• May 18, 2023

ಹಾಡುಹಗಲೇ ವ್ಯಕ್ತಿ ಭೀಕರ..ಹಳೇ ದ್ವೇಷ ಹಿನ್ನಲೆ ಮರ್ಡರ್…ದೇವು ಕೊಲೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದ ಮೃತ…

ಹಾಡುಹಗಲೇ ವ್ಯಕ್ತಿ ಭೀಕರ..ಹಳೇ ದ್ವೇಷ ಹಿನ್ನಲೆ ಮರ್ಡರ್…ದೇವು ಕೊಲೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದ ಮೃತ…

ಮೈಸೂರು,ಮೇ18,Tv10 ಕನ್ನಡ
ಹುಣಸೂರಿನಲ್ಲಿ ನಡೆದಿದ್ದ ಜೋಡಿ ಕೊಲೆ ಹಾಗೂ ದೇವೂ ಮರ್ಡರ್ ಕೇಸ್ ನಲ್ಲಿ ಭಾಗಿಯಾಗಿ ಕ್ಲೀನ್ ಚಿಟ್ ಪಡೆದಿದ್ದ ವ್ಯಕ್ತಿಯನ್ನ ಹಾಡುಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ.ಕುಂಡ ಚಂದ್ರು(42) ಕೊಲೆಯಾದ ದುರ್ದೈವಿ.ಮೈಸೂರಿನ ಒಂಟಿಕೊಪ್ಪಲ್ ಮೂರನೇ ಕ್ರಾಸ್ ನಲ್ಲಿರುವ ತನ್ನ ನಿವಾಸದ ಮುಂಭಾಗ ಭೀಕರವಾಗಿ ಕೊಲೆಯಾಗಿದ್ದಾನೆ.ಹುಣಸೂರಿನಲ್ಲಿ ನಡೆದ ಜೋಡಿ ಕೊಲೆ ಹಾಗೂ ದೇವು ಮರ್ಡರ್ ಕೇಸ್ ನಲ್ಲಿ ಆರೋಪಿಯಾಗಿದ್ದ ಕುಂಡ ಚಂದ್ರು ನಿರ್ದೋಷಿಯಾಗಿ ಬಿಡಿಗಡೆಯಾಗಿದ್ದ.ಮಾತೃಮಂಡಳಿ ವೃತ್ತದಲ್ಲಿ ಫಾಸ್ಟ್ ಫುಡ್ ನಡೆಸುತ್ತಾ ಜೀವನ ಸಾಗಿಸುತ್ತಿದ್ದ.ಇಂದು ಸಂಜೆ ಇಬ್ಬರು ಹಂತಕರು ಅಟ್ಯಾಕ್ ಮಾಡಿದ್ದಾರೆ.ತೀವ್ರ ಗಾಯಗೊಂಡ ಕುಂಡ ಚಂದ್ರುವನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ವಿ.ವಿ.ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…

Spread the love

Leave a Reply

Your email address will not be published.