ಹಳೇ ವಸ್ತುಗಳ ಮರುಬಳಕೆ ಯೋಜನೆ…ಪಾಲಿಕೆ ಜೊತೆ ಕೈಜೋಡಿಸಿದ ಕೆಎಂಪಿಕೆ ಟ್ರಸ್ಟ್…
- MysoreTV10 Kannada Exclusive
- May 21, 2023
- No Comment
- 100
ಹಳೇ ವಸ್ತುಗಳ ಮರುಬಳಕೆ ಯೋಜನೆ…ಪಾಲಿಕೆ ಜೊತೆ ಕೈಜೋಡಿಸಿದ ಕೆಎಂಪಿಕೆ ಟ್ರಸ್ಟ್…
ಮೈಸೂರು,ಮೇ21,Tv10 ಕನ್ನಡ
ಮೈಸೂರು ಮಹಾನಗರ ಪಾಲಿಕೆ ರೂಪಿಸಿದ ಹಳೇ ವಸ್ತುಗಳ ಮರು ಬಳಕೆಯ ನನ್ನ ಜೀವನ ನನ್ನ ಸ್ವಚ್ಛನಗರ ಯೋಜನೆ ಯಶಸ್ಸಿಗೆ ಮೈಸೂರಿನ ಕೆಎಂಪಿಕೆ ಚಾರಿಟೆಬಲ್ ಟ್ರಸ್ಟ್ ಕೈ ಜೋಡಿಸಿದೆ. ಅನುಪಯುಕ್ತ ವಸ್ತುಗಳ ಮರುಬಳಕೆಯ ಯೋಜನೆ ಇದಾಗಿದೆ.
ಮರುಬಳಕೆಗೆ ಉಪಯೋಗವಾಗುವ ಹಳೇ ವಸ್ತುಗಳನ್ನ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ರವರಿಗೆ ಹಸ್ತಾಂತರಿಸುವ ಮೂಲಕ ವಿಶೇಷ ಅಭಿಯಾನಕ್ಕೆ ಕೆಎಂಪಿಕೆ ಚಾರಿಟೆಬಲ್ ಟ್ರಸ್ಟ್ ಕೈ ಜೋಡಿಸಿದೆ.
ಮೇ 20 ರಿಂದ ಜೂನ್ 5ರ ವರೆಗೆ ಹಳೆ ವಸ್ತುಗಳನ್ನ ಸಂಗ್ರಹಿಸಲಾಗುತ್ತದೆ. ಹಳೆಯ ಬಟ್ಟೆ , ನ್ಯೂಸ್ ಪೇಪರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಟ್ರಸ್ಟ್ ನ ವತಿಯಿಂದ ಪಾಲಿಕೆಗೆ ಹಸ್ತಾಂತರಿಸಲಾಗಿದೆ.
ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜು ಮಾತನಾಡಿ, ನಗರದಾದ್ಯಂತ ಪಾಲಿಕೆ 9 ವಲಯಗಳಲ್ಲಿ ಒಟ್ಟು 27 ಕಡೆಗಳಲ್ಲಿ ವಸ್ತುಗಳನ್ನು ಸಂಗ್ರಹಿಸುವ ಕೇಂದ್ರಗಳನ್ನು ತೆರೆದಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರು ಹಳೆ ಬಟ್ಟೆ, ಓದಿದ ಪುಸ್ತಕಗಳು, ಹಳೆಯ ಆಟಿಕೆಗಳು, ಹಳೆಯ ಬೈಸಿಕಲ್, ಹಳೆಯ ನ್ಯೂಸ್ ಪೇಪರ್‌ಗಳನ್ನು ನೀಡಿದರೆ ಅದನ್ನು ಪಾಲಿಕೆ ಸ್ವೀಕರಿಸುತ್ತದೆ. ಇಲ್ಲವೇ ನಿತ್ಯವೂ ಬೆಳಗಿನ ವೇಳೆ ಕಸ ಸಂಗ್ರಹಣೆಗೆ ಬರುವ ವಾಹನಗಳಿಗೂ ಈ ವಸ್ತುಗಳನ್ನು ನೀಡಬಹುದಾಗಿದೆ. ನಾಗರಿಕರು ಈ ಉಪಯುಕ್ತ ಯೋಜನೆಯನ್ನು ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಯೋಜನೆಯಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನೀಡಿದರೆ ಬಟ್ಟೆಯ ಬ್ಯಾಗ್ ವಿತಗರಿಸಲಾಗುತ್ತದೆ. ಸಂಗ್ರಹವಾದ ಪ್ಲಾಸ್ಟಿಕ್ ಅನ್ನು ಮರು ಬಳಕೆಗೆ ನೀಡಲಾಗುತ್ತದೆ. ಇದೊಂದು ಅತ್ಯುತ್ತಮ ಸೇವಾ ಕಾರ್ಯವಾಗಿದೆ ಎಂದರು.
ಈ ವೇಳೆ ಕೆ.ಎಂ.ಪಿ.ಕೆ.ಟ್ರಸ್ಟ್ ನ ವಿಕ್ರಂ ಅಯ್ಯಂಗಾರ್,
ವಲಯ ಕಚೇರಿಯ ಆರೋಗ್ಯ ನಿರೀಕ್ಷಕಿ ಪ್ರೀತಿ, ಸಂಚಾಲಕರಾದ ಎಸ್ ಎನ್ ರಾಜೇಶ್, ಬೈರತಿ ಲಿಂಗರಾಜು, ಮಂಜುನಾಥ್, ರವಿಚಂದ್ರ, ಹಾಗು ಇನ್ನಿತರರು ಹಾಜರಿದ್ದರು.