ವಿವಿಧ ಮಾದರಿಯ 130 ಮೊಬೈಲ್ ಫೋನ್ ವಶ: ಎನ್ ಯತೀಶ್
- CrimeTV10 Kannada Exclusive
- May 18, 2023
- No Comment
- 110
ವಿವಿಧ ಮಾದರಿಯ 130 ಮೊಬೈಲ್ ಫೋನ್ ವಶ: ಎನ್ ಯತೀಶ್
ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೆಂಟ್ರಲ್ ಎಕ್ಯುಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ತಂತ್ರಾಂಶದ ಸಹಾಯದಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಕಳ್ಳತನ/ಕಾಣೆಯಾಗಿದ್ದ ರೂ.23,00,000/- ಬೆಲೆ ಬಾಳುವ ವಿವಿಧ ಮಾದರಿಯ 130 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಸಾರ್ವಜನಿಕರು ಕಳೆದುಕೊಂಡಿದ್ದ ವಿವಿಧ ಮಾದರಿಯ ಮೊಬೈಲ್ ಪೋನ್ ಗಳನ್ನು ದೂರುದಾರರಿಗೆ ಹಿಂದಿರುಗಿಸಲಾಗಿದೆ ಎಂದರು.
ಸಾರ್ವಜನಿಕರು ತಮ್ಮ ಮೊಬೈಲ್ ಪೋನ್ ಕಳೆದುಹೋದಲ್ಲಿ ಸಿ.ಇ.ಎನ್ ಪೋರ್ಟಲ್ ನ್ನು ಬಳಸಿಕೊಂಡು, ನಿಮ್ಮ ಮೊಬೈಲ್ ನ ಐ.ಎಂ.ಎ ನಂಬರ್ ತೆಗೆದುಕೊಂಡು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ, ದೂರಿನ ಪ್ರತಿಯನ್ನು ಪಡೆದು www.ceir.gov.in ನಲ್ಲಿ ಲಾಗಿನ್ ಆಗಿ ದೂರನ್ನು ದಾಖಲಿಸಿ ಎಂದರು.
ಮಂಡ್ಯ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ/ ಕಾಣೆಯಾಗಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡುವ ಸಂಬಂಧವಾಗಿ ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರಾದ ಸಿ.ಇ ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಎನ್. ಜಯಕುಮಾರ್ ನೇತೃತ್ವದಲ್ಲಿ ಪಿ.ಎಸ್.ಐ ರಾಘವೇಂದ್ರ ಎಂ ಕಠಾರಿ, ರಸೂಲಸಾಬ ಎಂ ಗೌಂಡಿ ಹಾಗೂ ಸಿಬ್ಬಂದಿಗಳಾದ ಎ.ಎಂ ರಾಜೇಅರಸ್, ಎಸ್. ಗಿರೀಶ್, ಹೆಚ್.ಆರ್ ಸುಮನ್ ಅವರು ಒಳಗೊಂಡಂತೆ ಅಧಿಕಾರಿಯವರ ತಂಡ ರಚನೆ ಮಾಡಲಾಗಿತ್ತು.
ಮಂಡ್ಯ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿ ಪ್ರಶಂಸಿರುತ್ತಾರೆ.