ಖಾಸಗಿ ಬಸ್ ಹಾಗೂ ಇನೋವಾ ಕಾರ್ ಢಿಕ್ಕಿ…10 ಮಂದಿ ಸ್ಥಳದಲ್ಲೇ ಸಾವು…ಇಬ್ಬರು ಗಂಭೀರ…
- CrimeMysore
- May 29, 2023
- No Comment
- 76
ಟಿ.ನರಸೀಪುರ,ಮೇ29,Tv10 ಕನ್ನಡ
ಖಾಸಗಿ ಬಸ್ ಹಾಗೂ ಇನೋವಾ ಕಾರ್ ನಡುವೆ ನಡೆದ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಳ್ಳೆಗಾಲ- ಟಿ.ನರಸೀಪುರ ರಸ್ತೆಯ ಕುರುಬೂರು ಬಳಿ ನಡೆದಿದೆ.ಇನೋವಾ ಕಾರಿನಲ್ಲಿದ್ದ 11 ಮಂದಿ ಪೈಕಿ 10 ಮಂದಿ ಸ್ಥಳದಲ್ಲೇ
ಸಾವನ್ನಪ್ಪಿದ್ದಾರೆ.ಇನ್ನಿಬ್ಬರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ.ಇಬ್ಬರು ಬಾಲಕಿಯರು,ಓರ್ವ ಬಾಲಕ ಇಬ್ಬರು ಮಹಿಳೆಯರು ಹಾಗೂ 5 ಮಂದಿ ಪುರುಷರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಟಿ.ನರಸೀಪುರದಿಂದ ಕೊಳ್ಳೆಗಾಲಕ್ಕೆ ತೆರಳುತ್ತಿದ್ದ
ಎಸ್.ಎಮ್.ಆರ್.ಹೆಸರಿನ ಖಾಸಗಿ ಬಸ್ ಹಾಗೂ ಮಹದೇಶ್ವರ ಬೆಟ್ಟದಿಂದ ಮೈಸೂರಿನತ್ತ ಬರುತ್ತಿದ್ದ ಇನೋವಾ ಕಾರ್ ನಡುವೆ ಅಪಘಾತ ಸಂಭವಿಸಿದೆ.ಮೃತರು ಬಳ್ಳಾರಿ ಜಿಲ್ಲೆಯ ಸಂಗದಕಲ್ಲೂರು ನಿವಾಸಿಗಳೆಂದು ಹೇಳಲಾಗಿದೆ.ಸ್ಥಳಕ್ಕೆ ಟಿ.ನರಸೀಪುರ ಪೊಲೀಸರು ಭೇಟಿ ನೀಡಿ ಮತ್ತಷ್ಟು ಮಾಹಿತಿ ಪಡೆಯುತ್ತಿದ್ದಾರೆ…