
ನನ್ನ ಗೆಲುವನ್ನ ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್,ಖರ್ಗೆ ರವರಿಗೆ ಅರ್ಪಿಸುತ್ತೇನೆ…ನೂತನ ಶಾಸಕ ಹರೀಶ್ ಗೌಡ…
- MysorePolitics
- May 18, 2023
- No Comment
- 23
ಮೈಸೂರು,ಮೇ18,Tv10 ಕನ್ನಡ
ನನ್ನ ಗೆಲುವನ್ನ ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್,ಮಲ್ಲಿಕಾರ್ಜುನ ಖರ್ಗೆ ರವರಿಗೆ ಅರ್ಪಿಸುತ್ತೇನೆ ಎಂದು ಚಾಮರಾಜ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಪ್ರತಿನಿಧಿಸಿ ನೂತನವಾಗಿ ಆಯ್ಕೆಯಾದ ಹರೀಶ್ ಗೌಡ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದರು.ನನ್ನ ಕ್ಷೇತ್ರದ ಜನರ ಅಲ್ಲದೇ ವಿವಿಧ ಭಾಗದ ಜನರು ನನಗೆ ಬೆಂಬಲೆ ಸೂಚಿಸಿದ್ದಾರೆ.
ನನ್ನನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಹಾಗೂ ಖರ್ಗೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.
ನನ್ನ ಗೆಲುವನ್ನ ಈ ಮೂವರಿಗೆ ಅರ್ಪಿಸುತ್ತೆನೆ.
ನನಗೆ ೨೦-೨೫ ದಿನ ಮಾತ್ರ ಅವಕಾಶ ಇತ್ತು.
ಎಲ್ಲರೂ ನನ್ನ ಪರವಾಗಿ ಕೆಲಸ ಮಾಡಿದ್ದಾರೆ.
ನಾನು ಶಾಸಕ ನಾದ ನಂತರ ಏನು ಕೆಲಸ ಮಾಡುತ್ತೇನೆ ಎಂದು ಹೇಳಿದ್ದ ಅದನ್ನು ಪೂರ್ಣಗೊಳಿಸುತ್ತೇನೆ.
ಆಶ್ರಯ ಮನೆಗೆಳನ್ನ ೨೦ ವರ್ಷಗಳಿಂದ ನೀಡಿಲ್ಲ.ಅವುಗಳನ್ನು ನೀಡಲು ನಾನು ಕಟುಬದ್ದನಾಗಿ ಇರುತ್ತೇನೆ.ನನ್ನ ಎಲ್ಲಾ ವಾಗ್ದನಗಳನ್ನು ನಾನು ಪೂರೈಸುತ್ತೇನೆ.
ನನ್ನ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ.ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಭದ್ರಕೊಟೆ.ಇಲ್ಲಿ ಗೆದ್ರೆ ಕಾಂಗ್ರೆಸ್ ಜೆಡಿಎಸ್ ಮಾತ್ರ ಗೆಲ್ಲಬೇಕಿತ್ತು.
ಕಳೆದ ಬಾರಿಯ ಗೊಂದಲದಿಂದ ಬಿಜೆಪಿ ಗೆದ್ದಿತ್ತು ಎಂದು ತಮ್ಮ ಗೆಲುವಿನ ಕಾರಣ ತಿಳಿಸಿದರು.
ಚುನಾವಣೆಗಾಗಿ ಯಾರಿಂದಲೂ ಹಣ ಪಡೆದಿಲ್ಲ.ನಾನು ಪಕ್ಷ ನೀಡಿದ ಹಣದಲ್ಲಿ ಚುನಾವಣೆ ಮಾಡಿದ್ದೀನಿ.
ಯಾವ ಪಬ್, ಬಾರ್ ಹುಕ್ಕ ಬಾರ್, ಜೂಜು ಅಡ್ಡೆಗಳಿಂದ ಹಣ ಪಡೆದಿಲ್ಲ.ನನಗೆ ಮೂರು ಪಕ್ಷದ ಕಾರ್ಯಕರ್ತರು ನನಗೆ ಸಹಾಯ ಮಾಡಿದ್ದಾರೆ.
ಎಲ್ಲರೂ ನನಗೆ ಬೆಂಬಲವಾಗಿ ನಿಂತರು ಎಂದು ಸ್ಪಷ್ಟಪಡಿಸಿದರು…