
ತನ್ವೀರ್ ಸೇಠ್ ಗೆ ಡಿಸಿಎಂ ಸ್ಥಾನ ನೀಡುವಂತೆ ಒತ್ತಾಯ…ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ…
- MysorePolitics
- May 17, 2023
- No Comment
- 31

ತನ್ವೀರ್ ಸೇಠ್ ಗೆ ಡಿಸಿಎಂ ಸ್ಥಾನ ನೀಡುವಂತೆ ಒತ್ತಾಯ…ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ…
ಮೈಸೂರು,ಮೇ17,Tv10 ಕನ್ನಡ
ಮೈಸೂರು ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪ್ರತಿನಿಧಿಸಿ 6 ನೇ ಬಾರಿಗೆ ಚುನಾಯಿತರಾದ ತನ್ವೀರ್ ಸೇಠ್ ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಟೌನ್ ಹಾಲ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.ಮುಸ್ಲಿಂ ಸಮುದಾಯದ ಮತಗಳನ್ನ ಸೆಳೆಯಲು ಪ್ರಭಾವ ಬೀರಿದ ತನ್ವೀರ್ ಸೇಠ್ ಗೆ ಡಿಸಿಎಂ ಸ್ಥಾನ ಜೊತೆಗೆ ಉತ್ತಮ ಖಾತೆ ನೀಡುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕಾರ್ಪೊರೇಟರ್ ಗಳಾದ ಅಯಾಜ್ ಪಾಷ,ಬಷೀರ್ ಅಹಮದ್,ಶೌಕತ್ ಪಾಷಾ,ಶಾಂತಕುಮಾರಿ,ದೇವರಾಜ್,ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಎಕ್ಬಾಲ್ ಹಾಗೂ ತನ್ವೀರ್ ಸೇಠ್ ಅಭಿಮಾನಿಗಳ ಬಳಗದ ರಾಜ್ಯಾಧ್ಯಕ್ಷ ಫೈರೋಜ್ ಖಾನ್ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು…