಿರಿಯಾಪಟ್ಟಣ,ಜು21,Tv10 ಕನ್ನಡ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಮಹಿಳೆಯೋರ್ವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಭಾಗ್ಯವತಿ (32) ಕೊಲೆಯಾದ ಮಹಿಳೆ. ಪಿರಿಯಾಪಟ್ಟಣ ತಾಲ್ಲೂಕು ಚೌಥಿ ಗ್ರಾಮದಲ್ಲಿ ಘಟನೆ ನಡೆದಿದೆ. 5 ವರ್ಷದ…
ಹುಲಿ ದಾಳಿ…ಹಸು ಬಲಿ…ಗ್ರಾಮಸ್ಥರಲ್ಲಿ ಆತಂಕ…

ಹುಲಿ ದಾಳಿ…ಹಸು ಬಲಿ…ಗ್ರಾಮಸ್ಥರಲ್ಲಿ ಆತಂಕ…

ಹೆಚ್.ಡಿ.ಕೋಟೆ,ಜು20,Tv10 ಕನ್ನಡಹುಲಿ ದಾಳಿಗೆ ಹಸು ಬಲಿಯಾದ ಘಟನೆ ಹೆಚ್.ಡಿ.ಕೋಟೆ ಯಲ್ಲಿ ನಡೆದಿದೆ. ಪಟ್ಟಣದಿಂದ ಕೇವಲ 1ಕಿಮೀ ಅಂತರದ ಕೃಷ್ಣಪುರ ಗ್ರಾಮದ ಜಮೀನಿನಲ್ಲಿ ಘಟನೆ ನಡೆದಿದ್ದು ಸ್ಥಳೀಯರು ಆತಂಕಕ್ಕೆಸಿಲುಕಿದ್ದಾರೆ.ರಾಮಸ್ವಾಮಿ ಎಂಬುವವರು…
ಜಮೀನಿನಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ…ಕೊಲೆ ಶಂಕೆ…

ಜಮೀನಿನಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ…ಕೊಲೆ ಶಂಕೆ…

ಪಿರಿಯಾಪಟ್ಟಣ,ಜು20,Tv10 ಕನ್ನಡ ಯುವಕನ ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮಡಹಳ್ಳಿ ಗ್ರಾಮದಲ್ಲಿ ನಡೆದಿದೆ.ದುಷ್ಕರ್ಮಿಗಳು ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ…

Leave a Reply

Your email address will not be published. Required fields are marked *