ಕೋಟ್ಯಾಂತರ ಬೆಲೆ ಬಾಳುವ 27 ಎಕ್ರೆ ಜಮೀನು ಕಬಳಿಸಲು ಸಂಚು…ಮುಡಾ ಅಧಿಕಾರಿಗಳು ಶಾಮೀಲು…ದಾಖಲೆ ಸಮೇತ ಹಾಜರಾಗುವಂತೆ ಆಯುಕ್ತರಿಗೆ ಜಿಲ್ಲಾಧಿಕಾರಿ ನೋಟೀಸ್…
- CrimeMysoreTV10 Kannada Exclusive
- May 21, 2023
- No Comment
- 214
ಕೋಟ್ಯಾಂತರ ಬೆಲೆ ಬಾಳುವ 27 ಎಕ್ರೆ ಜಮೀನು ಕಬಳಿಸಲು ಸಂಚು…ಮುಡಾ ಅಧಿಕಾರಿಗಳು ಶಾಮೀಲು…ದಾಖಲೆ ಸಮೇತ ಹಾಜರಾಗುವಂತೆ ಆಯುಕ್ತರಿಗೆ ಜಿಲ್ಲಾಧಿಕಾರಿ ನೋಟೀಸ್…
ಮೈಸೂರು,ಮೇ21,Tv10 ಕನ್ನಡ
ಮೈಸೂರು ಹೃದಯ ಭಾಗದಲ್ಲಿರುವ 27 ಎಕ್ರೆ ಜಮೀನನ್ನ ಕಬಳಿಸಲು ಸಂಚು ರೂಪಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಭೂಗಳ್ಳರ ಜೊತೆ ಮುಡಾ ಅಧಿಕಾರಿಗಳೇ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.ಭಾರಿ ಗೋಲ್ ಮಾಲ್ ಬಗ್ಗೆ ಸೂಕ್ತ ವಿವರಣೆ ನೀಡುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರು ಮುಡಾ ಆಯುಕ್ತರಿಗೆ ನೋಟೀಸ್ ಜಾರಿ ಮಾಡಿದ್ದಾರೆ.ನಾಳೆ(22-5-23) ಸಂಜೆ 5 ಗಂಟೆ ಒಳಗೆ ದಾಖಲೆ ಸಮೇತ ಹಾಜರಾಗಿ ಸೂಕ್ತ ವಿವರಣೆ ನೀಡವಂತೆ ಜಿಲ್ಲಾಧಿಕಾರಿಗಳು ಛಾಟಿ ಬೀಸಿದ್ದಾರೆ.ವಕೀಲ ಹೆಚ್.ಎಂ.ಮುರಳೀಧರ್ ಎಂಬುವರು ನೀಡಿದ ದೂರಿನ ಹಿನ್ನಲೆ ಜಿಲ್ಲಾಧಿಕಾರಿಗಳು ಅಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ
.
ಮೈಸೂರು ನಗರ ದಟ್ಟಗಳ್ಳಿ ಗ್ರಾಮ ಸರ್ವೆ ನಂ 27/1,27/2,27/3,27/4,29/1a,32,38/1,38/2,41/2 ರಲ್ಲಿ ಒಟ್ಟು 27 ಎಕ್ರೆ ಭೂಮಿಯನ್ನ ಕಬಳಿಸಲು ಸಂಚು ರೂಪಿಸಿರುವುದು ಇದೀಗ ಬಯಲಾಗಿದೆ.ಸದರಿ ಸ್ವತ್ತು ಮುಡಾಗೆ ಸೇರಿದ್ದು.21-3-2023 ರಂದು ಮುಡಾದಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಂಡಂತೆ ದಾಖಲೆಗಳನ್ನ ರೂಪಿಸಿ ಭೂಮಿಯನ್ನು ಲಪಟಾಯಿಸಲು ಸಂಚು ರೂಪಿಸಿದ ಮೂರನೇ ವ್ಯಕ್ತಿಗೆ
ನೆರವಾಗಲು ಉಚ್ಚನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಲಾಗಿದೆ.ವಸ್ತುಸ್ಥಿತಿ ಏನೆಂದರೆ 21-3-2023 ರಂದು ಯಾವುದೇ ಸಭೆ ನಡೆದಿಲ್ಲ.ಯಾವುದೇ ನಿರ್ಣಯ ಕೈಗೊಂಡಿಲ್ಲ.ಹೀಗಿದ್ದೂ ಪ್ರಾಧಿಕಾರದ ಸದಸ್ಯರ ಗಮನಕ್ಕೆ ತಾರದೆ ನಿರ್ಣಯಗಳನ್ನ ಉಚ್ಛ ನ್ಯಾಯಾಲಯಕ್ಕೆ ನಡವಳಿಯನ್ನ ಸಲ್ಲಿಸಲಾಗಿದೆ.ಉಚ್ಛ ನ್ಯಾಯಾಲಯಕ್ಕೆ ನಡವಳಿಯನ್ನ ಸಲ್ಲಿಸಲು ಕಾರಣವಾದರೂ ಏನು? ಅಂತಹ ಅನಿವಾರ್ಯತೆ ಏನಿತ್ತು..?ಯಾರ ಆದೇಶದ ಮೇರೆಗೆ ಸಲ್ಲಿಸಲಾಗಿದೆ..? ಸ್ಥಿರೀಕರಣವಾಗದ ನಡವಳಿಯನ್ನ ಯಾವ ಆಧಾರದ ಮೇಲೆ ಸಲ್ಲಿಸಲಾಗಿದೆ..? ಆಕ್ಷೇಪವೇನು..? ಸದರಿ ಆದೇಶ ಪ್ರಶ್ನಿಸಲಾಗಿದೆಯೇ ಎಂಬ ಪ್ತಶ್ನೆಗಳಿಗೆ ಸೂಕ್ತ ಉತ್ತರವಾಗಲಿ ದಾಖಲೆಗಳಾಗಲಿ ಇಲ್ಲ.ಭೂಗಳ್ಳರ ಜೊತೆ ಶಾಮೀಲಾಗಿರುವ ಅಧಿಕಾರಿಗಳು ಬೋಗಸ್ ಸಭೆಯನ್ನ ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.ಇವೆಲ್ಲಾ ಮಾಹಿತಿಗಳನ್ನ ಸಂಗ್ರಹಿಸಿರುವ ವಕೀಲರಾದ ಮುರಳೀಧರ್ ದಾಖಲೆ ಸಮೇತ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ವಕೀಲರ ದೂರನ್ನ ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಮುಡಾ ಆಯುಕ್ತರಿಗೆ ನೋಟೀಸ್ ಜಾರಿ ಮಾಡಿದ್ದಾರೆ.ವಕೀಲರ ದೂರಿನ ಅನ್ವಯದಂತೆ ಪ್ರಶ್ನಿಸಲಾದ ಅಂಶಗಳಿಗೆ ಮುಡಾ ಆಯುಕ್ತರು ಉತ್ತರಿಸಬೇಕಿದೆ…